ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಕಡೂರು ತಾಲೂಕಿನ ಚಿಕ್ಕದೇವನೂರು ಗ್ರಾಮದ ದೇವನೂರು ಕೆರೆ 30 ವರ್ಷಗಳ ಬಳಿಕ ಕೋಡಿಬಿದ್ದು, ಗ್ರಾಮಗಳಿಗೆ ನೀರು ನುಗ್ಗಿದೆ. ಕೆಲವು ಕಡೆ ಬೆಳೆ ಮುಳುಗಿದೆ.
ಐತಿಹಾಸಿಕ ಪರಂಪರೆ ಹೊಂದಿರುವ ದೇವನೂರು ಕೆರೆ ಹೊಯ್ಸಳರ ಕಾಲದ್ದಾಗಿದೆ. ಭಾರಿ ಪ್ರಮಾಣದ ನೀರು ಕಂಡು ಜನರು ಆಶ್ಚರ್ಯ ವ್ಯಕ್ತಪಡಿಸಿದ್ದು, ಹೊಲ ಗದ್ದೆ ರಸ್ತೆ ಮೇಲೆ ನೀರು ಧುಮ್ಮಿಕ್ಕಿ ಹರಿಯುತ್ತಿದೆ.
ಇನ್ನೂ ಅತಿದೊಡ್ಡ ಕೆರೆ ಕೋಡಿ ಬಿದ್ದು ಚಿಕ್ಕದೇವನೂರು ಗ್ರಾಮ ಜಲಾವೃತವಾಗಿದೆ. ರಸ್ತೆಗಳೆಲ್ಲವೂ ನದಿಯಂತಾಗಿದ್ದು ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಗ್ರಾಮಸ್ಥರು ಅಪಾಯವನ್ನು ಲೆಕ್ಕಿಸದೆ ಸಂಚರಿಸುತ್ತಿದ್ದಾರೆ.