Saturday, November 23, 2024

ಗುರು-ಗುರಿ ಇದ್ದರೆ ಯಶಸ್ಸು ಖಚಿತ

ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ ಗುರು ಸಾಕ್ಷಾತ್​ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ಈ ಶ್ಲೋಕದ ಅರ್ಥ ಈ ಲೋಕದ ಸೃಷ್ಟಿಕರ್ತ ಗುರು. ಆ ಮಹಾನ್​ ಗುರುವಿನ ನಮನ ಎನ್ನುವುದರ ಮೂಲಕ ಇಡೀ ಲೋಕವೇ ಗುರುವಿಗೆ ತಲೆಬಾಗುತ್ತದೆ.

ಸಪ್ಟೆಂಬರ್​ 5ರಂದು ಶಿಕ್ಷಕರ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ಶಿಕ್ಷಕರ ದಿನವನ್ನು ಡಾ.ಸರ್ವಪಲ್ಲಿ ರಾಧಾಕೃಷ್ಣನ್​ ಅವರ ಜನ್ಮದಿನದಂದು ಆಚರಿಸಲಾಗುವುದು. ಈ ದಿನದಂದು ವಿವಿಧ ಶಿಕ್ಷಣ ಸಂಸ್ಧೆಗಳು ಶಾಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ದಿನದಂದು ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ವಿಶೇಷವಾದ ಉಡುಗೊರೆಗಳನ್ನು ನೀಡಿ ಶುಭಾಶಯ ತಿಳಿಸಿ ಖುಷಿ ಪಡುತ್ತಾರೆ.

ಇನ್ನು ಶಾಲೆ ಮತ್ತು ಕಾಲೇಜಿನಲ್ಲಿ ಪಾಠ ಮಾಡಿದವರಷ್ಟೇ ಶಿಕ್ಷಕರಾಗಬೇಕಿಲ್ಲ. ಶೈಕ್ಷಣಿಕ ಬದುಕಿನಾಚೆ ನಮಗೆ ಹಲವಾರು ರೀತಿಯ ಗುರುಗಳು ನಮಗೆ ಸಿಗುತ್ತಾರೆ. ಹಾಗೆನೇ ನಮ್ಮ ಬದುಕಿಗೆ ಸುಂದರವಾದ ಚೌಕಟ್ಟು ನೀಡಿದವರು, ಗುರಿ ನೀಡಿದವರೆಲ್ಲರೂ ಶಿಕ್ಷಕರೇ ಗುರು-ಗುರಿ ಇದ್ದರೆ ಯಶಸ್ಸು ಖಂಡಿತಾ ಎಂಬ ಮಾತಿದೆ. ಇಂತಹ ಶಿಕ್ಷಕರ ಕಠಿಣ ಪರಿಶ್ರಮಕ್ಕೆ ಸಲ್ಲಬೇಕಾದ ಗೌರವ.

RELATED ARTICLES

Related Articles

TRENDING ARTICLES