Thursday, December 26, 2024

ಬೆಂಗಳೂರು ಸಂಪೂರ್ಣ ಮುಳುಗುವ ಪರಿಸ್ಥಿತಿ ಬಂದಿದೆ‌ : ಡಿ.ಕೆ ಸುರೇಶ್

ಬೆಂಗಳೂರು : ಯಾವುದೇ ಸರ್ಕಾರ ಬಂದರು ಬೆಂಗಳೂರನ್ನ ಹೃದಯ ರೀತಿ ಕಾಪಾಡುತ್ತಿದ್ದರು ಎಂದು ಸಂಸದ ಡಿ.ಕೆ ಸುರೇಶ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಸ್ಥಿತಿ ನೋಡಿದ್ರೆ ಏನು ಹೇಳಬೇಕು ಗೊತ್ತಾಗುತ್ತಿಲ್ಲ. ಅಯ್ಯೋ ಎಂದರೂ ಬಿಜೆಪಿಗರಿಗೆ ಕೇಳಲ್ಲ. ಯಾವುದೇ ಸರ್ಕಾರ ಬಂದರು ಬೆಂಗಳೂರನ್ನ ಹೃದಯ ರೀತಿ ಕಾಪಾಡುತ್ತಿದ್ದರು. ಬಿಜೆಪಿಯವರು ಕಮಿಷನ್, ಅಧಿಕಾರ ಉಳಿಸಲಿಕೊಳ್ಳುಲು ಬೆಂಗಳೂರನ್ನು ಮಾರಾಟಕ್ಕೆ ಇಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು, ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಉಳಿಯಲ್ಲ ಎಂದು ಗೊತ್ತಿದೆ. ಯುವಕರು ಉದ್ಯೋಗ ಕಿತ್ತುಕೊಳ್ಳುತ್ತಿದ್ದೀರ ನಮ್ಮ ಶಾಸಕರಿಗೆ 70 ಕೋಟಿ ಅನುದಾನ, ಬಿಜೆಪಿ ಶಾಸಕರಿಗೆ ನೂರಾರು ಕೋಟಿ ಅನುದಾನ, ಯಾಕೆಂದರೆ 40% ಕಮಿಷನ್ ಸರ್ಕಾರ ಬಿಜೆಪಿದ್ದು. ಬೆಂಗಳೂರು ಸಂಪೂರ್ಣ ಮುಳುಗುವ ಪರಿಸ್ಥಿತಿ ಬಂದಿದೆ‌. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ ನೇತೃತ್ವದಲ್ಲಿ ನಮ್ಮ ಬೆಂಗಳೂರು ಫೌಂಡೇಶನ್ ಮಾಡಿದ್ದರು‌. ಎಲ್ಲಿ ಹೋಗಿದೆ ಈಗ ಆ ಫೌಂಡೇಶನ್ ಎಂದು ಪ್ರಶ್ನಿಸಿದರು.

ಅದಲ್ಲದೇ, ಕಾಂಗ್ರೆಸ್ ಸರ್ಕಾರದ ಇದ್ದಾಗ ನಗರಾಭಿವೃದ್ಧಿ ಸಚಿವರನ್ನು ಕಾಡುತ್ತಿದ್ದೀರಿ. ನಮ್ಮ ಬೆಂಗಳೂರು ಫೌಂಡೇಶನ್ ಎಲ್ಲಿದೆ. ಗುಂಡಿಗಳ ಲೆಕ್ಕಾ ಹಾಕುತ್ತಿದ್ದರು, ಈಗ ಗುಂಡಿಗಳು ಕಾಣಿಸುತ್ತಿಲ್ಲವಾ? ಟಿವಿಗಳಲ್ಲಿ ತೋರಿಸಲು ಕಸ ನೀವೇ ಹಾಕಿ, ತೆಗೆಯುತ್ತಿದ್ದರು ಬಿಜೆಪಿಯವರು. ರಸ್ತೆ, ಗುಂಡಿಗಳು ಮುಚ್ಚಲು,ಕಸದಲ್ಲಿ, ಸತ್ತ ಹೆಣ ಸುಡಲು ಕಮಿಷನ್ ಬೇಕು. ಪಿಎಂ ಪ್ರಧಾನಿಗಳಿಗೆ ಎಲ್ಲೋ ಮಾತಾಡಿದ್ದು ಕೇಳಿಸುತ್ತದೆ‌. ಆದರೆ ಐಟಿ ಬಿಟಿಯವರು ಮೂರು ಪತ್ರ ಬರೆದಿದ್ದಾರೆ. ಪ್ರಧಾನಿ ಆಗಲಿ, ಬಿಜೆಪಿ ನಾಯಕರಾಗಲಿ ಮಾತಾಡಲಿಲ್ಲ. ಹಾಗಾದ್ರೆ ಸರ್ಕಾರದ ಕಮಿಷನ್ ನಲ್ಲಿ ಕೇಂದ್ರ ಪಾಲು ಇದ್ಯಾ..? ಭ್ರಷ್ಟಾಚಾರಕ್ಕೆ ಹಿಂದು ಧರ್ಮದ ಮುಖವಾಡ ಧರಿಸಿ ಮುನ್ನೆಡೆಯುತ್ತಿದ್ದೀರಾ ಎಂದು, ಬಿಜೆಪಿ ಸರ್ಕಾರದ ವಿರುದ್ಧ ಡಿಕೆ ಸುರೇಶ್ ವಾಗ್ದಾಳಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES