Wednesday, January 22, 2025

ಕಿರೀಟಿ ಸೆಟ್​ಗೆ ದೊಡ್ಮನೆ ದೊರೆ ಶಿವಣ್ಣ ಸರ್​ಪ್ರೈಸ್ ವಿಸಿಟ್

ಗಣಿದನಿ ಗಾಲಿ ಜನಾರ್ದನರೆಡ್ಡಿ ಮಗ ಕಿರೀಟಿ ನಾಯಕನಟನಾಗೋಕೆ ರಾಜಮೌಳಿ ಗ್ರೀನ್ ಸಿಗ್ನಲ್ ಕೊಟ್ಟಾಯ್ತು. ಶೂಟಿಂಗ್ ಕೂಡ ಭರದಿಂದ ಸಾಗ್ತಿದೆ. ಆದ್ರೆ ಸಿನಿಮಾದ ಅಪ್ಡೇಟ್ಸ್ ಇಲ್ಲಿಯವರೆಗೂ ಝೀರೋ. ಸಡನ್ ಆಗಿ ಶೂಟಿಂಗ್ ಸೆಟ್​ಗೆ ಎಂಟ್ರಿ ಕೊಟ್ಟ ಶಿವಣ್ಣನಿಂದ ಸರ್​ಪ್ರೈಸ್ ನ್ಯೂಸ್ ಸಿಕ್ಕಿದೆ.

  • ಸೆಪ್ಟಂಬರ್ 29ಕ್ಕೆ ಬಹುನಿರೀಕ್ಷಿತ ಚಿತ್ರದ ಟೈಟಲ್ ರಿವೀಲ್..!

ಚಂದನವನದ ಭರವಸೆಯ ನಾಯಕನಟನಾಗೋ ಕನಸು ಕಂಡಿರೋ ಗಾಲಿ ಜನಾರ್ದನರೆಡ್ಡಿ ಅವ್ರ ಪುತ್ರ ಕಿರೀಟಿಗೆ ಸೆನ್ಸೇಷನಲ್ ಡೈರೆಕ್ಟರ್ ರಾಜಮೌಳಿ ಬಂದು ಶುಭ ಹಾರೈಸಿದ್ರು. ಸಿನಿಮಾಗೆ ಕ್ಲಾಪ್ ಮಾಡೋ ಮೂಲಕ ಬೆಸ್ಟ್ ವಿಶಸ್ ತಿಳಿಸಿದ್ರು. ಇನ್ನೂ ಹೆಸರಿಡದ ಕಿರೀಟಿ ಸಿನಿಮಾಗೆ ಮಾಯಾಬಜಾರ್ ಖ್ಯಾತಿಯ ಡೈರೆಕ್ಟರ್ ರಾಧಾಕೃಷ್ಣ ರೆಡ್ಡಿ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.

ತೆಲುಗಿನ ಪ್ರತಿಷ್ಟಿತ ಬ್ಯಾನರ್ ವಾರಾಹಿ ಫಿಲ್ಮ್ ಪ್ರೊಡಕ್ಷನ್ ಬ್ಯಾನರ್​ನಡಿ ಸಾಯಿ ಕೊರ್ರಪಾಟಿ ಈ ಚಿತ್ರವನ್ನು ನಿರ್ಮಿಸ್ತಿದ್ದು, ಜಿನೆಲಿಯಾ, ಶ್ರೀಲೀಲಾ, ಕ್ರೇಜಿಸ್ಟಾರ್ ರವಿಚಂದ್ರನ್ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರು ತಾರಾಬಳಗದಲ್ಲಿದ್ದಾರೆ. ಟೀಸರ್ ಹಾಗೂ ಅದ್ರ ಹಿಂದಿನ ಮೇಕಿಂಗ್ ಕಹಾನಿಯ ವಿಡಿಯೋ ಝಲಕ್ ರಿವೀಲ್ ಮಾಡಿದ್ದ ಚಿತ್ರತಂಡ, ಅದಾದ ಬಳಿಕ ಚಿತ್ರದ ಯಾವುದೇ ಅಪ್ಡೇಟ್ ನೀಡಿರಲಿಲ್ಲ.

ಇದೀಗ ಪ್ರೊಡಕ್ಷನ್ ನಂ.15 ಶೂಟಿಂಗ್ ಸೆಟ್​ಗೆ ಕರುನಾಡ ಚಕ್ರವರ್ತಿ ಡಾ. ಶಿವರಾಜ್​ಕುಮಾರ್ ಸರ್​ಪ್ರೈಸ್ ವಿಸಿಟ್ ನೀಡಿದ್ದಾರೆ. ಮಾನ್ಯತಾ ಟೆಕ್​ಪಾರ್ಕ್​ನಲ್ಲಿ ನಡೀತಿದ್ದ ಶೂಟಿಂಗ್ ಅಡ್ಡೆಗೆ ಮನೆಯಲ್ಲೇ ಇದ್ದ ಶಿವಣ್ಣ ಭೇಟಿ ನೀಡಿ, ಚಿತ್ರದ ಫೋಟೇಜ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಿರೀಟಿ ಜೊತೆ ಸೆಟ್​ನಲ್ಲಿ ಅವ್ರ ತಂದೆ ಜನಾರ್ದನರೆಡ್ಡಿ ಕೂಡ ಖುಷಿ ಪಟ್ಟಿದ್ದು, ಶಿವಣ್ಣನ ಆಗಮನ ಕಿರೀಟಿಗೆ ಆನೆಬಲ ಬಂದಂತಾಗಿದೆ.

ಅಂದಹಾಗೆ ಇದೇ ಸೆಪ್ಟೆಂಬರ್ 29ಕ್ಕೆ ಕಿರೀಟಿ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಳ್ತಿದ್ದು, ಅಂದು ಅಫಿಶಿಯಲ್ ಆಗಿ ಚಿತ್ರದ ಟೈಟಲ್ ರಿವೀಲ್ ಆಗಲಿದೆ. ರಾಕ್‌ಸ್ಟಾರ್ ದೇವಿ ಶ್ರೀ ಪ್ರಸಾದ್ ಸಂಗೀತ ನೀಡುತ್ತಿದ್ದು, ಬಾಹುಬಲಿ ಸಿನಿಮಾದ ಕಣ್ಣು ಕೆ ಸೆಂಥಿಲ್ ಕುಮಾರ್ ಛಾಯಾಗ್ರಹಣ, ರವೀಂದರ್ ಕಲಾ ನಿರ್ದೇಶನ, ಭಾರತದ ಟಾಪ್ ಸ್ಟಂಟ್ ನಿರ್ದೇಶಕ ಪೀಟರ್ ಹೆನ್ ಆ್ಯಕ್ಷನ್ ಚಿತ್ರಕ್ಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES