Friday, December 27, 2024

ಯಾವುದೇ ಪಕ್ಷಕ್ಕೆ ಸೇರಿದರೂ ಗೆಲುವು ಅವರ ಕಟ್ಟಿಟ್ಟ ಬುದ್ದಿ : ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ : ಸಚಿವ ಉಮೇಶ್ ಕತ್ತಿ ಅವರು ಇನ್ನಿಲ್ಲ ಎಂಬುವ ಸುದ್ದಿ ಕೇಳಿ ತುಂಬಾ ಆಘಾತವಾಯ್ತು ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಪಕ್ಷಕ್ಕೆ ಸೇರಿದರೂ ಗೆಲುವು ಅವರ ಕಟ್ಟಿಟ್ಟ ಬುದ್ದಿ. ಸಚಿವರಾಗಿ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದರು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು ಅಂತಾ ಆಗಾಗ್ಗೆ ಹೇಳುತ್ತಿದ್ದರು. ಉತ್ತರ ಕರ್ನಾಟಕ ಇನ್ನು ಅಭಿವೃದ್ಧಿ ಆಗಿಲ್ಲ. ಹೀಗಾಗಿ ಪ್ರತ್ಯೇಕ ರಾಜ್ಯ ಆಗಬೇಕು ಎನ್ನುತ್ತಿದ್ದರು ಎಂದರು.

ಇನ್ನು, ಆ ಭಾಗದ ಜ‌ನ ಮೂಲಭೂತ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂಬ ನೋವು ತೋಡಿಕೊಂಡಿದ್ದರು. ಬಹಳ ಸಜ್ಜನ, ಸರಳ ವ್ಯಕ್ತಿತ್ವದ ವ್ಯಕ್ತಿ. ಅಂತಹ ವ್ಯಕ್ತಿ ಕಳೆದುಕೊಂಡಿರುವುದು ಎಲ್ಲರಿಗೂ ನೋವು ತರಿಸಿದೆ. ಉಮೇಶ್ ಕತ್ತಿ ಆತ್ಮಕ್ಕೆ ಶಾಂತಿ ಸಿಗಲಿ ಅಂತಾ ಭಗವಂತನಲ್ಲಿ‌ ಪ್ರಾರ್ಥನೆ ಮಾಡ್ತೇನೆ. ಬಿಜೆಪಿ ಅಧಿಕಾರಕ್ಕೆ ಬರಲು ಅವರ ಸಿಂಹಪಾಲು ಸಹ ಇದೆ. ಸದಾ ಅಭಿವೃದ್ಧಿಯ ಕಡೆಗೆ ಯೋಚನೆ ಮಾಡ್ತಿದ್ದರು ಎಂದು ಹೇಳಿದರು.

RELATED ARTICLES

Related Articles

TRENDING ARTICLES