Wednesday, January 22, 2025

ಪ್ರೀತಿಸಿ ಮದ್ವೆಯಾದ ಪ್ರೇಮಿಗಳಿಗೆ ಪೋಷಕರೇ ವಿಲನ್..!

ಕಲಬುರಗಿ : ಇವರಿಬ್ಬರೂ ಕಲಬುರಗಿಯ ಸಚಿನ್ ಮತ್ತು ಸೇಡಂನ ಸಹನಾ. ಕಲಬುರಗಿಯ ಖಾಸಗಿ ಕಾಲೇಜಿನಲ್ಲಿ ಬಿಎಸ್​ಸಿ ಸೆಕೆಂಡ್ ಸೆಮಿಸ್ಟರ್ ಓದುತ್ತಿದ್ದ ಸಹನಾ ಮತ್ತು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಬಳಿ ಕೆಲಸ ಮಾಡ್ತಿದ್ದ ಸಚಿನ್​ ಮಧ್ಯೆ ಸ್ನೇಹ ಬೆಳೆದು ಪ್ರೇಮಕ್ಕೆ ತಿರುಗಿತ್ತು. ಜಾತಿ ಬೇರೆ ಬೇರೆಯಾದರೂ ಪ್ರೀತಿ ಮಾಡ್ತಿದ್ರು. ಈ ವಿಷ್ಯ ಸಹನಾ ತಂದೆ ತಾಯಿಗೆ ಗೊತ್ತಾಗಿ ಬುದ್ದಿವಾದ ಹೇಳಿದ್ದಾರೆ. ಆದ್ರೂ ತಲೆಕೆಡಿಸಿಕೊಳ್ಳದ ಯುವಜೋಡಿ ಕಲಬುರಗಿಯ ರಾಮತೀರ್ಥ ದೇಗುಲದಲ್ಲಿ ಸಾಂಪ್ರದಾಯಿಕವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೂ ಇನ್ನೂ ನಮ್ಮ ಪೋಷಕರಿಂದ ಜೀವ ಬೆದರಿಕೆ ಇದೆ. ನಮ್ಮನ್ನು ಕಾಪಾಡಿ ಎನ್ನುತ್ತಿದ್ದಾರೆ ಸಹನಾ.

ಇನ್ನೂ ತಮ್ಮ ಮಗಳು ಬೇರೊಂದು ಜಾತಿ ಹುಡುಗನ ಜೊತೆ ಮದ್ವೆಯಾಗಿದ್ದಕ್ಕೆ ಸಹನಾಳ ಪೋಷಕರು ಕೊತಕೊತ ಕುದಿಯುತ್ತಿದ್ದಾರೆ. ಇತ್ತ ತಮ್ಮ ಮಗಳು ನಗರದ ವಿ.ಜಿ ವುಮೆನ್ಸ್ ಕಾಲೇಜಿನಿಂದ ಮಿಸ್ಸಿಂಗ್ ಆಗಿದ್ದಾಳೆಂದು ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರೆ, ಅತ್ತ ಬಸವನಬಾಗೇವಾಡಿಯಿಂದ ನಮ್ಮ ಮಗಳನ್ನ ಸಚಿನ್ ಕಿಡ್ನ್ಯಾಪ್ ಮಾಡಿದ್ದಾನೆಂದು ಬಸವನಬಾಗೆವಾಡಿ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದ್ದಾರೆ. FIR ದಾಖಲಾಗ್ತಿದ್ದಂಗೆ ಪೊಲೀಸರು, ಸಚಿನ್ ಮತ್ತು ಸಹಾನಳಿಗೆ ಕರೆ ಮಾಡಿ, ನೀವು ವಾಪಸ್ ಬನ್ನಿ ನಾವು ಸಂಧಾನ ಮಾಡ್ತೀವಿ ಎಂದಿದ್ದಾರೆ. ಆದರೆ ಇತ್ತ ಸಹನಾಳ ಪೋಷಕರಿಂದ ಜೀವ ಬೆದರಿಕೆ ಇದ್ದು, ನಮಗೆ ರಕ್ಷಣೆ ನೀಡಬೇಕೆಂದು ಕಲಬುರಗಿ ನಗರ ಪೊಲೀಸ್ ಆಯುಕ್ತರನ್ನ ಭೇಟಿಯಾಗಿ ಮನವಿ ಮಾಡಿದ್ದಾರೆ.

ಅದೇನೇ ಇರಲಿ ಜಾತಿ ಬೇರೆ ಬೇರೆಯಾದರೂ ಪರಸ್ಪರ ಇಷ್ಟಪಟ್ಟು ಮದ್ವೆಯಾದ ಜೋಡಿಹಕ್ಕಿಗಳಿಗೆ ಪೋಷಕರಿಂದಲೇ ಜೀವಬೆದರಿಕೆ ಇದ್ದು. ಇದೀಗ ಪೊಲೀಸರ ಮಧ್ಯಸ್ಥಿಕೆಯಿಂದ ಪ್ರೇಮಿಗಳು ಪೋಷಕರ ಮಧ್ಯೆ ಸಂಧಾನವಾಗಿ ಸಮಸ್ಯೆ ಬಗೆಹರಿಸಬೇಕಿದೆ.

ಅನಿಲ್‌ಸ್ವಾಮಿ ಪವರ್ ಟಿವಿ ಕಲಬುರಗಿ

RELATED ARTICLES

Related Articles

TRENDING ARTICLES