Wednesday, January 22, 2025

ಬೈಕ್​ ಮೇಲೆ ಹರಿದ ಟ್ಯಾಂಕರ್​​, ಕಿಮ್ಸ್ ನರ್ಸ್ ಸಾವು

ಬೆಂಗಳೂರು: ಬೈಕ್​ ಮೇಲೆ ಟ್ಯಾಂಕರ್​ಯೊಂದು ಹರಿದು ಹೋಗುವ ಭಯಾನಕದ ಅಪಘಾತದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೆಂಗಳೂರಿನ ಲಗ್ಗೆರೆ ಬಸ್ ನಿಲ್ದಾಣ ಬಳಿಯ ಗ್ರೇಸ್ ಪಬ್ಲಿಕ್ ಸ್ಕೂಲ್ ಮುಂಭಾಗ, ಬೈಕ್​ ಮೇಲೆ ಟ್ಯಾಂಕರ್ ಹರಿದು ಹೋಗಿ ಬೈಕ್​ ಸವಾರಿ, ಕಿಮ್ಸ್ ನರ್ಸ್ ಆಗಿದ್ದ ಆಶಾ ಮೃತಪಟ್ಟಿದ್ದಾಳೆ.

ಇಂದು ಬಳಗ್ಗೆ ಬಸ್ ನಿಲ್ದಾಣ ಕಡೆಯಿಂದ ಲಗ್ಗೆರೆ ಕಡೆಯ ತಮ್ಮ ಮನೆಗೆ ಆಶಾ ತೆರಳುತಿದ್ದರು. ಈ ವೇಳೆ ಸ್ಕೂಲ್ ಮುಂದೆ ಬಂದಾಗ ರಸ್ತೆ ಬದಿಯಲ್ಲಿ ಎಡಭಾಗದಲ್ಲಿ ತೆರಳುತದ್ದ ವೇಳೆ ಮೊಬೈಲ್ ನೋಡ್ತಾ ನೋಡ್ತಾ ಮಹಿಳೆ ಮೇಲೆ ಚಾಲಕ ಟ್ಯಾಂಕರ್ ಹತ್ತಿಸಿದ್ದಾನೆ.

ಘಟನೆ ಬಳಿಕ ಟ್ಯಾಂಕರ್ ಬಿಟ್ಟು ಚಾಲಕ ಕಾಲ್ಕಿತ್ತಿದ್ದಾನೆ. ರಾಜಾಜಿನಗರ ಸಂಚಾರ ಪೊಲೀಸ್ ಠಾಣೆ ಯಲ್ಲಿ ಈ ಬಗ್ಗೆ ಕೇಸ್ ದಾಖಲು ಆಗಿದೆ.

RELATED ARTICLES

Related Articles

TRENDING ARTICLES