Sunday, January 19, 2025

ನಾಳೆ ಐಟಿ ಸಂಸ್ಥೆಗಳ ಜತೆಗೆ ಸಚಿವ ಅಶ್ವಥ್ ನಾರಾಯಣ ಮಹತ್ವದ ಸಭೆ

ಬೆಂಗಳೂರು: ನಾಳೆ ಐಟಿ ಸಂಸ್ಥೆಗಳ ಜತೆಗೆ ಕರ್ನಾಟಕದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಸಚಿವ ಅಶ್ವಥ್ ನಾರಾಯಣ ಅವರು ಸಭೆ ನಡೆಸಲಿದ್ದಾರೆ.

ಬೆಂಗಳೂರಿನ NASSCOM(ಐಟಿಬಿಟಿ ಸಂಘಗಳ) ಸಂಸ್ಥೆಗಳು ಮಳೆಯಿಂದಾಗಿ ಹಲವೆಡೆ ಜಲಾವೃತಗೊಂಡು  ಕೋಟಿಗಟ್ಟಲೇ ಹಾನಿಯಾಗಿದ್ದವು. ಈ ಬಗ್ಗೆ ಪರೋಕ್ಷವಾಗಿ ಐಟಿ ಕಂಪನಿಗಳು ಬೆಂಗಳೂರು ತೊರೆಯುವ ಮೂನ್ಸೂಚನೆಯನ್ನ ರಾಜ್ಯ ಸರ್ಕಾರಕ್ಕೆ ನೀಡಿದ್ದವು.

ಹೀಗಾಗಿ ಐಟಿ ಸಂಸ್ಥೆಗಳ ಸಮಸ್ಯೆಯನ್ನ ಆಲಿಸಲು ನಾಳೆ ಸಂಜೆ 5 ಗಂಟೆಗೆ ವಿಧಾನಸೌಧದಲ್ಲಿ ಸಭೆ ಕರೆದಿದ್ದು, ಈ ಸಭೆಯಲ್ಲಿ ಸಚಿವ ಅಶ್ವಥ್ ನಾರಾಯಣ್ ಭಾಗವಹಿಸಲಿದ್ದಾರೆ.

RELATED ARTICLES

Related Articles

TRENDING ARTICLES