ವಿಜಯಪುರ: ಇಂದು ಶಿಕ್ಷಕರ ದಿನಾಚರಣೆ ಹಿನ್ನಲೆಯಲ್ಲಿ ಜಿಲ್ಲೆಯ ಕಂದಗಲ್ ಹನುಮಂತರಾಯ ರಂಗಮಂದಿರದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬುದ್ದಿಜೀವಿ, ಪ್ರಗತಿಪರರ ವಿರುದ್ಧ ಹರಿಹಾಯ್ದಿದ್ದಾರೆ.
ಒಳ್ಳೆ ಶಿಕ್ಷಣ ಕೊಡಬೇಕು ಅಂತ ಒಳ್ಳೆ ಉದ್ದೇಶದಿಂದ ದೇಶದಲ್ಲಿ ಶಿಕ್ಷಣ ನೀತಿ ಬದಲಾವಣೆ ಮಾಡಿದ್ದಾರೆ. ಹೊಸ ಯುಗ ದೇಶದಲ್ಲಿ ಪ್ರಾರಂಭ ಮಾಡಲಾಗಿದೆ. ಹೊಸ ಶಿಕ್ಷಣ ನೀತಿ ಕೆಲವೊಂದು ಮಂದಿ ವಿರೋಧ ಮಾಡ್ತಾರೆ. ವಿರೋಧ ಮಾಡೋದೇ ಅವರ ಉದ್ಯೋಗವಾಗಿದೆ. ಲಾರ್ಡ್ ಮೆಕಾಲೆ ಶಿಕ್ಷಣ ನೀತಿ ಗುಲಾಮಗಿರಿಯಿಂದ ಹೊರ ತರುವ ಪ್ರಯತ್ನ ಪ್ರಧಾನಿ ಮೋದಿ ಮಾಡಿದ್ದಾರೆ ಎಂದರು.
ಬಹಳ ಉಪದ್ಯಾಪಿ (ಕಿಡಿಗೇಡಿ) ಮಾಡುವರಿಗೆ ಬುದ್ಧಿ ಜೀವಿ ಅಂತ ಕರೆದಿವಿ. ದೇಶದ ವಿರುದ್ಧ ಮಾತನಾಡುವವರಿಗೆ ಪ್ರಗತಿಪರರು ಅಂತ ಕರೆಯುತ್ತಿದ್ದೇವೆ. ಇವು ಎರಡು ವರ್ಗಗಳು ರಾಜ್ಯದಲ್ಲಿ ಇವೆ. ಇವರೆಲ್ಲಾ ಸೇರಿ ಸ್ವಾಮೀಜಿಗಳನ್ನು ದಾರಿ ತಪ್ಪಿಸ್ತಿದ್ದಾರೆ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಬುದ್ಧಿ ಜೀವಿ, ಪ್ರಗತಿಪರರಿಗೆ ತಲೆಕೆಟ್ಟು ಏನರ ಮಾಡೋಕೆ ಹೋಗ್ತಾರೆ. ತಲೆಕೆಟ್ಟು ಏನೇನೋ ಆಗಿಬಿಡುತ್ತಾರೆ. ಆದ್ಮೇಲೆ ಒಬ್ಬೊಬ್ಬರು ಉಳಿಸಲಿಕ್ಕೆ ಹಿಂದೆ ಬೆನ್ನು ಹತ್ತುತ್ತಾರೆ ಎಂದು ಯತ್ನಾಳ್ ಹೇಳಿದರು.