Monday, December 23, 2024

ವಿಧಾನಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ..!

ಬೆಂಗಳೂರು : ರಾಜ್ಯ ಕೇಸರಿ ಬ್ರಿಗೇಡ್ ರಾಜ್ಯ ಪ್ರವಾಸಕ್ಕೆ ಭರ್ಜರಿ ತಯಾರಿ ನಡೆಸಿದೆ. ಕಟೀಲ್, ಯಡಿಯೂರಪ್ಪ, ಸಿಎಂ ಬೊಮ್ಮಾಯಿ ನೇತೃತ್ವದ ತಂಡಗಳನ್ನೂ ರಚನೆ ಮಾಡಲಾಗಿದೆ. ಮತದಾರರನ್ನ ಸೆಳೆಯೋಕೆ ಎಸ್ಸಿ, ಎಸ್ಟಿ, ಒಬಿಸಿ ಸಮಾವೇಶಗಳನ್ನ ಆಯೋಜಿಸೋಕು ಹೊರಟಿದೆ. ಈ ಮೂಲಕ ಜನಸಾಮಾನ್ಯರನ್ನ  ತಲುಪುವ ಗುರಿಯನ್ನ ಇಟ್ಕೊಂಡಿರೋ ಬಿಜೆಪಿ ಮುಂದಿನ ಬಾರೀಯು ತಾನೇ ಅಧಿಕಾರದ ಗದ್ದುಗೆ ಏರಬೇಕು ಎಂದು ಶತಪ್ರಯತ್ನದಲ್ಲಿದೆ.

ಮಾಜಿ ಸಿಎಂ ಬಿಎಸ್ ವೈ ಹಾಗೂ ಸಿಎಂ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಒಂದು ತಂಡವನ್ನ‌ ರಚಿಸಲಾಗಿದೆ. ಈ ತಂಡ ಲಿಂಗಾಯತರೇ ಹೆಚ್ಚಿರುವ ೫೨ ಕ್ಷೇತ್ರಗಳಿಗೆ ಭೇಟಿ ನೀಡಲಿದೆ. ರಾಯಚೂರು, ದೇವದುರ್ಗ, ಮಸ್ಕಿ, ಹಗರಿಬೊಮ್ಮನಹಳ್ಳಿ, ಸಿರಗುಪ್ಪ, ಅರಸೀಕೆರೆ, ಹುಣಸೂರು, ಮೈಸೂರುನಗರ, ಮದ್ದೂರು, ಮಾಗಡಿ, ಕೆ.ಆರ್.ಪೇಟೆ, ಚಾಮರಾಜನಗರ, ಹುಮ್ನಾಬಾದ್, ಔರಾದ್,  ಚಿತ್ತಾಪುರ, ಸೇಡಂ, ಅಳಂದ, ನಿಪ್ಪಾಣಿ, ತೇರದಾಳ,ಬಾದಾಮಿ,ಶಿರಹಟ್ಟಿ,ಹಾನಗಲ್,ಕುಂದಗೋಳ,ಬೆಳಗಾವಿ,ತರಿಕೇರೆ,ಬೈಂದೂರು,ಪುತ್ತೂರು,ಹರಿಹರ,ಹೊಳಲ್ಕೆರೆ,ಶಿರಾ,ತುಮಕೂರು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಚರಿಸಲಿದೆ. ಹಾಗೆಯೇ ಕಟೀಲರ ತಂಡ ಒಬಿಸಿ ಸಮುದಾಯ ಹೆಚ್ಚಿರುವ ಕಡೆ ಪ್ರವಾಸ ಮಾಡಲಿದೆ.

ಹಿರಿಯೂರು,ತಿಪಟೂರು,ಯಲಹಂಕ,ಮಧುಗಿರಿ,ದಾವಣಗೆರೆದಕ್ಚಿಣ,ಗಂಗಾವತಿ,ಕಂಪ್ಲಿ,ಯಾದಗಿರಿ,ಬಸವಕಲ್ಯಾಣ,ಬಾಲ್ಕಿ,ನಾಗಠಾಣ,ಹುನಗುಂದ,ಜಮಖಂಡಿ,ಕಾಗವಾಡ,ಮದ್ದೂರು ಸೇರಿದಂತೆ ೫೨ ಕ್ಷೇತ್ರಗಳಲ್ಲಿ ತಿರುಗಲಿದೆ. ಹೋದಕಡೆ ಸಭೆಗಳು ಹಾಗೂ ಸಮಾವೇಶಗಳನ್ನ ನಡೆಸಲಿದೆ.ಇದ್ರ ಮೂಲಕ ಜನರ ವಿಶ್ವಾಸಗಳಿಸೋಕೆ ಪ್ರಯತ್ನ ನಡೆಸಲಿದೆ.

ಇನ್ನು ಮೊದಲ ಹಂತದ ಪ್ರವಾಸದ ವೇಳೆ ಮಠಮಾನ್ಯಗಳು ಹಾಗೂ ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ನಾಯಕರ ತಂಡ ಭೇಟಿ ನೀಡಲಿದೆ. ಆಯಾ ಸಮುದಾಯವಾರು ಮಠಾಧೀಶರನ್ನ ಓಲೈಸಿಕೊಳ್ಳುವ ಮೂಲಕ ಸಮುದಾಯದ ಹಿಡಿತವನ್ನ ಸಾಧಿಸುವುದು ಇದರ ಗುರಿಯಾಗಿದೆ. ಹಾಗೆಯೇ ಎಸ್ಸಿ, ಎಸ್ಟಿ, ಒಬಿಸಿ ನಾಯಕರ ಸಭೆಗಳನ್ನೂ ಆಯೋಜಿಸಲಿದೆ.. ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಲು ಬಿಎಲ್ ಎ -೧,ಬಿಎಲ್ ಎ ೨ , ಬೂತ್ ಅಧ್ಯಕ್ಷರು,ಶಕ್ತಿ ಕೇಂದ್ರ,ಮಹಾಶಕ್ತಿ ಕೇಂದ್ರ ಎಂಬ ವಿಂಗಡಣೆ ಮಾಡಿಕೊಂಡು ಆ ಮೂಲಕ ಪಕ್ಷ ಸಂಘಟಿಸುವ ಗುರಿ ಇಟ್ಟುಕೊಂಡಿದೆ.. ಜೊತೆಗೆ ಕಾಂಗ್ರೆಸ್ ಕಾಲದಲ್ಲಿ ಅಗಿರೊ ಹಗರಣಗಳನ್ನ ಮತ್ತೆ ಮುನ್ನಲೆಗೆ ತಂದು ಕೈ ನಾಯಕರ ಕೈ ಕಟ್ಟಿಹಾಕುವ ಪ್ರಯತ್ನ ಮಾಡಲು ಕೇಸರಿ ಬ್ರಿಗೇಡ್ ತಯಾರಿ ನಡೆಸಿದೆ.

ಒಟ್ನಲ್ಲಿ ಮುಂದಿನ ವಿಧಾನಸಭೆ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು ಬಿಜೆಪಿ ನಾಯಕರು ರಾಜ್ಯ ಪ್ರವಾಸ ಹಮ್ಮಿಕೊಂಡಿದ್ದಾರೆ. ಯಡಿಯೂರಪ್ಪ ಮುಂದಾಳತ್ವದಲ್ಲೇ ಹಲವು ಸಭೆ,ಸಮಾವೇಶಗಳನ್ನ ಆಯೋಜಿಸಿದ್ದಾರೆ. ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಿ ಅಧಿಕಾರಕ್ಕೆ ಬರಲು ಪ್ಲಾನ್ ರೂಪಿಸಿದ್ದಾರೆ. ಆದ್ರೆ ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದು ನೋಡ್ಬೇಕಿದೆ.

ರಾಘವೇಂದ್ರ ವಿಎನ್ ಪೊಲಿಟಿಕಲ್ ಬ್ಯೂರೋ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES