Monday, December 23, 2024

ಭಾರತದ ವಿರುದ್ಧ ಪಾಕ್​ಗೆ 5 ವಿಕೆಟ್​ ರೋಚಕ ಜಯ

ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಸೂಪರ್​ 4 ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನ 5 ವಿಕೆಟ್​ಗಳ ರೋಚಕ ಗೆಲುವನ್ನು ಸಾಧಿಸಿದೆ.

ಇನ್ನು, ಪಂದ್ಯದಲ್ಲಿ ಟಾಸ್​ ಸೋತು ಫೀಲ್ಡಿಂಗ್​ ಆಯ್ದುಕೊಂಡಿದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಮ್​ ಟೀಂ ಬೌಲಿಂಗ್​ ಆಯ್ದುಕೊಂಡರು. ಇತ್ತ, ಬ್ಯಾಟಿಂಗ್​ ಮಾಡಿದ ಟೀಂ ಇಂಡಿಯಾ ವಿರಾಟ್​ ಕೊಯ್ಲಿ ಅರ್ಧಶತಕದ ನೆರವಿನಿಂದ 20 ಓವರ್​ಗಳಲ್ಲಿ 7ವಿಕೆಟ್​ ನಷ್ಟಕ್ಕೆ 181 ರನ್​ ಕಲೆಹಾಕಿ ಪಾಕಿಸ್ತಾನ ತಂಡಕ್ಕೆ ಗೆಲ್ಲಲು 182 ರನ್​ಗಳ ಗುರಿಯನ್ನು ನೀಡಿತು.

ಅದಲ್ಲದೇ ಪಾಕಿಸ್ತಾನ ಮೊಹಮ್ಮದ್​ ರಿಜ್ವಾನ್​ ಹಾಗೂ ಮೊಹಮ್ಮದ್​ ನವಾಜ್​ ಅವರ ಆಕರ್ಷಕ ಬ್ಯಾಟಿಂಗ್​ ನೆರವಿನಿಂದ 19.5 ಓವರ್​ಗಳಲ್ಲಿ 182 ರನ್​ ಕಲೆಹಾಕಿದ್ದು, 5 ವಿಕೆಟ್​ಗಳ ರೋಚಕ ಗೆಲುವನ್ನು ಕಂಡಿದೆ.

RELATED ARTICLES

Related Articles

TRENDING ARTICLES