Monday, December 23, 2024

ಸಿದ್ದರಾಮಯ್ಯಗೆ ಸಚಿವ ಸುನಿಲ್​ ಕುಮಾರ್​ ತಿರುಗೇಟು

ಬೆಂಗಳೂರು : ನಿಮ್ಮ ಸರ್ಕಾರದ ಅವಧಿಯಲ್ಲಿ ಪರಿಶಿಷ್ಠ ಜಾತಿ, ಪಂಗಡದ ಹಾಸ್ಟೆಲ್‍ಗಳಲ್ಲಿ ದಿಂಬು, ಚೆಂಬು ಖರೀದಿಯಲ್ಲೂ ನಡೆದ ಭ್ರಷ್ಟಾಚಾರವನ್ನು ಸ್ವಲ್ಪ ನೆನಪಿಸಿಕೊಳ್ಳಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಸಚಿವ ಸುನಿಲ್ ಕುಮಾರ್ ತಿರುಗೇಟು ನೀಡಿದ್ದಾರೆ.

ಇಂಧನ ಇಲಾಖೆ ಯೋಜನೆಗಳ ಸಂಬಂಧ ಸಿದ್ದರಾಮಯ್ಯರಿಂದ ಟ್ವೀಟ್ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರೇ, ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನೆಡೆಗೆ ನೀವು ಸಮಾಜವನ್ನು ಕೊಂಡೊಯ್ಯುವುದು ಯಾವಾಗ?, ಪರಿಶಿಷ್ಠ ಜಾತಿ ಹಾಗೂ ಪಂಗಡದ ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ 75 ಯುನಿಟ್ ವಿದ್ಯುತ್ ನೀಡುವ ಆದೇಶವನ್ನು ವಾಪಸ್ ಪಡೆಯಲಾಗಿದೆ ಎಂದು ಸುಳ್ಳು ಪ್ರಚಾರ ಮಾಡಿ ನೀವು ಸಾಧಿಸುವ ಸಾಮಾಜಿಕ ನ್ಯಾಯವಾದರೂ ಏನು ಎಂದು ಪ್ರಶ್ನಿಸಿದರು.

ಹಿಂದಿನ ಆದೇಶ ವಾಪಸ್ ಪಡೆಯುವುದಕ್ಕೂ, ಘೋಷಿತ ಯೋಜನೆ ಸ್ಥಗಿತಗೊಳಿಸುವುದಕ್ಕೂ ಇರುವ ಆಡಳಿತಾತ್ಮಕ ವ್ಯತ್ಯಾಸವೂ ಗೊತ್ತಿಲ್ಲದಷ್ಟು ಅಜ್ಞಾನ ನಿಮ್ಮನ್ನು ಕಾಡುತ್ತಿದೆಯೇ?, ನಿಮ್ಮ ಪಕ್ಷದ ಸಾಮಾಜಿಕ ಜಾಲತಾಣದ ಕೆಲ “ಪೆದ್ದರು” ಕೊಟ್ಟ ದಾಖಲೆಯನ್ನೇ ಆಧಾರವಾಗಿಟ್ಟುಕೊಂಡು ಜನರನ್ನು ಹಾದಿ ತಪ್ಪಿಸಲು ಹೊರಟಿದ್ದೀರಿ ಎಂದು ಕಿಡಿಕಾರಿದರು

RELATED ARTICLES

Related Articles

TRENDING ARTICLES