Friday, September 20, 2024

ಭಾರತ-ಬಾಂಗ್ಲಾದೇಶ ನಡುವಿನ ಹಲವು ಒಪ್ಪಂದಕ್ಕೆ ಸಹಿ

ನವದೆಹಲಿ: ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ​ ಅವರು ಉಭಯ ದೇಶಗಳ ನಡುವೆ ರಕ್ಷಣಾ ಸಂಬಂಧ ಸಹಿ ಹಾಕಲಾಯಿತು.

ಭದ್ರತಾ ಸಹಕಾರ, ರಕ್ಷಣೆ, ಗಡಿ ನಿರ್ವಹಣೆ, ವ್ಯಾಪಾರ ಮತ್ತು ಸಂಪರ್ಕ, ಜಲ ಸಂಪನ್ಮೂಲಗಳು, ವಿದ್ಯುತ್ ಮತ್ತು ಇಂಧನ, ಅಭಿವೃದ್ಧಿ ಸಹಕಾರ, ಸಾಂಸ್ಕೃತಿಕ ಸೇರಿದಂತೆ ಇನ್ನೀತರ ದ್ವಿಪಕ್ಷೀಯ ಮಾತುಕತೆ ನಡೆಸಲಾಯಿತು.

ಭಾರತವು-ಬಾಂಗ್ಲಾದೇಶದ ದ್ವಿಪಕ್ಷೀಯ ಸಂಬಂಧಗಳಿಗೆ ಹೆಚ್ಚಿನ ವೇಗವನ್ನು ನೀಡುವುದನ್ನು ಮುಂದುವರಿಸಲಾಗಿದೆ. ಮೋದಿ ಅವರ ದೂರದೃಷ್ಟಿಯ ನಾಯಕತ್ವವನ್ನು ನಾನು ಪ್ರಶಂಸಿಸುತ್ತೇನೆ. ಭಾರತವು ಬಾಂಗ್ಲಾದೇಶದ ಅತ್ಯಂತ ಪ್ರಮುಖ ಮತ್ತು ಹತ್ತಿರದ ನೆರೆಯ ರಾಷ್ಟ್ರವಾಗಿದೆ.

ಭಾರತ-ಬಾಂಗ್ಲಾದೇಶ ದ್ವಿಪಕ್ಷೀಯ ಸಂಬಂಧಗಳು ನೆರೆಹೊರೆಯ ರಾಜತಾಂತ್ರಿಕತೆಗೆ ಮಾದರಿಯಾಗಲಿದೆ ಎಂದು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಹೇಳಿದರು.

ಹಸೀನಾ ಅವರ ಮಾರ್ಗದರ್ಶನದಲ್ಲಿ ಬಾಂಗ್ಲಾದೇಶವು ತ್ವರಿತ ಅಭಿವೃದ್ಧಿಯನ್ನು ಕಂಡಿದೆ. ಇದು ಈ ಪ್ರದೇಶದಲ್ಲಿ ನಮ್ಮ ಅತಿದೊಡ್ಡ ವ್ಯಾಪಾರ ಪಾಲುದಾರ ಮತ್ತು ನಾವು ಬಲವಾದ ಸಾಂಸ್ಕೃತಿಕ ಸಂಬಂಧಗಳನ್ನು ಹಂಚಿಕೊಳ್ಳುತ್ತೇವೆ ಎಂದು ಪ್ರಧಾನಿ ಮೋದಿ ಈ ವೇಳೆ ಹೇಳಿದರು.

RELATED ARTICLES

Related Articles

TRENDING ARTICLES