ನವದೆಹಲಿ: ಬ್ರಿಟನ್‌ನ ನೂತನ ಪ್ರಧಾನಿಯಾಗಿ ಬ್ರಿಟನ್ ಕನ್ಸರ್ವೇಟಿವ್ ಪಕ್ಷದ ಲಿಜ್ ಟ್ರಸ್ ಆಯ್ಕೆಯಾಗಿದ್ದಾರೆ. ಸುಮಾರು 20 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಲಿಜ್ ಟ್ರಸ್ ಬ್ರಿಟನ್‌ನ ಮೂರನೇ ಮಹಿಳಾ ಪ್ರಧಾನಿಯಾಗಿ ಆಯ್ಕೆಯಾಗಿದ್ದು, ನಾಳೆ ಬ್ರಿಟನ್ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಈ ಹಿಂದೆ ಪ್ರಧಾನಿಯಾಗಿದ್ದ ಬೋರಿಸ್ ಜಾನ್ಸನ್ ಅವರ ಮೇಲೆ ಹಲವು ಹಗರಣದಲ್ಲಿ ಭಾಗಿಯಾಗಿದ್ದು, ಬ್ರಿಟನ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಹಲವು ಸಚಿವರು ಒತ್ತಾಯಿಸಿ ತಮ್ಮ ರಾಜೀನಾಮೆ ನಿಡಿದ್ದರು. ಬಳಿಕ ಬೋರಿಸ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈಗ ತೆರವಾದ ಸ್ಥಳಕ್ಕೆ ಲಿಜ್ ಟ್ರಸ್ ಆಯ್ಕೆಯಾಗಿದ್ದಾರೆ.
ಇನ್ನು ಲಿಜ್ ಟ್ರಸ್ ಅವರ ಪ್ರತಿಸ್ಪರ್ಧಿಯಂತೆ ಭಾರೀ ನಿರೀಕ್ಷೆ ಮೂಡಿಸಿದ್ದ ಭಾರತೀಯ ಮೂಲದ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಅವರು ಸೋಲು ಅನುಭವಿಸಿದ್ದಾರೆ. ರಿಷಿ ಒಟ್ಟು 60,399 ಮತಗಳನ್ನು ಪಡೆದರು.