ಬೆಂಗಳೂರು: ಬೆಂಗಳೂರು ನೀರು ಪೂರೈಕೆ ಮಾಡುವ ಪಂಪ್ ಹೌಸ್ ಗೆ ನೀರು ನುಗ್ಗಿದೆ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ಕಾಡಲಿದೆ, ಒಂದನ್ನು ಮರಳಿ ತೆಗೆಯಲಾಗುತ್ತಿದೆ. ಎರಡುಮೂರು ದಿನದಲ್ಲಿ ಇನ್ನೊಂದು ಪಂಪ್ ಹೌಸ್ ಓಪನ್ ಆಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮಳೆ ಆರ್ಭಟ ಜೋರಾಗಿದ್ದು, ಈ ಕುರಿತು ಸಿಎಂ ಇಂದು ಸಂಜೆ ಸಭೆ ಕರೆದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 11 ಸಾವಿರ ಕೋಟಿ ರೂ ನಷ್ಟ ಆದ ಬಗ್ಗೆ ವರದಿ ಕೊಟ್ಟಿದ್ದೆವು. ಈಗ ಮತ್ತೆ ಮಳೆಯಾಗಿದೆ. ಹೀಗಾಗಿ ಹೆಚ್ಚುವರಿ ನಷ್ಟವನ್ನು ಅಂದಾಜಿಸಿ ಕೇಂದ್ರಕ್ಕೆ ಕಳುಹಿಸುತ್ತೆವೆ ಎಂದರು.
ಮಳೆ ನಿರಂತರವಾಗಿ ಸುರಿಯುತ್ತಿದೆ, ಕಳೆದ ಮೂರು ತಿಂಗಳಿಂದ ನಿರಂತರವಾಗಿ ಸುರಿಯುತ್ತಿದೆ. ಇದರ ಪರಿಣಾಮ ರಾಜ್ಯದ ಕೆರೆಗಳು ಎಲ್ಲ ತುಂಬಿದವೆ. ಬರ ಪೀಡಿತ ಪ್ರದೇಶಗಳಲ್ಲೂ ಕೆರೆಗಳು ತುಂಬಿವೆ. ಇದೊಂದು ದಾಖಲೆ ಮಳೆಯಾಗಿದೆ.
ಆಗಸ್ಟ್ ಕೊನೆಗೆ ಶೇ 144 ರಷ್ಟು ಹೆಚ್ಚು ಮಳೆಯಾಗಿದೆ. ಸೆಪ್ಟೆಂಬರ್ ನಲ್ಲಿ 5 ದಿನಗಳಲ್ಲಿ ಶೇ 51 ರಷ್ಟು ಮಳೆಯಾಗಿದೆ. ಮುಂದಿನ ನಾಲ್ಕು ದಿನಗಳ ಕಾಲ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ರಾಜ್ಯದ 17 ಜಿಲ್ಲೆಗಳ ಮಳೆ ಬಗ್ಗೆ ಮಾಹಿತಿ ಪಡೆದಿದ್ದೇನೆ. 5092 ಜನ ಆಶ್ರಯ ಶಿಬಿರ, 14900 ಹೆಕ್ಟೇರ್ ಪ್ರದೇಶ ಹಾನಿಯಾಗಿದೆ. ಇದರಲ್ಲಿ 1374 ತೋಟಗಾರಿಕೆ ಹಾನಿ, 430 ಮನೆ ಪೂರ್ತಿ ಹಾನಿ, 2188 ಕಡಿಮೆ ಪ್ರಮಾಣದಲ್ಲಿ ಹಾನಿ, 255 ಕಿ.ಮೀ ರಸ್ತೆಗಳು ಡ್ಯಾಮೇಜ್ ಆಗಿವೆ.
ಸೆಪ್ಟೆಂಬರ್ 1 ರಿಂದ 5ರ ವರೆಗೆ ಆಗಿರುವ ಮಳೆ ಹಾನಿ ಕೂಡಲೇ ಸಮೀಕ್ಷೆ ಮಾಡಿ ಪರಿಹಾರ ಕೊಡಲು ಡಿಸಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಎಲ್ಲಾ 664 ಕೋಟಿ ಹಣ ಪಿಡಿ ಅಕೌಂಟ್ ನಲ್ಲಿದೆ. ಕೃಷಿ ಭೂಮಿ ಹಾನಿ ಬಗ್ಗೆ ವರದಿ ಅಪ್ಲೋಡ್ ಮಾಡಲು ಸೂಚನೆ ನೀಡಿದ್ದೇನೆ ಎಂದು ಸಿಎಂ ಹೇಳಿದರು.
ಕೇಂದ್ರ ಅಧ್ಯಯನ ತಂಡ ನಾಳೆ ರಾತ್ರಿ ರಾಜ್ಯಕ್ಕೆ ಬರುತ್ತಿದೆ. ನಾನು ಅವರನ್ನು ಭೇಟಿ ಮಾಡುತ್ತೇನೆ. ಇವಾಗ ಡ್ಯಾಮೇಜ್ ಆಗಿರುವ ಬಗ್ಗೆ ನಾಡಿದ್ದು ಅವರಿಗೆ ತಿಳಿಸುತ್ತೇನೆ. ಈಗಾಗಲೇ ಮೊದಲು ಪರಿಹಾರಕ್ಕೆ ಕೊಟ್ಟಿರೋದು ಬೇರೆ. ಒಟ್ಟು ಬೆಂಗಳೂರು, ಇಡೀ ರಾಜ್ಯದ ಪ್ರವಾಹ ನಿರ್ವಹಣೆಗೆ, ಮೂಲಭೂತ ಸೌಕರ್ಯಗಳಿಗೆ 600 ಕೋಟಿ ಬಿಡುಗಡೆ ಮಾಡಲು ತೀರ್ಮಾನ ಮಾಡಿದ್ದೇನೆ. ಇದು ರಾಜ್ಯ ಸರ್ಕಾರದ ಭೊಕ್ಕಸದಿಂದಲೇ ಭರಿಸಲಿದೆ. ಬೆಂಗಳೂರಿಗೆ 300 ಕೋಟಿ ರೂ ಎಂದರು.
ಸದ್ಯ ನಮ್ಮ ಅಧಿಕಾರಿಗಳು ಯುದ್ದೋಪಾಧಿಯಲ್ಲಿ ಕೆಲಸ ಮಾಡ್ತಿದ್ದಾರೆ. ಈ ಮಳೆಯ ಸಂದರ್ಭದಲ್ಲಿ ಬೆಂಗಳೂರಿನ ಜನತೆಯ ಸಹಕಾರ ನಮ್ಮ ಮೇಲೆ ಇರಲಿ. ಇದನ್ನು ನಾವು ಸಮರ್ಥವಾಗಿ ಎದುರಿಸುತ್ತೇವೆ. ಮಳೆ ನಿಂತ ಕೂಡಲೇ ಮೂಲಭೂತ ಸೌಕರ್ಯ ಗಳನ್ನು ಸರಿಪಡಿಸುತ್ತೇವೆ. ಆದ್ದರಿಂದ ಈ ದೊಡ್ಡ ಸವಾಲನ್ನು ನಾವೆಲ್ಲರೂ ಒಟ್ಟಾಗಿ ಎದುರಿಸೋಣ ಎಂದು ಸಿಎಂ ತಿಳಿಸಿದರು.
ಅಂಗಡಿಗಳು ಹಾನಿಯಾದರೂ ಪರಿಹಾರ ಕೊಡುತ್ತಿದ್ದೇನೆ. ಪ್ರವಾಹ ನಿರ್ವಹಣೆಗೆ ಬರೀ ಬೆಂಗಳೂರಿಗೆ SDRF ಕಂಪನಿ ಸ್ಥಾಪನೆ ಮಾಡಬೇಕು. ಇಡೀ ರಾಜ್ಯದಲ್ಲಿ SDRF ಎರಡು ಕಂಪನಿ ಸ್ಥಾಪನೆ ಮಾಡಲಿದ್ದೇವೆ.
ಈಗಾಗಲೇ ಈ ಹಿಂದೆ ಸೂಚನೆ ನೀಡುರುವಂತೆ ಅದೇ ಸಚಿವರನ್ನ ಬೆಂಗಳೂರಿಗೆ ನಿರ್ವಹಣೆ ಮಾಡುತ್ತೇವೆ. ಬೆಂಗಳೂರಿನ 8 ವಲಯಕ್ಕೂ ಈ ಹಿಂದೆ ಸೂಚಿಸಿದ ಸಚಿವರೇ ಕೆಲಸ ಮಾಡ್ತಾರೆ. ಅವರು ಈಗಾಗಲೇ ಅಲರ್ಟ್ ಆಗಿ ಅವರವರ ವಲಯದಲ್ಲಿ ಕೆಲಸ ಮಾಡ್ತಿದ್ದಾರೆ ಎಂದ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.