Monday, December 23, 2024

ಕೇಸರಿ MLAಗೆ ಕಂಟಕವಾಗುತ್ತಾ 15 ಲಕ್ಷ ಡೀಲ್ ಆರೋಪ..?

ಕೊಪ್ಪಳ : ಪಿಎಸ್‌ಐ ಅಕ್ರಮ ನೇಮಕಾತಿಗೆ ಸಂಬಂಧಿಸಿ ಹಣದ ಮಾತುಕತೆಯ ಆಡಿಯೋ ವೈರಲ್‌ ಆದ ಬೆನ್ನಲ್ಲೇ ಆಡಿಯೋದಲ್ಲಿರುವುದು ನಾನೇ ಅಂತಾ ಬಸವರಾಜ್ ಒಪ್ಪಿಕೊಂಡಿದ್ದಾರೆ. ಹಿನ್ನೆಲೆಯಲ್ಲಿ ಕನಕಗಿರಿ ಶಾಸಕ ಬಸವರಾಜ್ ದಡೇಸುಗೂರ್ ಬಂಧನಕ್ಕೆ ಆಗ್ರಹಿಸಿ ಕೈ ಪಡೆ ಬೀದಿಗಿಳಿದಿದೆ. ಈ ಭಾರೀ ಬೆಳವಣಿಗೆ ಮಧ್ಯೆಯೇ ಶಾಸಕರ ಆಪ್ತ, 15 ಲಕ್ಷ ಡೀಲ್ ಮಾಡಿದ್ದರು ಎನ್ನಲಾದ ಆಡಿಯೋದಲ್ಲಿರುವ ಪರಸಪ್ಪ ದಿಢೀರ್ ಸುದ್ದಿಗೋಷ್ಠಿ ನಡೆಸಿ ಪ್ರಕರಣವನ್ನು ಬುಡಮೇಲು ಮಾಡುವಂಥಾ ಹೇಳಿಕೆ ಕೊಟ್ಟಿದ್ದಾರೆ.

ಇನ್ನು ಆಡಿಯೋದಲ್ಲಿರುವುದು ನಾನೇ ಎಂದು ಹೇಳಿರುವ ಶಾಸಕರು, ಪರಸಪ್ಪನನ್ನು ಬೆದರಿಸಿ ಉಲ್ಟಾ ಹೇಳಿಕೆ ಕೊಡಿಸಿದ್ದಾರೆಂದು ಕಾಂಗ್ರೆಸ್‌ ಆರೋಪಿಸಿದೆ.

ಇನ್ನೂ ಕಾರಟಗಿಯಲ್ಲಿ ಶಾಸಕ ಬಸವರಾಜ್ ದಢೇಸೂಗೂರು ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನೆಡಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದೆ. ಪಿಎಸ್ಐ ನೇಮಕಾತಿಗೆ ಸಂಬಂಧಿಸಿ ಶಾಸಕರು ಲಂಚ ಪಡೆದಿದ್ದು ಬಹಿರಂಗವಾಗಿದೆ.ಈ ಬಗ್ಗೆ ಸಿಬಿಐ ತನಿಖೆ ನೆಡಸಿ ಶಾಸಕನ‌ ಸದಸ್ಯತ್ವ ರದ್ದುಪಡಿಸುವ ಜತೆಗೆ ಬಸವರಾಜ್ ದಢೇಸುಗೂರು ಅವರನ್ನು ಬಂಧಿಸಬೆಕೇಂದು ಒತ್ತಾಯಿಸಿದರು.

ಒಟ್ಟಾರೆ ಕನಕಗಿರಿ ಬಿಜೆಪಿ ಶಾಸಕನ ಆಡಿಯೋ ವೈರಲ್ ಆಗಿದ್ದು, ರಾಜ್ಯವನ್ನೇ ಬೆಚ್ವಿ ಬೀಳಿಸಿದೆ. ಸರ್ಕಾರ ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತೋ ಕಾದು ನೋಡಬೇಕಿದೆ.

ಶುಕ್ರಾಜಕುಮಾರ್ ಪವರ್ ಟಿವಿ ಕೊಪ್ಪಳ

RELATED ARTICLES

Related Articles

TRENDING ARTICLES