Wednesday, January 22, 2025

ಅಕ್ಟೋಬರ್ 7ಕ್ಕೆ ಬಿಟೌನ್ ಮಂದಿಗೆ ನಮ್ಮ ರಶ್ಮಿಕಾ ‘ಗುಡ್ ಬೈ’

ಮಿಷನ್ ಮಜ್ನು ಮುಖೇನ ಬಾಲಿವುಡ್ ಲಾಂಚ್ ಆಗಬೇಕಿದ್ದ ಕರ್ನಾಟಕ ಕ್ರಶ್, ಅದಕ್ಕೂ ಮೊದ್ಲೇ ಬಿಟೌನ್ ಸಿನಿರಸಿಕರಿಗೆ ಗುಡ್​ಬೈ ಹೇಳ್ತಿದ್ದಾರೆ ಕೂರ್ಗ್​ ಬ್ಯೂಟಿ ರಶ್ಮಿಕಾ ಮಂದಣ್ಣ. ಅರೇ ಅದೇನಾಯ್ತು ಆಕೆಗೆ ಅನ್ನೋದ್ರ ಜೊತೆಗೆ ಒಂದಷ್ಟು ಲೇಟೆಸ್ಟ್ ಸ್ಯಾಂಡಲ್​ವುಡ್ ಅಪ್ಡೇಟ್ಸ್ ನಿಮ್ಮ ಮುಂದೆ ಇಡ್ತಿದ್ದೀವಿ. ನೀವೇ ಓದಿ.

ಮಿಷನ್ ಮಜ್ನು ರಿಲೀಸ್ ಮತ್ತೆ ಪೋಸ್ಟ್​ಪೋನ್ ಆಗಿದ್ಯಾಕೆ..?

ಕನ್ನಡದಿಂದ ಪಕ್ಕದ ತೆಲುಗು, ತಮಿಳು ಇಂಡಸ್ಟ್ರಿಗೆ ಹೋಗಿ, ಅಲ್ಲಿಂದ ಬಾಲಿವುಡ್ ಮಂದಿಯ ಕಣ್ಣಿಗೆ ಬಿದ್ದ ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣ, ನ್ಯಾಷನಲ್ ಕ್ರಶ್ ಆಗಿ ಮಿಂಚ್ತಿದ್ದಾರೆ. ಸಾಲು ಸಾಲು ಬಹುಭಾಷಾ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಪುಷ್ಪ ಬಿಗ್ಗೆಸ್ಟ್ ಸಕ್ಸಸ್ ನಂತ್ರ ಬಾಲಿವುಡ್​ನ ಹ್ಯಾಂಡ್ಸಮ್ ಹಂಕ್ ಸಿದ್ದಾರ್ಥ್ ಮಲ್ಹೋತ್ರ ಜೊತೆ ಮಿಷನ್ ಮಜ್ನು ಸಿನಿಮಾ ಮಾಡಿದ್ರು ರಶ್ಮಿಕಾ. ಅದೇ ಈಕೆಯ ಹಿಂದಿ ಲಾಂಚ್ ಮೂವಿ ಎನ್ನಲಾಗ್ತಿತ್ತು. ಆದ್ರೀಗ ಅದಕ್ಕೂ ಮುನ್ನ ಬಾಲಿವುಡ್ ಸಿನಿಪ್ರಿಯರಿಗೆ ಗುಡ್ ಬೈ ಹೇಳ್ತಿದ್ದಾರೆ ಕೂರ್ಗ್​ ಬ್ಯೂಟಿ. ಅರೇ ಗುಡ್ ಬೈ ಹೇಳ್ತಿದ್ದಾರಾ ಅಂತ ಹುಬ್ಬೆರಿಸಬೇಡಿ. ಅದು ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ರಶ್ಮಿಕಾ ನಟಿಸಿರೋ ಸಿನಿಮಾದ ಟೈಟಲ್. ಸದ್ಯ ಈ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಇದೇ ಅಕ್ಟೋಬರ್ 7ಕ್ಕೆ ಗುಡ್ ಬೈ ಚಿತ್ರ ತೆರೆಗೆ ಬರ್ತಿದ್ದು, ಬಾಲಿವುಡ್​ನ ಶೆಹೆನ್​ಷಾ ಬಿಗ್ ಬಿ ಅಮಿತಾಬ್ ಜೊತೆ ಕನ್ನಡತಿ ಮಿಂಚಲಿದ್ದಾರೆ. ಅಂದಹಾಗೆ ದೀಪಿಕಾ- ಅಮಿತಾಬ್ ಜೋಡಿಯ ಪೀಕು ಚಿತ್ರದಂತೆ ಇದು ಕೂಡ ಫ್ಯಾಮಿಲಿ ಕಾಮಿಡಿ ಡ್ರಾಮಾ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES