Monday, December 23, 2024

ಅಂಡರ್‌ ಪಾಸ್​​ನಲ್ಲಿ ವಾಹನ ನಿಲ್ಲಿಸಿದ್ರೆ ಫೈನ್ ಗ್ಯಾರೆಂಟಿ..!

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಯಾವಾಗ ಮಳೆ ಬರುತ್ತವೆ, ಯಾವಾಗ ನಿಲ್ಲುತ್ತೋ ಒಂದು ಗೊತ್ತಾಗಲ್ಲ. ಜೋರಾಗಿ ಮಳೆ ಬಂದಾಗ ಆಶ್ರಯ ಪಡೆಯಲು ಮರದ ಕೆಳಗೋ, ಅಂಡರ್ ಪಾಸ್ ಕೆಳಗೋ, ಇಲ್ಲ ಯಾವುದಾದರೂ ಬ್ರಿಡ್ಜ್ ಕೆಳಗೋ ವಾಹನ ಸವಾರರು ನಿಂತ್ಕೊಳ್ತಾರೆ. ಆದ್ರೆ, ಇದಕ್ಕೆ ಪೊಲೀಸ್​ ಆಯುಕ್ತರು ಬ್ರೇಕ್​ ಹಾಕಿದ್ದಾರೆ.

ರಾಜಧಾನಿಯಲ್ಲಿ ಜೋರಾಗಿ ಮಳೆ ಬಂದ್ರೆ ವಾಹನ ಸವಾರರು ವಿಧಿಯಿಲ್ಲದೆ ಬ್ರಿಡ್ಜ್​​ ಅಂಡರ್​ ಪಾಸ್​ ಕೆಳಗೆ ವಾಹನಗಳನ್ನು ನಿಲ್ಲಿಸ್ತಾರೆ. ಆದರೆ, ವಾಹನ ನಿಲ್ಲಿಸುವುದಕ್ಕೆ ಸಂಚಾರಿ ಪೊಲೀಸರು ಬ್ರೇಕ್​ ಹಾಕಿದ್ದು. ವಾಹನ ನಿಲ್ಲಿಸುವವರ ವಿರುದ್ಧ ಪ್ರಕರಣ ದಾಖಲು ಮಾಡಲಾಗುವುದೆಂದು ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಚ್ಚರಿಕೆ ನೀಡಿದ್ದಾರೆ. ಈ ನಿರ್ಧಾರಕ್ಕೆ ಉದ್ಯಾನನಗರಿ ಜನರು ಫುಲ್ ಗರಂ ಆಗಿದ್ದಾರೆ.

ಅಂಡರ್ ಪಾಸ್ ಕೆಳಗೆ ನಿಂತ ವಾಹನ ಸವಾರರಿಗೆ ಮೊದಲ ಬಾರಿಗೆ 500 ರೂ. ದಂಡವನ್ನು ವಿಧಿಸಲಾಗುತ್ತದೆ ಮತ್ತು ಎರಡನೇ ಬಾರಿಗೆ 1,000 ರೂ.ದಂಡ ವಿಧಿಸಲಾಗುತ್ತದೆ. ಮಳೆ ಬಂತೆಂದು ಅಂಡರ್​ಪಾಸ್​ನಲ್ಲಿ ವಾಹನ ನಿಲ್ಲಿಸಲಾಗುತ್ತಿದ್ದು, ಇದರಿಂದ ಟ್ರಾಫಿಕ್ ​ಜಾಮ್​ ಉಂಟಾಗುತ್ತಿದೆ. ಇದ್ರ ಜೊತೆಗೆ ಹಿಂಬದಿಯಿಂದ ಬರುವ ವಾಹನಗಳಿಂದ ಅಪಘಾತ ಸಂಭವಿಸುತ್ತಿದೆ ಅಂತಾ ಈ ಆದೇಶ ಮಾಡಲಾಗಿದೆ. ಆದ್ರೆ, ಈ ಆದೇಶದ ವಿರುದ್ಧ ಸಿಟಿಜನರು ಭಾರೀ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಮೊದಲು ಗುಂಡಿಗಳಿಂದ, ಮ್ಯಾನ್ ಹೋಲ್​​ಗಳಿಂದ, ರಾಜಕಾಲುವೆ, ಅವೈಜ್ಞಾನಿಕ ಕಾಮಗಾರಿಗಳಿಂದ ಆಗುವ ಅನಾಹುತ, ಅಪಘಾತಗಳನ್ನು ತಡೆಯಿರಿ, ನಂತರ ಈ ರೂಲ್ಸ್ ಮಾಡಿ ಎಂದು ಕಿಡಿ ಕಾರಿದ್ದಾರೆ.

ಒಟ್ಟಾರೆ ರಾಜಧಾನಿಯಲ್ಲಿ ಆಗುವ ಟ್ರಾಫಿಕ್​, ಅಪಘಾತವನ್ನು ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಆದ್ರೆ, ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕಪಡಿಸಿದ್ದು, ಪೊಲೀಸ್ ಆಯುಕ್ತರು ಮುಂದೆ ಏನು ಕ್ರಮ ಕೈಗೊಳ್ತಾರೆ ಕಾದು ನೋಡಬೇಕಾಗಿದೆ.

ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES