ಬಾಗಲಕೋಟೆ : ಒಂದೆಡೆ ಮುಳುಗಡೆಗೊಂಡ ಸೇತುವೆ.ಮತ್ತೊಂದೆಡೆ ಜಲಾವೃತಗೊಂಡ ಬೆಳೆಗಳು.ಇನ್ನೊಂದೆಡೆ ಪ್ರತಿವರ್ಷ ಪ್ರವಾಹಕ್ಕೆ ತುತ್ತಾಗಿ ಬೆಳೆ ಹಾನಿ ಅನುಭವಿಸುತ್ತಿರುವ ಅನ್ನದಾತ. ಇಂತಹ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನ ಗೋವಿನಕೊಪ್ಪ ಗ್ರಾಮದಲ್ಲಿ.ಹೌದು, ಜಿಲ್ಲೆಯಲ್ಲಿ ಮಳೆ ಇಲ್ಲದಿದ್ರೂ ಮಲಪ್ರಭಾ ನದಿಗೆ ನವಿಲತಿರ್ಥ ಡ್ಯಾಂನಿಂದ 7 ಸಾವಿರ ಕ್ಯೂಸೆಕ್ಸ್ ನೀರು ಹೊರ ಬಿಡಲಾಗಿದೆ.ಪರಿಣಾಮ ಬದಾಮಿ ತಾಲೂಕಿನ ಗೋವಿನಕೊಪ್ಪ ಗ್ರಾಮದ ಸೇತುವೆ ಮುಳುಗಡೆಯಾಗಿದೆ. ಗ್ರಾಮಸ್ಥರು ಸುತ್ತುವರೆದು ಬೇರೊಂದು ಸೇತುವೆ ಮೂಲಕ ಸಂಚರಿಸುತ್ತಿದ್ದಾರೆ. ನದಿ ಪಾತ್ರದ ಹೊಲಗಳಿಗೆ ನೀರು ಲಗ್ಗೆ ಇಟ್ಟಿದೆ.
ಇನ್ನು ಮಲಪ್ರಭಾ ನದಿಗೆ ನವಿಲತಿರ್ಥ ಜಲಾಶಯದಿಂದ ೭ ಸಾವಿರ ಕ್ಯೂಸೆಕ್ಸ್ ಗೂ ಅಧಿಕ ನೀರು ಹರಿದು ಬರುತ್ತಿರೊದ್ರಿಂದ ನದಿ ಪಾತ್ರದ ಹೊಲಗದ್ದೆಗಳಿಗೆ ನೀರು ನುಗ್ಗಿದೆ. ಗೋವಿನಕೊಪ್ಪ ಗ್ರಾಮದ ರೈತರ ಹೊಲದಲ್ಲಿನ ಕಬ್ಬು,ಈರುಳ್ಳಿ, ಸೂರ್ಯಕಾಂತಿ ಸೇರಿ ತೋಟಗಾರಿಕೆ ಬೆಳೆಗಳು ಜಲಾವೃತಗೊಂಡಿವೆ. ನದಿ ಪಾತ್ರದ ಗ್ರಾಮದ ಜನರು ಎಚ್ಚರಿಕೆಯಿಂದ ಇರುವಂತೆ ತಹಶೀಲ್ದಾರ್ ಮಜ್ಜಗಿ ಸೂಚನೆ ನೀಡಿದ್ದಾರೆ. ನದಿ ಪಾತ್ರದಲ್ಲಿನ ರೈತರು ಪಂಪಸೆಟ್, ಜಾನುವಾರು ಸೇರಿ ತಮ್ಮ ಸಲಕರಣೆಗಳನ್ನು ಬೇರೆ ಕಡೆ ಸಾಗಿಸುವಂತೆ ಮನವಿ ಮಾಡಿದ್ದಾರೆ.ಜಲಾವೃತಗೊಂಡ ಬೆಳೆ ಹಾನಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಸಿಗುತ್ತಿಲ್ಲ. ಬೆಳೆಹಾನಿಗೆ ತುತ್ತಾದ ರೈತನ ಸಮಸ್ಯೆಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಮಳೆ ಆಗಿದ್ರೂ ಮಲಪ್ರಭಾ ನದಿ ನೀರಿನ ಹರಿವು ಹೆಚ್ಚಾಗಿದೆ. ಬದಾಮಿ ತಾಲ್ಲೂಕಿನ ಮಲಪ್ರಭಾ ನದಿ ಪಾತ್ರದ ಗ್ರಾಮದ ರೈತರ ಬೆಳೆಗಳು ಜಲಾವೃತಗೊಂಡಿವೆ. ತಾಲೂಕಾಡಳಿತ ನದಿ ಪಾತ್ರದಲ್ಲಿ ವಾಸವಿರುವ ಜನ ಜಾನುವಾರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಿದ್ದಾರೆ.ರೈತರ ಗೋಳಿಗೆ ಸರ್ಕಾರ ಯಾವ ರೀತಿ ಸ್ಪಂದಿಸುತ್ತೆ ಅಂತಾ ಕಾದು ನೋಡಬೇಕಿದೆ.
ನಿಜಗುಣ ಮಠಪತಿ, ಪವರ್ ಟಿವಿ ಬಾಗಲಕೋಟೆ