Wednesday, January 22, 2025

ಉಪ್ಪಿ- ಕಿಚ್ಚನ ಕಬ್ಜ ಕ್ಲೈಮ್ಯಾಕ್ಸ್​​ಗೆ ಶಿವಣ್ಣ.. ರೋಲೆಕ್ಸ್ ರಂಗು..?

ವರ್ಲ್ಡ್​ ವೈಡ್​ ಗ್ಯಾಂಗ್​ಸ್ಟಾರ್​ ರೋಲ್​​ನಲ್ಲಿ ಉಪ್ಪಿ ಹಾಗೂ ಪೊಲೀಸ್​ ಕಾಪ್​​ ಅವತಾರದಲ್ಲಿ ಕಿಚ್ಚ ಸದ್ಯದಲ್ಲೇ ಅಬ್ಬರಿಸಲಿದ್ದಾರೆ. ಯೆಸ್​​.. ಕಬ್ಜ ಸಿನಿಮಾ ಈ ಹೊಸ ಇತಿಹಾಸಕ್ಕೆ ಮುನ್ನುಡಿ ಬರೆಯಲಿದೆ. ಗ್ಯಾಂಗ್​ಸ್ಟಾರ್​​ಗಳ ರಣ ರೋಚಕ ಕಾಳಗದಲ್ಲಿ ವಿಕ್ರಮ್​ ಸಿನಿಮಾ ಫ್ಲೇವರ್ ಕೂಡ​​ ಇರಲಿದೆ. ಕಬ್ಜ ಕ್ಲೈಮ್ಯಾಕ್ಸ್​​ಗೆ ರೊಲೆಕ್ಸ್​ ಗೆಟಪ್​​ನಲ್ಲಿ ಎಂಟ್ರಿ ಕೊಡ್ತಾರೆ ಕನ್ನಡದ ಸೂಪರ್ ಸ್ಟಾರ್​​​​. ಯಾರು ಆ ನಟ ಅಂತೀರಾ..? ನೀವೇ ಓದಿ.

  • ಹೈ ವೋಲ್ಟೇಜ್​ ಸಿನಿಮಾದಲ್ಲಿ  ಶಿವಣ್ಣನ ಮಾಸ್​ ಲುಕ್​​​​..!

ಇಂದಿಗೆ ಕನ್ನಡದ ಸಿನಿಮಾಗಳು ಕೇವಲ ಸಿನಿಮಾಗಳಾಗಿ ಉಳಿದಿಲ್ಲ. ಪರಭಾಷಾ ಸಿನಿಮಾಗಳಿಗೆ ಮಾದರಿಯಾಗಿ ಸದ್ದು ಮಾಡ್ತಿವೆ. ಇದೀಗ ಆರ್​. ಚಂದ್ರು ಸಾರಥ್ಯದಲ್ಲಿ ಕಬ್ಜ ಸಿನಿಮಾ ಕೋಟಿ ಕೋಟಿ ವೆಚ್ಚದಲ್ಲಿ  ಸಿದ್ಧವಾಗ್ತಿದೆ. ಗ್ಯಾಂಗ್​ವಾರ್​, ಮಿಲಿಟರಿ ವಾರ್​, ಪೊಲೀಸ್​ ವಾರ್​​ ಘರ್ಜನೆ ದುಪ್ಪಟ್ಟಾಗಿರಲಿದೆ. ಸ್ಯಾಂಡಲ್​ವುಡ್​ ಬಾದ್​​ಷಾ ಕಿಚ್ಚ, ರಿಯಲ್​ ಸ್ಟಾರ್​ ಉಪ್ಪಿ ಕಾಂಬೋದಲ್ಲಿ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಮೂಡಿಸಿದೆ. ಇದೀಗ ಈ ಚಿತ್ರದ ಕ್ಲೈಮ್ಯಾಕ್ಸ್​ಗೆ​​​ ಮೆಗಾ ಪ್ಲಾನ್​ ಮಾಡಿಕೊಂಡಿದೆ ಚಿತ್ರತಂಡ. ಹ್ಯಾಟ್ರಿಕ್​ ಹೀರೋ ಶಿವಣ್ಣ ರೋಲೆಕ್ಸ್​ ಗೆಟಪ್​​​ನಲ್ಲಿ ಎಂಟ್ರಿ ಕೊಡ್ತಾರಂತೆ.

ಕಬ್ಜ ಚಿತ್ರದಲ್ಲಿ ಅಂಡರ್​​ವರ್ಲ್ಡ್​​ ಅನ್​​ಬೀಟೆಬಲ್​ ಕಥೆಯನ್ನು ಏಳು ಭಾಷೆಗಳಲ್ಲಿ ತೆರೆಗೆ ತರಲಾಗ್ತಿದೆ. ನೆಕ್ಸ್ಟ್​ ಲೆವೆಲ್​ ಆ್ಯಕ್ಷನ್​ ಸೀಕ್ವೆನ್ಸ್​ ಸಿನಿಮಾದಲ್ಲಿ ಇರಲಿದ್ದು, ಅದ್ಧೂರಿ ಸೆಟ್​ಗಳೊಂದಿಗೆ ರೆಟ್ರೋ ಸ್ಟೈಲ್​ನಲ್ಲಿ ಚಿತ್ರದ ಮೇಕಿಂಗ್​ ನಡೀತಿದೆ. ಇನ್ನೂ ಸೂಪರ್ ಸ್ಟಾರ್​ ಕಮಲ್​ ಹಾಸನ್​ ಅಭಿನಯದ ವಿಕ್ರಮ್ ಸಿನಿಮಾದ ಕ್ಲೈಮ್ಯಾಕ್ಸ್​ ಎಲ್ಲರಿಗೂ ನೆನಪಿದೆ. ರೋಲೆಕ್ಸ್​ ರೋಲ್​ನಲ್ಲಿ ರಗಡ್​ ಎಂಟ್ರಿ ಕೊಟ್ಟಿದ್ದ ವಿಕ್ರಮ್​ ಪ್ರೆಕ್ಷಕರನ್ನು ರೋಮಾಂಚನಗೊಳಿಸಿದ್ದರು. ಇದೀಗ ಕಬ್ಜ ಚಿತ್ರದಲ್ಲೂ ರೋಲೆಕ್ಸ್​ ಸ್ಟೈಲ್​ನಲ್ಲಿ ಸೆಂಚುರಿ ಸ್ಟಾರ್​ ಶಿವಣ್ಣ ಎಂಟ್ರಿ ಕೊಡಲಿದ್ದಾರಂತೆ.

  • ಕಬ್ಜ ಸೀಕ್ವೆಲ್​ ಚಿತ್ರದಲ್ಲಿ ಹ್ಯಾಟ್ರಿಕ್​ ಹೀರೋ ಶಿವಣ್ಣ ಮಿಂಚು
  • ಹಾಲಿವುಡ್​​ ರೇಂಜ್​ನಲ್ಲಿ ರೌಡಿಸಂ ಕರಾಳ ರೌದ್ರನರ್ತನ

ಕಮಲ್​ ಹಾಸನ್​ ಸಿನಿಕರಿಯರ್​ನಲ್ಲಿ ದಾಖಲೆ ಬರೆದ ಸಿನಿಮಾ ವಿಕ್ರಮ್​. 400 ಕೋಟಿ ಬಾಕ್ಸ್ ಆಫೀಸ್​ ಕೆಲೆಕ್ಷನ್​ ದೋಚಿದ ಸೂಪರ್​ ಹಿಟ್​ ಸಿನಿಮಾ ವಿಕ್ರಮ್​. ಆರು ನಿಮಿಷಗಳ ಕಾಲ ಕಾಣಿಸಿಕೊಳ್ಳೋ ರೋಲೆಕ್ಸ್ ಪಾತ್ರ ವಿಕ್ರಮ್​ ಚಿತ್ರದ ಸಕ್ಸಸ್​​ಗೆ ಸಖತ್​ ಇಂಪ್ಯಾಕ್ಟ್​ ಮಾಡಿತ್ತು. ಸಿನಿಮಾ ನೋಡಿ ಹೊರ ಬಂದ ಮೇಲೂ ಈ ಪಾತ್ರ ಎಲ್ಲರಿಗೂ ಕಾಡಿತ್ತು. ಈ ಪಾತ್ರ ಸೀಕ್ವೆಲ್​​​ಗೂ ಕಥೆಗೂ ಸಹಕಾರಿಯಾಗಿದೆ. ಇದೀಗ, ಕಬ್ಜ ಸಿನಿಮಾದ ಕ್ಲೈಮ್ಯಾಕ್ಸ್​​​​ಗೆ ಶಿವಣ್ಣನ ಖದರ್​ ಎಂಟ್ರಿ ಇರಲಿದೆಯಂತೆ. ಈ ಪಾತ್ರದ ಮೂಲಕ ಕಬ್ಜ ಸಿನಿಮಾದ ಸೀಕ್ವೆಲ್​​​ನಲ್ಲಿ ಶಿವಣ್ಣ ಕಮಾಲ್​ ಮಾಡ್ತಾರೆ ಅನ್ನೋ ಸುದ್ದಿ ಎಲ್ಲಾ ಕಡೆ ಹರಿದಾಡ್ತಿದೆ.

ಅಂತೂ ಗ್ಲೋಬಲ್​ ಲೆವೆಲ್​ನಲ್ಲಿ ಅಬ್ಬರಿಸಿ ಬೊಬ್ಬಿರಿಯೋಕೆ ಸಕಲ ತಯಾರಿಯನ್ನು ಮಾಡಿಕೊಳ್ತಿದೆ ಕಬ್ಜ ಚಿತ್ರತಂಡ. ಹಾಗಾಗಿ ಕಥೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿ ಕ್ಲೈಮ್ಯಾಕ್ಸ್​ನಲ್ಲಿ ಮಾಸ್​ ಗಟಪ್​ನಲ್ಲಿ ಶಿವಣ್ಣನನ್ನು ಪಿಚ್​​ಗೆ ಇಳಿಸೋ ಪ್ಲಾನ್​ ಮಾಡಿಕೊಂಡಿದೆ. ಹಣದ ವಿಚಾರದಲ್ಲಿ ಎಲ್ಲೂ ಕಾಂಪ್ರಮೈಸ್​ ಆಗದೆ ಸಿನಿಮಾ ನಿರ್ಮಾಣ ಮಾಡಲಾಗ್ತಿದೆ. ಆರ್​. ಚಂದ್ರಶೇಖರ್​ ಕೋಟಿ ಕೋಟಿ ಹಣವನ್ನು ನೀರಿನಂತೆ ಸುರಿದು ಅದ್ದೂರಿಯಾಗಿ ನಿರ್ಮಾಣ ಮಾಡ್ತಿದ್ದಾರೆ.

ಚಿತ್ರದಲ್ಲಿ ಬಾಲಿವುಡ್​​ನ ಡ್ಯಾನಿಶ್ ಅಖ್ತರ್​, ನವಾಬ್​ ಶಾ, ಶ್ರೇಯಾ ಶರಣ್​ ಕಾಣಿಸಿಕೊಳ್ತಿದ್ದಾರೆ. ಲಕ್ಷ ಲಕ್ಷ ವೆಚ್ಚದಲ್ಲಿ ಶ್ರೇಯಾ ಶರಣ್​​ ಕಾಸ್ಟ್ಯುಮ್​ ತೊಟ್ಟಿದ್ದು, ಆಭರಣಕ್ಕಾಗಿಯೇ ಕೋಟಿ ಕೋಟಿ ಹಣ ಸುರಿಯಲಾಗಿದೆ. ರವಿವರ್ಮಾ ಸಾಹಸ ನಿರ್ದೇಶನವಿದೆ. ಕಬ್ಜ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಸಂಯೋಜಿಸ್ತಿದ್ರೆ, ಎ.ಜೆ ಶೆಟ್ಟಿ ಛಾಯಾಗ್ರಹಣ ಮಾಡ್ತಿದ್ದಾರೆ. ದಸರಾ ಹಬ್ಬಕ್ಕೆ ಸಿನಿಮಾ ರಿಲೀಸ್​ಗೆ ಚಿತ್ರತಂಡ ಪ್ಲಾನ್​ ಮಾಡಿಕೊಂಡಿದೆ. ಒಟ್ಟಾರೆ ಪ್ಯಾನ್​ ವರ್ಲ್ಡ್​ ಲೆವೆಲ್​ನಲ್ಲಿ ಕಬ್ಜ ಸಿನಿಮಾ ತೆರೆ ಕಾಣಲಿದ್ದು, ಶಿವಣ್ಣ ಕೂಡ ಸಿನಿಮಾದಲ್ಲಿ ಇರಲಿದ್ದಾರೆ ಅನ್ನೋ ಸುದ್ದಿ, ಚಿತ್ರದ ಪ್ರಚಾರಕ್ಕೆ ಕಿಕ್​ಸ್ಟಾರ್ಟ್​ ಕೊಟ್ಟಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES