ಬೆಂಗಳೂರು: ಕಳೆದ ಎರಡು ದಿನದಿಂದ ಸುರಿಯುತ್ತಿರುವ ಭಾರೀ ಮಳೆಗೆ ಅಕ್ಷರಶಃ ಬೆಂಗಳೂರು ಪ್ರವಾಹದಿಂದ ತತ್ತರಿಸಿದ್ದು, ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್ ರಾಜ್ಯ ಸರ್ಕಾರದ ವಿರುದ್ಧ ವಿನೂತನವಾಗಿ ಪ್ರತಿಭಟನೆ ಮಾಡಿದ್ದಾರೆ.
ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಜಲಾವೃತ ರಸ್ತೆಯ ಮೇಲೆ ಗಾಳಿ ತುಂಬಿದ ರಬ್ಬರ್ ಟ್ಯೂಬ್ ಮೇಲೆ ಕುಳಿತು ನಲಪಾಡ್ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ತದ ನಂತರ ಮಾತನಾಡಿ, ಬೆಂಗಳೂರು ಇಂದು ಪ್ರವಾಹದಲ್ಲಿ ಮುಳುಗಿರುವುದಕ್ಕೆ ಕಾರಣ ಬಿಜೆಪಿ ಸರ್ಕಾರ 40% ಕಮಿಷನ್ ಕಾರಣವಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಮಾನ ಹರಾಜನ್ನ ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಟೀಕಿಸಿದರು.
#WATCH | Mohammed Haris Nalapad, President, Karnataka Pradesh Youth Congress Committee floats using an inflated rubber tube on a waterlogged road in #Bengaluru to protest against the state govt demanding a solution to severe waterlogging witnessed in the city pic.twitter.com/IF8DdmNa55
— ANI (@ANI) September 6, 2022