Wednesday, January 22, 2025

ಐಟಿ – ಬಿಟಿ ಕಂಪನಿಗಳ ಪತ್ರಕ್ಕೆ ಬೆದರಿದ ರಾಜ್ಯ ಸರ್ಕಾರ..!

ಬೆಂಗಳೂರು : ಸಿಲಿಕಾನ್‌ ಸಿಟಿ, ಐಟಿ – ಬಿಟಿ ಸಿಟಿ, ಉದ್ಯಾನನಗರಿ ಎಂದೆಲ್ಲ ಕರೆಸಿಕೊಳ್ತಿದ್ದ ನಮ್ಮ ಬೆಂಗಳೂರಿನ ಮಾನ ಮರ್ಯಾದೆ ಹರಾಜಾಗ್ತಿದೆ. ಸಣ್ಣ ಮಳೆಗೂ ತಡೆಯಲಾಗದ ಪರಿಸ್ಥಿತಿಯಲ್ಲಿ ಸಿಟಿಗೆ ಬಂದು ಬಿಟ್ಟಿದೆ. ಮಳೆ ಬಂದ್ರೆ, ರಸ್ತೆ ಯಾವುದು, ಕೆರೆ ಯಾವುದು ಅನ್ನೋದೇ ಗೊತ್ತಾಗಲ್ಲ. ಇನ್ನು, ಮಳೆ ಬಂದ್ರೆ ಸಾಕು ಕೆಲಸರ ಪಾಡು ಕೇಳೋರಿಲ್ಲ. ಇನ್ನು, ರಸ್ತೆಯ ಗುಂಡಿಗಳು ಸಾವಿನ ಕೂಪಗಳಾಗಿ ಪರಿಣಮಿಸಿವೆ.

ಇಷ್ಟೆಲ್ಲಾ ಸಮಸ್ಯೆಗಳು ಪದೇ ಪದೇ ಆಗ್ತಿದ್ರೂ, ಸರ್ಕಾರ ಕ್ಯಾರೆ ಅಂತಿಲ್ಲ. ಜನರು ಹಿಡಿ ಶಾಪ ಹಾಕ್ತಿದ್ರೂ, ಭರವಸೆ ಕೊಟ್ಟು ಈಡೇರಿಸಿದ ಸರ್ಕಾರ ಮೀನಮೇಷ ಎಣಿಸ್ತಿದೆ. ಈ ಮಧ್ಯೆ, ಐಟಿ-ಬಿಟಿಗಳು ಸಾಕಪ್ಪ ಈ ಬೆಂಗಳೂರು ಸಹವಾಸ ವಲಸೆ ಹೋಗ್ತೀವಿ ಅಂತಿವೆ. ಈ ಮಧ್ಯೆ ಮೊನ್ನೆ ಬರೆ ಒಂದೇ ಒಂದು ಪತ್ರ ಸರ್ಕಾರ ಬೆದರಿ ಹೋಗಿದೆ.

ಬ್ರ್ಯಾಂಡ್ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಲು ಕಾರಣವಾಗಿದೆ. ಸರ್ಕಾರ ಆಡಳಿತಾತ್ಮಕ ಧೋರಣೆ ವಿರುದ್ಧ ಐಟಿ- ಬಿಟಿ ಕಂಪನಿಗಳೇ ತಿರುಗಿಬಿದ್ದಿದ್ದರು. ನಮಗೆ ಮೂಲ ಸೌಕರ್ಯ ನೀಡಿ, ಇಲ್ಲದಿದ್ರೆ ನಮ್ಮ‌ ದಾರಿ ನಾವು ನೋಡಿಕೊಳ್ಳುತ್ತೇವೆಂದು ಸರ್ಕಾರಕ್ಕೆ ಎಚ್ಚರಿಕೆ ಪತ್ರ ಬರೆದಿದ್ದರು‌‌. ಸರ್ಕಾರಕ್ಕೆ ಐಟಿ-ಬಿಟಿ ಕಂಪನಿಗಳು ಪತ್ರ ಬರೆಯುತ್ತಿದ್ದಂತೆ, ಕುಂಭಕರ್ಣ‌ ನಿದ್ದೆಯಲ್ಲಿದ್ದ ಸರ್ಕಾರ ಕೊನೆಗೂ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ. ಐಟಿ- ಬಿಟಿ ಕಂಪನಿಗಳ ಪತ್ರದಿಂದ ಆಗಿರುವ ಡ್ಯಾಮೇಜ್ ಕಂಟ್ರೋಲ್ ಮಾಡಲು ಸರ್ಕಾರ ಸದ್ಯ ಮುಂದಾಗಿದೆ.

ಇನ್ನು ಐಟಿ – ಬಿಟಿ ಕಂಪನಿಗಳ ಆದಾಯದಿಂದಲೇ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ತೆರಿಗೆ ಬರುತ್ತಿದೆ. ಇಷ್ಟಾದ್ರೂ, ಸರ್ಕಾರ ನೀಡಬೇಕಾದ ಕನಿಷ್ಠ ಮೂಲ ಸೌಕರ್ಯ ಕೂಡ ಕೊಡ್ತಿಲ್ಲ‌. ರಸ್ತೆ,ಗುಂಡಿ ಸಮಸ್ಯೆ ಜೊತೆಗೆ ಒಂದು ಸಣ್ಣ ಮಳೆ ಬಂದರೂ ದಿನವಿಡೀ ಟ್ರಾಫಿಕ್ ಜಾಮ್‌ನಲ್ಲಿ ಓದ್ದಾಡಬೇಕಿದೆ. ಇದರ ವಿರುದ್ಧ ತಿರುಗಿ ಬಿದ್ದಿರುವ ಐಟಿ- ಬಿಟಿ ಕಂಪನಿಗಳು, ಶಾಶ್ವತ ಪರಿಹಾರ ನೀಡದಿದ್ರೆ, ಬೆಂಗಳೂರು ತೊರೆಯುವ ಎಚ್ಚರಿಕೆ‌ ನೀಡಿದ್ದಾರೆ. ತಡವಾಗಿ ಎಚ್ಚೆತ್ತುಕೊಂಡಿರುವ ಸರ್ಕಾರ, ಇದೀಗ ಐಟಿ- ಬಿಟಿ ಕಂಪನಿಗಳ ಪ್ರಮುಖರ ಜೊತೆ ಸಭೆ ಮಾಡಲು ತೀರ್ಮಾನ ಮಾಡಿದ್ದಾರೆ.

ಇನ್ನು ಬೆಂಗಳೂರು ಸಚಿವರ ನಡುವಿನ ಆಂತರಿಕ ಗುದ್ದಾಟದಿಂದ, ಇದುವರೆಗೂ ಬೆಂಗಳೂರು ಉಸ್ತುವಾರಿ ಖಾತೆಯನ್ನು ಸಿಎಂ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ‌. ಬೆಂಗಳೂರು ಸಮಗ್ರ ಅಭಿವೃದ್ಧಿ ವಿಚಾರದಲ್ಲಿ ಬೆಂಗಳೂರು ಸಚಿವರ ಪ್ರತಿಷ್ಠೆಯೇ ಹೆಚ್ಚಾಗಿದೆ. ಅದ್ರಲ್ಲೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಸರ್ಕಾರವನ್ನು ಸಮರ್ಥನೆ ಮಾಡಿಕೊಳ್ಳುವ ಭರದಲ್ಲಿ, ಈ ಸಮಸ್ಯೆಗಳಿಗೆ ಹಿಂದಿನ ಸರ್ಕಾರಗಳ ಆಡಳಿತವೇ ಕಾರಣ ಎಂದು ಲಘುವಾಗಿ ಮಾತನಾಡಿದ್ದಾರೆ.

ಒಟ್ಟಾರೆ, ಸರ್ಕಾರದ ಕೆಟ್ಟ ಆಡಳಿತ, ಬೆಂಗಳೂರು ಸಚಿವರ ನಡುವಿನ ಒಣಪ್ರತಿಷ್ಠೆಯಿಂದ ಬ್ರ್ಯಾಂಡ್ ಬೆಂಗಳೂರು ಗೌರವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛೀ..ಥೂ. ಎನ್ನುವ ಪರಿಸ್ಥಿತಿಯನ್ನ ಬಿಜೆಪಿ ಸರ್ಕಾರ ತಂದೊಡ್ಡಿದೆ .ಇನ್ನಾದರೂ ಎಚ್ಚೆತ್ತು ಬೆಂಗಳೂರಿನ ಸಮಸ್ಯೆಗಳನ್ನ ಬಗೆಹರಿಸಿ, ಬ್ರ್ಯಾಂಡ್ ಬೆಂಗಳೂರು ಗೌರವವನ್ನು ಕಾಪಾಡುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.

ಗೋವಿಂದ್, ಪೊಲಿಟಿಕಲ್ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES