Wednesday, January 22, 2025

ಮೊದಲ ಹೆಂಡ್ತಿ‌ ಜೊತೆ ಡೈವರ್ಸ್ ಪಡೆಯದೆ ಎರಡನೇ ಮದುವೆಯಾದ ಭೂಪ

ಬಳ್ಳಾರಿ : ಹೈದ್ರಾಬಾದ್ ಮೂಲದ ವೈದ್ಯೆಗೆ ಮೋಸ ಮಾಡಿ‌ ಮದುವೆಯಾಗಿ ವಂಚನೆ ಮಾಡಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಐವತ್ತು ಲಕ್ಷ ವರದಕ್ಷಿಣೆ ಒಂದು ಕೆ.ಜಿ. ಬಂಗಾರ ಕೊಟ್ಟು‌ವೆ ಮಾಡಿದ್ರೂ ತೀರದ ಧನದಾಹ ಹೀಗಾಗಿ ಮತ್ತೊಂದು ಮದುವೆಯಾಗಿ ಮೊದಲ ಹೆಂಡ್ತಿ‌ ಮತ್ತೆ ಅವರ ಮನೆಯವರ ಮೇಲೆ ಭೂಪ ಹಲ್ಲೆ ಮಾಡಿದ್ದಾನೆ. ಮೊದಲ ಹೆಂಡ್ತಿ‌ ಜೊತೆ ಡೈವರ್ಸ್ ಮಾಡಿಕೊಳ್ಳದೇ ಎರಡನೇ ಮದುವೆಯಾಗಿದ್ದಾನೆ.

ಇನ್ನು, ಡಾಕ್ಟರ್ ಮೌನಿಕಾರಿಗೆ ‌ಬಳ್ಳಾರಿ ಮೂಲದ ರಘುರಾಮ ರೆಡ್ಡಿ ಜೊತೆಗೆ 2019ರಲ್ಲಿ ಮದುವೆಯಾಗುತ್ತೆ. ಆಸ್ಟ್ರೇಲಿಯಾದಲ್ಲಿ ‌ಕೆಲಸ ಮಾಡೋದಾಗಿ ಹೇಳಿ ಐವತ್ತು ಲಕ್ಷ ಮಗದು ಒಂದು ಕೆ.ಜಿ. ಬಂಗಾರ ವರದಕ್ಷಿಣೆ ಪಡೆದು ಮದುವೆಯಾಗ್ತಾರೆ. ಎರಡು ತಿಂಗಳು ಕೂಡ ಸಂಸಾರ ಮಾಡದ ರಘುರಾಮ ರೆಡ್ಡಿ ಹಣಕ್ಕಾಗಿ ಹೆಂಡ್ತಿಗೆ ಕಿರುಕುಳ ನೀಡ್ತಾನೆ. ಯಾವುದೇ ಕೆಲಸವಿಲ್ಲದ ರಘುರಾಮ ನಿತ್ಯ ಹಣಕ್ಕಾಗಿ ಪೀಡಿಸಿದ ಹಿನ್ನಲೆ ಮನೆಯಿಂದ ವೈದ್ಯೆ ಹೊರ ಬಂದಿದ್ದಾರೆ.

ಅದಲ್ಲದೇ, ಡೈವರ್ಸ್ ಪಡೆಯದೇ ಮತ್ತೊಂದು ಮದುವೆಯಾದ ಹಿನ್ನಲೆ ಪ್ರಶ್ನಿಸಲು ಬಂದಾಗ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ. ಇದೀಗ ವೈದ್ಯೆ ನೀಡಿದ ದೂರಿನನ್ವಯ ಗಂಡ ರಘುರಾಮ ರೆಡ್ಡಿ, ತಂದೆ ನಾಗೀರೆಡ್ಡಿ, ಸಹೋದರ ಹರೀಶ್ ರೆಡ್ಡಿ ಬಂಧಿಸಲಾಗಿದೆ. ಈ ಮೂವರು ಸೇರಿದಂತೆ ಕುಟುಂಬ ಏಳು ಜನರ ಮೇಲೆ ದೂರು ದಾಖಲಾಗಿದ್ದು, ಉಳಿದವರು ನಾಪತ್ತೆಯಾಗಿದ್ದಾರೆ.

RELATED ARTICLES

Related Articles

TRENDING ARTICLES