Monday, December 23, 2024

ರಿಷಬ್​ ಶೆಟ್ಟಿ ಅಭಿನಯದ ಕಾಂತಾರ ಟ್ರೈಲರ್​ ರಿಲೀಸ್​

ಈಗಾಗಲೇ ಟೀಸರ್‌ನಿಂದಲೇ ಸಿನಿಪ್ರಿಯರ ಮನೆಸೆಳೆದಿರುವ ನಟ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ.

ಚಿತ್ರದ ಮೊದಲ ಹಾಡು ಸಿಂಗಲ್ ಸಿಂಗಾರ ಸಿರಿಯೆ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸಿದ್ದು. ಕಾಂತಾರ ಚಿತ್ರದ ಟ್ರೈಲರ್ ಇಂದು ರಿಲೀಸ್‌ ಆಗಿದ್ದು, ಮತ್ತೊಮ್ಮೆ ಕರಾವಳಿ ಸೊಗಡಿನ ಅನಾವರಣವಾಗಿದೆ. ರಿಷಬ್ ಶೆಟ್ಟಿ ನಟನೆಯ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಿಸುತ್ತಿದೆ.

ತುಳುನಾಡಿನಲ್ಲಿ ನಡೆಯುವ ಒಂದು ಫ್ಯಾಂಟಸಿ ಕತೆಯನ್ನು ಈ ಸಿನಿಮಾ ಆಧರಿಸಿದ್ದು. ಈ ಚಿತ್ರವು ಅತೀಂದ್ರಿಯ ಕಾಡಿನ ಸನ್ನಿವೇಶದಲ್ಲಿ ಮಾನವ ಮತ್ತು ಪ್ರಕೃತಿ ಸಂಘರ್ಷವನ್ನು ಪರಿಶೋಧಿಸುತ್ತದೆ. ಹಿಂದಿನ ಸಂದರ್ಶನವೊಂದರಲ್ಲಿ, ರಿಷಬ್ ಅವರು ಎರಡನೇ ಲಾಕ್‌ಡೌನ್ ಸಮಯದಲ್ಲಿ ಈ ಕಲ್ಪನೆಯನ್ನು ಅಭಿವೃದ್ಧಿಪಡಿಸಿದ್ದಾಗಿ ತಿಳಿಸಿದ್ದರು. ಈಗಾಗಲೇ ಹಲವು ವಿಶೇಷಗಳಿಂದ ಕಾಂತಾರ ಸಿನಿಮಾ ಮನೆಮಾತಾಗಿದೆ.

ಇತ್ತೀಚಿಗೆ ಬಿಡುಗಡೆಯಾದ ಕರುನಾಡ ಸಂಸ್ಕ್ರತಿಯನ್ನು ಬಿಂಬಿಸುವ ಅಜನೀಶ್ ಲೋಕನಾಥ್ ಸಂಗೀತ ನೀಡಿರುವ, ವಿಜಯಪ್ರಕಾಶ್, ಅನನ್ಯ ಭಟ್ ಹಾಡಿರುವ ‘ಸಿಂಗಾರ ಸಿರಿಯೆ’ ಹಾಡಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರದಲ್ಲಿ ರಿಷಬ್ ನಾಯಕನಾಗಿದ್ದು, ಸಪ್ತಮಿ ಗೌಡ, ಕಿಶೋರ್, ಪ್ರಮೋದ್ ಶೆಟ್ಟಿ ಮತ್ತು ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸೂರಿ ನಿರ್ದೇಶನದ ಪಾಪ್‌ಕಾರ್ನ್ ಮಂಕಿ ಟೈಗರ್ ನಂತರ ಕಾಂತಾರ ಸಪ್ತಮಿಯ ಎರಡನೇ ಚಿತ್ರವಾಗಿದೆ.

RELATED ARTICLES

Related Articles

TRENDING ARTICLES