Wednesday, January 22, 2025

18ಕ್ಕೆ ಫ್ಯಾನ್ಸ್​ಗೆ ಹದಿನೆಂಟು ಟಾಸ್ಕ್ ಕೊಟ್ಟ ಬುದ್ದಿವಂತ ಉಪ್ಪಿ

ಕನ್ನಡ ಚಿತ್ರರಂಗದಲ್ಲಿ ಫಿಲ್ಮ್ ಮೇಕಿಂಗ್​ಗೆ ಹೊಸ ಆಯಾಮ ಕೊಟ್ಟ ಟ್ರೆಂಡ್ ಸೆಟ್ಟರ್ ಅಂದ್ರೆ ಅದು ಸೂಪರ್ ಸ್ಟಾರ್ ಉಪೇಂದ್ರ. ಅವ್ರ ಬರ್ತ್ ಡೇಗೆ ದಿನಗಣನೆ ಶುರುವಾಗಿದ್ದು, ಇದೀಗ ಫ್ಯಾನ್ಸ್ ಹಾಗೂ ಕನ್ನಡ ಕಲಾಭಿಮಾನಿಗಳಿಗೆ ತಮ್ಮ ಮನೆಗೇ ಆಹ್ವಾನ ನೀಡಿದ್ದಾರೆ. ಅಷ್ಟೇ ಅಲ್ಲ, ಹದಿನೆಂಟರ ಟಾಸ್ಕ್ ನೀಡಿ ಮತ್ತೊಮ್ಮೆ ಹುಳ ಬಿಟ್ಟಿದ್ದಾರೆ.

  • ಕೇಕ್ ಮತ್ತು ಹೂಗುಚ್ಚ ಬಿಟ್ಟು ವಿಚಾರದೊಂದಿಗೆ ಬರಲು ಕರೆ
  • ಬರಲಿದೆ ಕಬ್ಜ ಟೀಸರ್, UI ಲುಕ್, ಬುದ್ದಿವಂತ-2 ಟ್ರೈಲರ್
  • 18 ರಿಟರ್ನ್​ ಗಿಫ್ಟ್ ಕೊಡ್ತಾರೆ ಸೂಪರ್ ಸ್ಟಾರ್ ಉಪೇಂದ್ರ..!

ಸೆಪ್ಟೆಂಬರ್ 18 ಬರ್ತಿದೆ ಅಂದ್ರೆ ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿ, ಸಂಭ್ರಮ. ಅಭಿಮಾನಿಗಳ ಚಕ್ರವರ್ತಿ ಉಪ್ಪಿಗೆ ಅಂದು ಜನುಮ ದಿನ. ಹಾಗಾಗಿ ನೆಚ್ಚಿನ ನಾಯಕನಟನನ್ನ ಭೇಟಿ ಆಗೋದ್ರ ಜೊತೆ ಸೆಲ್ಫಿ ತೆಗೆದುಕೊಂಡು ಸಂಭ್ರಮಾಚರಣೆ ಮಾಡ್ತಾರೆ ಉಪ್ಪಿ ಡೈಹಾರ್ಡ್​ ಫ್ಯಾನ್ಸ್. ಆದ್ರೆ ಕಳೆದ ಎರಡು ವರ್ಷದಿಂದ ಕೊರೋನಾದಿಂದಾಗಿ ಸೆಲೆಬ್ರೇಷನ್​ಗೆ ಬ್ರೇಕ್ ಹಾಕಿದ್ರು ಬುದ್ದಿವಂತ. ಇದೀಗ ಈ ವರ್ಷ ಅವ್ರೇ ಸ್ವತಃ ಮನೆಗೆ ಆಮಂತ್ರಣ ನೀಡಿದ್ದಾರೆ.

ಏನೇ ಮಾಡಿದ್ರೂ ಸದಾ ಡಿಫರೆಂಟ್ ಆಗಿಯೇ ಇರಬೇಕು ಅಂತ ಬಯಸೋ ಅವ್ರು, ಈ ಬಾರಿಯ 18ಕ್ಕೆ ವಿಚಾರವಂತರಾಗೋಣವೇ ಅಂತ ಫ್ಯಾನ್ಸ್​ನ ಕೇಳಿದ್ದಾರೆ. ಅಲ್ಲದೆ, 18ರ ಟಾಸ್ಕ್ ಬೇರೆ ನೀಡಿ, ಹುಳ ಬಿಟ್ಟಿದ್ದಾರೆ.

ವಿಚಾರವಂತರಾಗೋಣವೇ..?

ಇದೇ ಸೆಪ್ಟೆಂಬರ್ 18, ಅಭಿಮಾನಿಗಳ ದಿನದಂದು ನಿಮ್ಮನ್ನ ನಮ್ಮ ಮನೆಯಲ್ಲಿ ಭೇಟಿಯಾಗುತ್ತೇನೆ. ಆ ದಿನ ಕೇಕ್, ಹೂಗುಚ್ಚ, ಗಿಫ್ಟ್ ಎಲ್ಲವನ್ನು ಬಿಟ್ಟು. ಒಂದು ಹಾಳೆಯಲ್ಲಿ 18 ಪದಗಳನ್ನು ಮೀರದಂತೆ ಏನಾದರೂ ಒಂದು ಉತ್ತಮ ವಿಚಾರವನ್ನು ಬರೆದು ತರುತ್ತೀರಾ..? ಅತ್ಯುತ್ತಮವಾದ 18 ಬರವಣಿಗೆಗಳಿಗೆ ಸೂಕ್ತ ಬಹುಮಾನವಿರುತ್ತದೆ.

ಸಿನಿಮಾ, ಪ್ರಜಾಕೀಯ ಬಿಟ್ಟು ಬೇರೇನನ್ನೂ ಯೋಚಿಸದ ಉಪ್ಪಿ, ಸೋಶಿಯಲ್ ಮೀಡಿಯಾ ಮೂಲಕ ಜನತೆಗೆ ಹೊಸ ವಿಚಾರಗಳನ್ನ ತಲೆಗೆ ತುಂಬೋ ಕಾರ್ಯ ಮಾಡ್ತಿರುತ್ತಾರೆ. ಒಂದ್ಕಡೆ ಸಿನಿಮಾಗಳ ಶೂಟಿಂಗ್, ಮತ್ತೊಂದ್ಕಡೆ ಅವ್ರದ್ದೇ ನಿರ್ದೇಶನ, ಮಗದೊಂದು ಕಡೆ ಬಿಬಿಎಂಪಿ ಎಲೆಕ್ಷನ್​ಗೆ ಪ್ರಜಾಕೀಯದ ಸಿದ್ಧತೆ. ಹೀಗೆ 24/7 ಬ್ಯುಸಿ ಇರೋ ಇವ್ರು, ಈ ಬಾರಿಯ ಬರ್ತ್ ಡೇನ ಒಳ್ಳೆಯ ವಿಚಾರಗಳೊಂದಿಗೆ ಸಂಭ್ರಮಿಸೋಣ ಎಂದಿದ್ದಾರೆ. ಅಲ್ಲದೆ ಬೆಸ್ಟ್ ಬರಹಗಳಿಗೆ 18 ಬಹುಮಾನ ಕೂಡ ನೀಡೋದಾಗಿ ಹೇಳಿದ್ದಾರೆ.

ಆರ್ ಚಂದ್ರು ನಿರ್ದೇಶಿಸಿ, ನಿರ್ಮಿಸ್ತಿರೋ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಟೀಸರ್ ಅಂದು ಲಾಂಚ್ ಆಗಲಿದೆ. ಬಳಿಕ ಲೇಟ್ ಆದ್ರೂ ಲೇಟೆಸ್ಟ್ ಆಗಿ ತೆರೆಗೆಪ್ಪಳಿಸೋಕೆ ಸಜ್ಜಾಗ್ತಿರೋ ಬುದ್ದಿವಂತ-2 ಟ್ರೈಲರ್ ಹಾಗೂ ಉಪ್ಪಿ ನಟಿಸಿ, ನಿರ್ದೇಶಿಸ್ತಿರೋ ಯುಐ ಫಸ್ಟ್ ಲುಕ್ ಅಂದು ರಿವೀಲ್ ಆಗಲಿವೆ. ಇದಕ್ಕಿಂತ ಬೆಸ್ಟ್ ಗಿಫ್ಟ್ಸ್ ಮತ್ತೇನು ಬೇಕು ಅಲ್ಲವೇ..?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES