ದಾವಣಗೆರೆ: ಬೆಂಗಳೂರು ಮುಳುಗಡೆಗೆ ಬೆಂಗಳೂರಿನ ಎಲ್ಲಾ ಪಕ್ಷದ ನಾಯಕರೇ ಕಾರಣವಾಗಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಹಳ್ಳಿಯವರು ಹೋಗಿ ಬೆಂಗಳೂರು ಒತ್ತುವರಿ ಮಾಡಿಲ್ಲ. ಬೆಂಗಳೂರಿನ ನಾಯಕರೇ ರಾಜಕಾಲುವೆ ಒತ್ತುವರಿ, ಭೂ ಕಬಳಿಕೆ ಮಾಡಿದ್ದರಿಂದ ಈ ರೀತಿಯ ಪ್ರವಾಹ ಬೆಂಗಳೂರಿನಲ್ಲಿ ಆಗಿದೆ.
ರಾಜ ಕಾಲುವೆ ವ್ಯವಸ್ಥೆ ಸರಿಯಾಗಿ ಮಾಡದೇ ಬೇಕಾಬಿಟ್ಟಿ ಮಾಡಲಾಗಿದೆ. ಅಕಾಲಿಕ ಮಳೆಯಾಗಿದೆ ಇದಕ್ಕೆ ಎಲ್ಲರು ಹೊಣೆ ಹೊರಬೇಕು. ನಮ್ಮ ಕೆಲಸ ಕಾಂಗ್ರೆಸ್ ನವರ ಕಣ್ಣಿಗೆ ಕಾಣ್ತಿಲ್ಲ. ಅವರದು ಕಾಮಾಲೆ ಕಣ್ಣು, ಕಣೋದೆಲ್ಲ ಹಳದಿಯಾಗಿದೆ ಎಂದರು.
ಇನ್ನು ರಾಜ್ಯದಲ್ಲಿ ಸುರಿಯುತ್ತಿರುವ ಮಳೆಗೆ ಈ ವೇಳೆ ಪ್ರತಿಕ್ರಿಯಿಸಿದ ಸಚಿವರು, ರೈತರ ಖಾತೆಗೆ ಸೆಪ್ಟಂಬರ್ 12ಕ್ಕೆ ಪರಿಹಾರ ಹಣ ಬಿಡುಗಡೆಯಾಗಲಿದೆ. ಬೆಳೆ ಹಾನಿ ಸಮೀಕ್ಷೆ ಪೋರ್ಟಲ್ ಗೆ ಎಂಟ್ರಿ ಆಗುತ್ತಿದೆ. ಜಂಟಿ ಸರ್ವೆ ಆಗಿದ್ದು ಈಗಾಗಲೇ 50% ಎಂಟ್ರಿ ಆಗಿದೆ. ಕಳೆದ ಭಾರೀ ಪರಿಹಾರ ಕೊಟ್ಟಿದ್ದೇವೆ. ಸರಿಯಾಗಿ ಸರ್ವೇ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಆಗುತ್ತಿರುವ ಮಳೆಯಿಂದ ರೈತರು ಸಂದಿಗ್ದ ಪರಿಸ್ಥಿತಿಯಲಿದ್ದಾರೆ. ದಾವಣಗೆರೆಯಲ್ಲಿ 16 ಸಾವಿರ ಹೆಕ್ಟೇರ್ ಹಾನಿಯಾಗಿದೆ. 8ಸಾವಿರ ಹೆಕ್ಟೇರ್ ಎಂಟ್ರಿಯಾಗಿದೆ. ಶೀಘ್ರದಲ್ಲೇ ಎಲ್ಲರಿಗೂ ಪರಿಹಾರ ನೀಡಲು ಸರ್ಕಾರ ಮುಂದಾಗಲಿದೆ ಎಂದು ಭರವಸೆ ನೀಡಿದರು.