Wednesday, January 22, 2025

ಬೆಂಗಳೂರಿನ ಕಾವೇರಿ ನೀರಿಗೂ ಕಂಟಕ ತಂದ ಮಳೆರಾಯ..!

ಬೆಂಗಳೂರು : ನಗರಕ್ಕೆ ಕಾವೇರಿ ನೀರು ಪೂರೈಸೋ ಜಲಮಂಡಳಿಯ ಟಿ.ಕೆ.ಹಳ್ಳಿ ಪಂಪಿಂಗ್ ಸ್ಟೇಷನ್, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನಲ್ಲಿದೆ. ಭಾರಿ ಮಳೆಯಾಗಿ ಈ ಪಂಪಿಂಗ್ ಸ್ಟೇಷನ್ಗೆ ನೀರು ನುಗ್ಗಿದೆ.ಸದ್ಯ ನೀರು ಪೂರೈಕೆ ಪಂಪಿಂಗ್ ಸ್ಥಗಿತಗೊಂಡಿದೆ‌.

ಇನ್ನು, ಮಂಡಳಿ ಅಧಿಕಾರಿಗಳು ದುರಸ್ತಿ ಕಾರ್ಯ ಆರಂಭಸಿದ್ದು,ದುರಸ್ತಿ ಮುಗಿಯವರಿಗೆ ಟಿಕೆ ಹಳ್ಳಿ ಪಂಪಿಂಗ್ ಸ್ಟೇಷನ್ ನಿಂದ ನೀರು ನಗರಕ್ಕೆ ಪೂರೈಕೆ ಆಗೋದಿಲ್ಲ.ಈಗಾಗಲೇ ನೀರು ಪಂಪ್ ಮಾಡೋ ಬೃಹತ್ ಯಂತ್ರಗಳನ್ನ ಸ್ಟೇಷನ್ ನಿಂದ ಹೊರಗೆ ತಂದು ದುರಸ್ತಿ ಮಾಡಲಾಗ್ತಿದ್ದು,ನೀರು ಹಾಗೂ ಕೆಸರಿನಿಂದ ಹಾನಿಗೀಡಾಗಿವೆ.ಮಂಡಳಿ ಎಂಜಿನಿಯರ್ಗಳು ಪರಿಶೀಲಿಸಿ,ನಿರ್ವಹಣೆ ಪೂರ್ಣಗೊಳಿಸಿದ ಬಳಿಕ ಕಾರ್ಯಾರಂಭಗೊಳಿಸಲು ಮುಂದಾಗಿದ್ದಾರೆ.

ಸಹಕಾರನಗರ, ಕಾಫಿ ಬೋರ್ಡ್, ಬ್ಯಾಟರಾಯನಪುರ, ಆರ್.ಟಿ.ನಗರ, ಕಾವಲ್​ ಭೈರಸಂದ್ರ, ಸುಲ್ತಾನ್​ಪಾಳ್ಯ, ಯಲಹಂಕ ಹಳ್ಳಿನಗರ, ಯಲಹಂಕ ನ್ಯೂಟೌನ್, ಅಟ್ಟೂರ್, ವಿದ್ಯಾರಣ್ಯಪುರ, ಸಿಂಗಾಪುರ, ಬೊಮ್ಮಸಂದ್ರ, ಜಿಕೆವಿಕೆ, ಮಾನ್ಯತಾ ಟೆಕ್​ಪಾರ್ಕ್, ಕಾಡುಗೋಡಿ, ಹೂಡಿ, ಎ.ನಾರಾಯಣಪುರ, ವಿಜ್ಞಾನ ನಗರ ಸುತ್ತಮುತ್ತಲ ಪ್ರದೇಶ, ವರ್ತೂರು, ಸಿದ್ಧಾಪುರ, ರಾಮಗೊಂಡನಹಳ್ಳಿ, ತುಬರ್​ಹಳ್ಳಿ, ನಾಗಗೊಂಡನಹಳ್ಳಿ, H.B.R, ನಾಗವಾರ, ಕಲ್ಯಾಣನಗರ, ಕಾಚರಕನಹಳ್ಳಿ, ಬಾಣಸವಾಡಿ, ಕಸ್ತೂರಿನಗರ, ಹೊರಮಾವು, ಕೆ.ಆರ್.ಪುರಂ, ರಾಮಮೂರ್ತಿನಗರ, ದೇವಸಂದ್ರ, ಹಲವು ಕಡೆ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

RELATED ARTICLES

Related Articles

TRENDING ARTICLES