Wednesday, January 22, 2025

ಸಚಿವ ಉಮೇಶ್ ಕತ್ತಿಗೆ ಸಿಎಂ ಅಂತಿಮ ನಮನ

ಬೆಂಗಳೂರು : ಕತ್ತಿ ಅವರ ತಂದೆ ಕೂಡ ಹೃದಯಾಘಾತಕ್ಕೆ ಬಲಿಯಾಗಿದ್ದರು ಎಂದು ಸಚಿವ ಉಮೇಶ್ ಕತ್ತಿ ನಿಧನಕ್ಕೆ ಸಿಎಂ ಬೊಮ್ಮಾಯಿ ಕಂಬನಿ ಮಿಡಿದಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ತಂದೆಗೆ ನಮ್ಮ ತಂದೆ ಜತೆ ಒಡನಾಟ ಇತ್ತು. ಕತ್ತಿ ಅವರ ತಂದೆ ಕೂಡ ಹೃದಯಾಘಾತಕ್ಕೆ ಬಲಿಯಾಗಿದ್ದರು. ಕತ್ತಿ ಶಾಸಕರಾಗಿ ರಾಜ್ಯದ ನಾಯಕರಾಗಿ ಹೊರಹೊಮ್ಮಿದರು. ರೈತರ ಹಿತ ಚಿಂತಕರಾಗಿ ಹಲವು ಕೆಲಸಗಳನ್ನು ಮಾಡಿದ್ದಾರೆ. ಹಲವು ಬಾರಿ ರಾಜ್ಯದ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ ಎಂದರು.

ಇನ್ನು, ಆಹಾರ ಸಚಿವರಾಗಿ ಜನಪರ ಸೇವೆ ಮಾಡಿದ್ದಾರೆ. ಪ್ರಾಂತ್ಯವಾರು ಪಡಿತರ ನೀಡಲು ಅವರು ಶ್ರಮಿಸಿದ್ದಾರೆ. ನೀರಾವರಿ ವಿಚಾರದಲ್ಲೂ ಅವರು ಪರಿಣಿತರಿದ್ದರು. ಘಟಪ್ರಭಾ ನೀರಾವರಿ ಯೋಜನೆ ಅನುಷ್ಠಾನ ಮಾಡಿದ್ದಾರೆ. ಅವರು ಹಿನ್ನೀರಿನ ಸ್ಥಳಗಳ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದರು. ವ್ಯಕ್ತಿಗತವಾಗಿ ಅವರು ಅಜಾತಶತ್ರು, ಹಸನ್ಮುಖಿಯಾಗಿದ್ದರು. ಉತ್ತರಕರ್ನಾಟಕದ ಬಗ್ಗೆ ವಿಶೇಷ ಕಳಕಳಿ ವಹಿಸಿದ್ದರು. ಅವರ ಸ್ನೇಹದ ಪ್ರೀತಿ ವಿಶ್ವಾಸ ಎಂದಿಗೂ ಅಜರಾಮರ. HDD, ನಾನು ಸೇರಿದಂತೆ ಪ್ರಮುಖರ ಜತೆ ಉತ್ತಮ ಬಾಂಧವ್ಯ ಹೊಂದಿದ್ದೆವು, ನಾವು ಒಟ್ಟಾಗಿ ಹಲವಾರು ಹೋರಾಟಗಳನ್ನು ಮಾಡಿದ್ದೇವೆ. ವ್ಯಯಕ್ತಿಕವಾಗಿ ನನಗೆ ತುಂಬಲಾರದ ನಷ್ಟವಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ಕೊಡಲಿ ಎಂದು ಹೇಳಿದರು.

RELATED ARTICLES

Related Articles

TRENDING ARTICLES