Thursday, December 19, 2024

2ನೇ ಬಾರಿಗೆ ಬಿಜೆಪಿಯ ಜನೋತ್ಸವ ಕಾರ್ಯಕ್ರಮ ಮುಂದೂಡಿಕೆ

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಜನೋತ್ಸವ ಕಾರ್ಯಕ್ರಮವನ್ನ ರಾಜ್ಯ, ಕೇಂದ್ರ ನಾಯಕರ ಸಲಹೆಯಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಸೆ.11 ರಂದು ಭಾನುವಾರಕ್ಕೆ ಮುಂದೂಡಿಕೆ ಮಾಡಿದ್ದಾರೆ.

ನಾಳೆ ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಕಾರ್ಯಕ್ರಮವನ್ನ ಬಿಜೆಪಿ ಪಕ್ಷ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮಕ್ಕೆ ಕೇಂದ್ರದ ನಾಯಕರು ಆಗಮಿಸುತ್ತಿದ್ದರು. ಆದರೆ, ನಿನ್ನೆ ಸಚಿವ ಉಮೇಶ್​ ಕತ್ತಿ ನಿಧನದಿಂದ ಬಿಜೆಪಿ ಸರ್ಕಾರದ ಜನೋತ್ಸವನ್ನ ಈಗ ಎರಡನೇ ಬಾರಿಗೆ ಮುಂದೂಡಿಕೆ ಮಾಡಲಾಗಿದೆ.

ಇನ್ನು ಸಚಿವ ಉಮೇಶ್​ ಕತ್ತಿ ನಿಧನ ಹಿನ್ನಲೆಯಲ್ಲಿ 3 ದಿನ ರಾಜ್ಯದಲ್ಲಿ ಶೋಕಾಚರಣೆ, 3 ದಿನ ಯಾವುದೇ ಸರ್ಕಾರ ಕಾರ್ಯಕ್ರಮ ಇರುವುದಿಲ್ಲ. ತುರ್ತು ಪ್ರವಾಹ ಕಾರ್ಯಕ್ರಮ ಬಿಟ್ಟರೆ ಯಾವುದೇ ಕಾರ್ಯಕ್ರಮ ಇರುವುದಿಲ್ಲ ಎಂದು ಸಚಿವ ಸಂಪುಟ ಸಚಿವರು ಹೇಳಿದ್ದಾರೆ.

 

RELATED ARTICLES

Related Articles

TRENDING ARTICLES