Sunday, December 22, 2024

ಶಾಲಾ ಮಕ್ಕಳೊಂದಿಗೆ ಸಚಿವ ಎಸ್​.ಟಿ ಸೋಮಶೇಖರ್ ಭರ್ಜರಿ ಸ್ಟೆಪ್ಸ್​​

ಮೈಸೂರು: ತಾತ್ಕಾಲಿಕ ಶಾಲಾ ಉದ್ಘಾಟನೆ ಮಹೂರ್ತ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಸಹಕಾರಿ ಸಚಿವ, ಮೈಸೂರು ಉಸ್ತುವಾರಿ ಸಚಿವ ಎಸ್​.ಟಿ ಸೋಮಶೇಖರ್​ ಅವರು ಭರ್ಜರಿ ಸ್ಟೆಪ್ಸ್​ ಹಾಕಿದ್ದಾರೆ.

ಸೋಮವಾರ ಮೈಸೂರಿನ ಅರಮನೆ ಆವರಣದಲ್ಲಿ ತಾತ್ಕಾಲಿಕ ಶಾಲಾ ಉದ್ಘಾಟನೆ ಮಾಡಿ, ನಂತರ ಮಾವುತ ಮತ್ರು ಕಾವಡಿ ಮಕ್ಕಳ ಜೊತೆ ಎಸ್​.ಟಿ ಸೋಮಶೇಖರ್ ಡ್ಯಾನ್ಸ್ ಮಾಡಿದ್ದಾರೆ.

ಇನ್ನೂ ಸಚಿವರ ಡ್ಯಾನ್ಸ್​ಗೆ ಅಲ್ಲಿ ನೆರೆದಿದ್ದ ಸಾರ್ವಜನಿಕರು ಫಿದಾ ಆಗಿ ಶಹಬ್ಬಾಸ್​ಗಿರಿ ಹಾಕಿದರು. ಸಚಿವರ ಜತೆಗೆ ಡ್ಯಾನ್ಸ್​ ಮಾಡಿರುವುದಕ್ಕೆ ಶಾಲಾ ಮಕ್ಕಳು ಖುಷಿ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES