Wednesday, January 22, 2025

BJP-JDS ಒಳ ಒಪ್ಪಂದವಾದ್ರೂ ದಳಪತಿಗಳಿಗೆ ಬಿಗ್‌ ಶಾಕ್‌!

ಮೈಸೂರು:  ಮಹಾನಗರ ಪಾಲಿಕೆಯ ನಾಲ್ಕನೇ ಅವಧಿಗೆ ಮೇಯರ್ ಯಾರಾಗ್ತಾರೆ ಎಂಬ ಕೂತುಹಲಕ್ಕೆ ತೆರೆ ಬಿದಿದ್ದೆ. ಪಾಲಿಕೆ ಅಂಗಳದಲ್ಲಿ ರಾಜಕಾರಣವನ್ನೇ ಚೆಂಡು ಮಾಡಿಕೊಂಡಿದ್ದ ಮೂರು ಪಕ್ಷಗಳು ಫುಟ್‌ಬಾಲ್ ಆಟ ಆಡಿದ್ದು ಮಾತ್ರ ಅಚ್ಚರಿ ಎನ್ನಿಸಿತ್ತು. ಕೊನೆ ಕ್ಷಣದವರೆಗೂ ಗೋಲ್ ಯಾರ್ ಹೊಡೀತಾರೆ ಎಂಬುದು ಕೂತುಹಲ‌ ಮೂಡಿಸಿತ್ತು. ಒಂದೆಡೆ ಜೆಡಿಎಸ್ – ಬಿಜೆಪಿ, ಮತ್ತೊಂದೆಡೆ ಜೆಡಿಎಸ್- ಕಾಂಗ್ರೆಸ್ ಮೈತ್ರಿಯಾಗುತ್ತವೆ ಎಂಬ ಸುದ್ದಿ ಪಾಲಿಕೆ ಅಂಗಳದಲ್ಲಿ ಜೋರಾಗಿಯೇ ಇತ್ತು. ಆದ್ರೆ, ಚುನಾವಣೆ ಆರಂಭವಾಗುತ್ತಿದಂತೆ ಜೆಡಿಎಸ್ ಪಕ್ಷದವರು ಬಿಜೆಪಿಗೆ ಬೆಂಬಲ ಸೂಚಿಸುವ ಮೂಲಕ ಗೊಂದಲಗಳಿಗೆ ತೆರೆ ಎಳೆದು ಬಿಜೆಪಿಗೆ ಮೇಯರ್ ಹುದ್ದೆ ಅಲಂಕರಿಸಲು ಅನುವು ಮಾಡಿಕೊಟ್ರು.

ಇದಾದ ಬಳಿಕ ನಾಟಕೀಯ ಬೆಳವಣಿಗೆಗಳೇ ನಡೆದ್ವು. ಉಪಮೇಯರ್ ಸ್ಥಾನಕ್ಕೆ ಕೈ ಎತ್ತುವ ಸಂದರ್ಭಕ್ಕೂ ಮುನ್ನ ಪ್ರಾದೇಶಿಕ ಆಯುಕ್ತರು ಕೊಟ್ಟ ಶಾಕ್‌ಗೆ ಜೆಡಿಎಸ್ ಸದಸ್ಯರು ಮಂಕಾದ್ರು. ಉಪಮೇಯರ್ ಅಭ್ಯರ್ಥಿ ರೇಷ್ಮಭಾನು ಬಿಸಿಎ ಸರ್ಟಿಫಿಕೇಟ್ ಹಾಕದ ಕಾರಣ ನಾಮಪತ್ರ ಊರ್ಜಿತ ಅಲ್ಲ ಎಂದು ಪ್ರಾದೇಶಿಕ ಆಯುಕ್ತ ಪ್ರಕಾಶ್ ಜೆಡಿಎಸ್ ಸದಸ್ಯರಿಗೆ ಶಾಕ್ ನೀಡಿದ್ರು. ಪರಿಣಾಮ ಕೆಲ ಕಾಲ ಪಾಲಿಕೆ ಅಂಗಳದಲ್ಲಿ ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು. ನಂತರ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ನಾಯಕರು‌ ಬಿಜೆಪಿ ಸದಸ್ಯರನ್ನ ಲೇವಡಿ ಮಾಡಿದ್ರು. ಆದ್ರೆ, ಅನಿರ್ವಾಯ ಸ್ಥಿತಿಯಲ್ಲಿದ್ದ ಜೆಡಿಎಸ್ ಏನು ಮಾಡಬೇಕೆಂದು ದೋಚದೆ ಕೈಚೆಲ್ಲಿ ಬಿಜೆಪಿಯ ಉಪಮೇಯರ್ ಅಭ್ಯರ್ಥಿಯನ್ನ ಬೆಂಬಲಿಸಿತು.

ಒಟ್ಟು 76 ಮತದಾರರು ಹಾಜರಿದ್ರು. ಈ ಪೈಕಿ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಗೆ 47 ಮತಗಳು ಚಲಾವಣೆಯಾದವು. ಉಪಮೇಯರ್‌ಗೆ 46 ಮತಗಳು ಚಲಾವಣೆಯಾದವು. ಆ ಮೂಲಕ ಮೇಯರ್ ಹಾಗೂ ಉಪಮೇಯರ್ ಹುದ್ದೆ ಎರಡೂ ಹುದ್ದೆ ಬಿಜೆಪಿಗೆ ದೊರಕಿತು.

ನಾವು ಜೆಡಿಎಸ್ ಜೊತೆ ಮಾತುಕತೆಯನ್ನೇ ಮಾಡಿಲ್ಲ. ನಮಗೆ ಸ್ಪಷ್ಟ ಬಹುಮತ ಇದ್ದ ಕಾರಣ ಅಧಿಕಾರದ ಚುಕ್ಕಾಣಿ ಹಿಡಿದಿದ್ದೇವೆ ಎನ್ನುತ್ತಾರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್.

ಒಟ್ಟಾರೆ ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭ ಎಂಬಂತೆ ಆಯ್ತು ಮೈಸೂರು ಮಹಾನಗರ ಪಾಲಿಕೆ ಚುನಾವಣೆಯ ರಿಸಲ್ಟ್‌.. ಕಾಂಗ್ರೆಸ್ – ಜೆಡಿಎಸ್ ತಿಕ್ಕಾಟ ಇತಿಹಾಸದಲ್ಲೇ ಬಿಜೆಪಿ ಮೊದಲ ಬಾರಿಗೆ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಗದ್ದುಗೆಯನ್ನ ಹಿಡಿಯುವಂತಾಯ್ತು.

ಸುರೇಶ್ ಬಿ ಪವರ್ ಟಿವಿ ಮೈಸೂರು.

RELATED ARTICLES

Related Articles

TRENDING ARTICLES