Thursday, January 23, 2025

ಬೆಂಗಳೂರಿನಲ್ಲಿ ಹಿಟಾಚಿ ಬಳಸಿ ಜನರ ರಕ್ಷಣೆ, ವಿಡಿಯೋ

ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ ಎರಡು ದಿನದಿಂದ ಸುರಿಯುತ್ತಿರುವ ಮಳೆಗೆ ಇಡೀ ಬೆಂಗಳೂರಿನ ಜನರೇ ಅಕ್ಷರಶಃ ತತ್ತರಿಸಿದ್ದಾರೆ. ಅದರಂತೆ ಪ್ರವಾಹದಿಂದ ಜನರನ್ನ ಬೇರೆಡೆಗೆ ಸ್ಥಳಾಂತರಿಸಲು ಹಿಟಾಚಿ ಬಳಸಿ ಪ್ರವಾಹದಿಂದ ಪಾರು ಮಾಡುತ್ತಿರುವ ವಿಡಿಯೋವನ್ನ ಉದ್ಯಮಿ ಆನಂದ್ ಮಹೀಂದ್ರ ಹಂಚಿಕೊಂಡಿದ್ದಾರೆ.

ತಮ್ಮ ಅಧಿಕೃತ ಟ್ವೀಟರ್​ನಲ್ಲಿ ಈ ವಿಡಿಯೋವನ್ನ ಶೇರ್​ ಮಾಡಿದ ಆನಂದ್​ ಮಹೀಂದ್ರ ಅವರು, “ಮನಸ್ಸಿದ್ದರೆ ಮಾರ್ಗ” ಎಂದು ಬರೆದುಕೊಂಡಿರುವ ಸಂದೇಶವನ್ನ ಹಾಕಿದ್ದಾರೆ. ಈ ವಿಡಿಯೋದಲ್ಲಿ ಇಬ್ಬರು ಚಾಲಕನ ಹತ್ತಿರ ನಿಂತಿದ್ದರೆ, ಉಳಿದವರು ಹಿಟಾಚಿ ಬಕೇಟ್​ನಲ್ಲಿ ನಿಂತಿದ್ದಾರೆ.

ಭಾರೀ ಮಳೆಯ ನಂತರ ಹಲವಾರು ಪ್ರದೇಶಗಳಲ್ಲಿ ಜಲಾವೃತವಾಗಿವೆ. ಈ ಏರಿಯಾದಲ್ಲಿ ವಾಸಿಸುವ ಜನರನ್ನ ಟ್ರ್ಯಾಕ್ಟರ್, ಜೆಸಿಬಿ ಮತ್ತು ಕ್ರೇನ್‌ಗಳನ್ನು ಬಳಸಿ ಜನರನ್ನ ಸ್ಥಳಾಂತರಿಸುತ್ತಿರುವ ಫೋಟೋಗಳು ಮತ್ತು ವೀಡಿಯೊಗಳು ವೈರಲ್​ ಆಗಿವೆ.

RELATED ARTICLES

Related Articles

TRENDING ARTICLES