Thursday, January 23, 2025

ಸ್ನೇಹಿತನಿಗೆ ಚಾಕು ಇರಿದು ಹೆದರಿ ಮೂರನೇ ಅಂತಸ್ತಿನಿಂದ ಜಿಗಿದ ರೋಹಿತ್​

ಬೆಂಗಳೂರು: ಸ್ನೇಹಿತನಿಗೆ ಚಾಕು ಇರಿದು ನಂತರ ಭಯಪಟ್ಟು ಬಿಲ್ಡಿಂಗ್ ಮೇಲಿಂದ ಯುವಕ ಬಿದ್ದ ಘಟನೆ ಬೆಂಗಳೂರಿನ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಿನ್ನೆ ಕುಡಿದ ಮತ್ತಿನಲ್ಲಿ ರೋಹಿತ್ ತಮ್ಮ ರೂಮ್​ನ ಜತೆಗಾರ ಹೇಕಾ ಜೊತೆ ಗಲಾಟೆಗಿಳಿದಿದ್ದ, ಗಲಾಟೆ ಅತಿರೇಕಕ್ಕೆ ಹೋಗಿ ಕತ್ತರಿಯಿಂದ ಹೇಕಾ ಕಿಬ್ಬೊಟ್ಟೆಗೆ ರೋಹಿತ್​ ಇರಿದ್ದಾನೆ. ಹೇಕಾಗೆ ಗಾಯವಾಗ್ತಿದ್ದಂತೆ ಉಳಿದ ರೂಂಮೇಟ್ ಗಳು ಆತನ ಸಹಾಯಕ್ಕೆ ಬಂದಿದ್ದರು. ಈ ವೇಳೆ ಹೆದರಿ ರೋಹಿತ್ ರೂಂ ಬಾಗಿಲನ್ನ ಹಾಕಿ ಕಿಟಿಕಿಯ ಮುಖಾಂತರ ಜಂಪ್ ಮಾಡಿದ್ದಾನೆ.

ಮೂಲತಃ ನಾಗಾಲ್ಯಾಂಡ್ ಮೂಲದ ರೋಹಿತ್, ರೋಹಿತ್ ಹಾಗೂ ಸ್ನೇಹಿತರು ಪಾಟೀಲ್ ಲೇಔಟ್ ನ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದರು. ಕೋರಮಂಗಲದ ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಮೂರಂತಸ್ತಿನಿಂದ ಜಿಗಿದಿದ್ದ ರೋಹಿತ್, ಗಂಭೀರ ಗಾಯಗೊಂಡ ರೋಹಿತ್ಆ ಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES