Monday, December 23, 2024

ಮ್ಯೂಸಿಕ್ ಬಿಟ್ಟು ಶಿವಣ್ಣನಿಗೆ ಅರ್ಜುನ್ ಜನ್ಯ ಆ್ಯಕ್ಷನ್ ಕಟ್

ಸ್ಯಾಂಡಲ್​ವುಡ್​ನ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡೋದು ಬಿಟ್ಟು, ಸಿನಿಮಾಗೆ ಆ್ಯಕ್ಷನ್ ಕಟ್ ಹೇಳೋಕೆ ಸಜ್ಜಾಗಿದ್ದಾರೆ. ಸದ್ದಿಲ್ಲದೆ ಪ್ರೀ ಪ್ರೊಡಕ್ಷನ್ ಕಾರ್ಯಗಳು ನಡೀತಿದ್ದು, ಹೀರೋ ಯಾರು..? ಕಥೆ ಏನು..? ಬಂಡವಾಳ ಹಾಕ್ತಿರೋದಾದ್ರು ಯಾರು..? ಅನ್ನೋ ನಿಮ್ಮ ಹತ್ತು ಹಲವು ಕುತೂಹಲಗಳಿಗೆ ಉತ್ತರ ಇಲ್ಲಿದೆ ಓದಿ.

  • ಗಾಳಿಪಟ ಪ್ರೊಡ್ಯೂಸರ್ ಜೊತೆ ಮ್ಯಾಜಿಕಲ್ ಕಂಪೋಸರ್

ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡೋ ಪ್ರತಿಯೊಬ್ಬ ಟೆಕ್ನಿಷಿಯನ್​ಗೆ ಕರುನಾಡ ಚಕ್ರವರ್ತಿ ಡಾ. ಶಿವರಾಜ್​ಕುಮಾರ್ ಅವ್ರಿಗೆ ಒಂದು ಸಿನಿಮಾ ಆದ್ರೂ ಡೈರೆಕ್ಟ್ ಮಾಡ್ಬೇಕು ಅನ್ನೋ ಕನಸಿರುತ್ತೆ. ಅಂಥದ್ರಲ್ಲಿ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ ಮೈಕ್ ಹಿಡಿದು ಆ್ಯಕ್ಷನ್ ಕಟ್ ಹೇಳೋ ಮನಸ್ಸು ಮಾಡಿರೋದ್ರಲ್ಲಿ ಆಶ್ಚರ್ಯ ಪಡೋ ಅಂಥದ್ದೇನಿಲ್ಲ.

ಹೌದು.. ನೂರಾರು ಸಿನಿಮಾಗಳಿಗೆ ರಾಗಸಂಯೋಜನೆ ಮಾಡಿ, ಸಾಲು ಸಾಲು ಹಿಟ್ ಸಿನಿಮಾಗಳಿಗೆ ಆಲ್ಬಮ್ಸ್ ನೀಡಿರೋ ಅಂತಹ ಅರ್ಜುನ್ ಜನ್ಯ, ಇದೀಗ ಡೈರೆಕ್ಟರ್ ಕ್ಯಾಪ್ ತೊಡಲು ಮುಂದಾಗಿದ್ದಾರೆ. ಅದೂ ಸನ್ ಆಫ್ ಬಂಗಾರದ ಮನುಷ್ಯ ಡಾ. ಶಿವರಾಜ್​ಕುಮಾರ್ ಚಿತ್ರದ ಮೂಲಕ ಅನ್ನೋದು ವಿಶೇಷ.

ಸಂಗೀತ ಸಂಯೋಜಕ, ಗಾಯಕ, ಸಿಂಗಿಂಗ್ ಶೋಗಳ ಜಡ್ಜ್ ಹೀಗೆ ಬೇರೆ ಬೇರೆ ಆಯಾಮಗಳಲ್ಲಿ ಗುರ್ತಿಸಿಕೊಂಡಿದ್ದ ಅರ್ಜುನ್ ಜನ್ಯ, ಶಿವಣ್ಣ ಡೇಟ್ಸ್ ಪಡೆದು, ಕಥೆ ಸಿದ್ಧಗೊಳಿಸ್ತಿದ್ದಾರಂತೆ. ಅಂದಹಾಗೆ ಇನ್ನೂ ಎಲ್ಲೂ ರಿವೀಲ್ ಆಗದ ಈ ಮ್ಯಾಟರ್​ನ ಸ್ವತಃ ಈ ಸಿನಿಮಾಗೆ ಬಂಡವಾಳ ಹಾಕ್ತಿರೋ ನಿರ್ಮಾಪಕ ರಮೇಶ್ ರೆಡ್ಡಿ ಅವ್ರೇ ನಮ್ಮ ಫಿಲ್ಮಿ ಪವರ್ ಟೀಂ ಜೊತೆ ಎಕ್ಸ್​ಕ್ಲೂಸಿವ್ ಆಗಿ ಮಾತನಾಡಿದ್ದಾರೆ.

ಯೆಸ್.. ಗಾಳಿಪಟ 2 ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಹಿಟ್ ಆದ್ಮೇಲೆ ರಮೇಶ್ ರೆಡ್ಡಿ ಅವ್ರ ಸಿನಿಮೋತ್ಸಾಹ ಹಿಮ್ಮಡಿ ಆಗಿದ್ದು, ಇದೀಗ ಶಿವಣ್ಣ ಜೊತೆ ಸಿನಿಮಾ ಮಾಡೋಕೆ ಮುಂದಾಗಿದ್ದಾರೆ. ಅರ್ಜುನ್ ಜನ್ಯ ಡೈರೆಕ್ಟರ್ ಆದ್ಮೇಲೆ ಮ್ಯೂಸಿಕ್ ಮಾಡೋದನ್ನ ಬಿಡ್ತಾರಾ ಅಂತ ಹುಬ್ಬೇರಿಸಬೇಡಿ. ವಿ ಹರಿಕೃಷ್ಣ ರೀತಿ ಸಂಗೀತ ಸಂಯೋಜನೆ ಮಾಡ್ತಾನೇ ಡೈರೆಕ್ಟರ್ ಆಗಿಯೂ ಬ್ಯುಸಿ ಆಗೋ ಮನಸ್ಸು ಮಾಡಿದ್ದಾರೆ ಜನ್ಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES