ಬೆಂಗಳೂರು: ಟಾಟಾ ಸಮೂಹದ ಮಾಜಿ ಅಧ್ಯಕ್ಷರು ದುರ್ಮರಣ ಹೊಂದುತ್ತಾರೆ, ಎಚ್ಚರಿಕೆಯಿಂದ ಇರಬೇಕು ಎಂದು ದಾವಣಗೆರೆ ಜಿಲ್ಲೆಯ ಹರಿಹರದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ನುಡಿದ ಭವಿಷ್ಯವಾಣಿ ಈಗ ನಿಜವಾಗಿದೆ.
ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಕಳೆದ ಅಗಸ್ಟ್ 27 ರಂದು ತಮ್ಮ ಅಧಿಕೃತ ಫೇಸ್ಬುಕ್ ಪೇಜ್ನಲ್ಲಿ ಬರೆದುಕೊಂಡ ಅವರು, ಟಾಟಾ ಸಮೂಹದ ಮಾಜಿ ಅಧ್ಯಕ್ಷರಿಗೆ ಒಂದು ತಿಂಗಳು ಕಂಟಕ ಇದೆ. ಇದರಲ್ಲಿ ಅವರು ದುರ್ಮರಣ ಹೊಂದುತ್ತಾರೆ. ಸಾವಿನ ನಂತರ ಟಾಟಾ ಸಮೂಹದ ವ್ಯವಹಾರದಲ್ಲೂ ತೊಡಕಾಗಲಿದೆ ಎಂದು ಸ್ವಾಮೀಜಿ ಹೇಳಿದ್ದರು.
ಸ್ವಾಮೀಜಿ ಅವರ ನುಡಿದಿದ್ದ ಭವಿಷ್ಯವಾಣಿಯಂತೆ, ನಿನ್ನೆ ಅಹಮದಾಬಾದ್ನಿಂದ ಮುಂಬಯಿಗೆ ತೆರಳುತ್ತಿದ್ದ ವೇಳೆ ಟಾಟಾ ಸಮೂಹದ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ಚಲಿಸುತ್ತಿದ್ದ ಕಾರು ಮುಂಬೈ ಸಮೀಪ ಪಾಲ್‌ಘರ್‌ನಲ್ಲಿ ಅವಘಾತದ ಸಂಭವಿಸಿ ಸಾವೀಗಿಡಾಗಿದ್ದರು.