ಚಾಮರಾಜನಗರ : ಮರಿಯಾನೆ ತಾಯಿಯಿಂದ ತಪ್ಪಿಸಿಕೊಂಡ ಶಾಲೆಗೆ ಬಂದು ಮಕ್ಕಳೊಟ್ಟಿಗೆ ಆಟ ಆಡಿದ ಅಪರೂಪದ ಘಟನೆ ಯಳಂದೂರು ತಾಲೂಕಿನ ಪುರಾಣಿಪೋಡಿನಲ್ಲಿ ನಡೆದಿದೆ.
ದಾರಿ ತಪ್ಪಿ ಶಾಲೆಗೆ ಬಂತು ಮರಿಯಾನೆ, ಮಕ್ಕಳೊಂದಿಗೆ ಆಟ- ಬೊಂಬಾಟ್ ಊಟ ಮಾಡಿದ್ದು, ಶಾಲೆಗೆ ಬಂದು ಮಕ್ಕಳೊಟ್ಟಿಗೆ ಮರಿಯಾನೆ ಆಟ ಆಡಿದೆ. ಚಾಮರಾಜನಗರ ಜಿಲ್ಲೆ ಬಿಳಿಗಿರಿರಂಗನಬೆಟ್ಟ ಅರಣ್ಯ ಪ್ರದೇಶದಿಂದ ಬಂದಿದ್ದ ಆನೆಮರಿ. ತಾಯಿಯಿಂದ ಬೇರ್ಪಟ್ಟ ಗಂಡು ಮರಿಯಾನೆಯೊಂದು ದಾರಿ ತಪ್ಪಿದ ಮಗನಾಗಿತ್ತು.
ಚಾಮರಾಜನಗರ ಜಿಲ್ಲೆ ಪುರಾಣಿಪೋಡಿನ ವಸತಿ ಶಾಲೆಗೆ ಬಂದಿದ್ದ ಆನೆಮರಿ. ಮಕ್ಕಳು ಆನೆ ಕಂಡದ್ದೇ ತಡ ಆನೆಯೊಟ್ಟಿಗೆ ಆಡಿ ನಲಿದಾಡಿದ್ದಾರೆ.
ಇನ್ನು, ಮನುಷ್ಯರನ್ನೇ ಕಾಣದ ಮರಿಯಾನೆ ಹೊಸ ಸ್ನೇಹಿತರೊಟ್ಟಿಗೆ ನಲಿದು ಆಟ ಆಡಿದೆ. ಬಾಳೆಹಣ್ಣು ತಿನ್ನಿಸಿ ‘ಆನೆ ಬಂತೊಂದಾನೆ, ಯಾವೂರ ಆನೆ’ ಎಂದು ಹಾಡಿ ಮರಿಯೊಟ್ಟಿಗೆ ಕುಣಿದು ಕುಪ್ಪಳಿಸಿರುವ ಮಕ್ಕಳು. ನಂತರ ಅರಣ್ಯ ಗ್ರಾಮಸ್ಥರು ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಯಳಂದೂರು ವಲಯದ ಸಿಬ್ಬಂದಿಗಳು. ಗಸ್ತು ತಿರುಗಿದ ಸಿಬ್ಬಂದಿ ತಾಯಿ ಆನೆ ಘೀಳಿಡುತ್ತಿದ್ದನ್ನು ಗಮನಿಸಿದ ಅರಣ್ಯಾಧಿಕಾರಿಗಳು ಮರಿಯನ್ನ ತಾಯಿ ಮಡಲಿಗೆ ಸೇರಿಸಿದ್ದಾರೆ.