Wednesday, January 22, 2025

ಎಲ್ಲೆಲ್ಲೂ ಅಪ್ಪು ಕಟೌಟ್ಸ್.. ದೇವರ ವೆಲ್ಕಮ್​ಗೆ ವೆಯ್ಟಿಂಗ್..!

ರಾಜರತ್ನ ಅಪ್ಪು ದೇವರಾಗಿ ದರ್ಶನ ಕೊಡೋಕೆ ಬರ್ತಿದ್ದಾರೆ. ಅವ್ರನ್ನ ಭರ್ಜರಿಯಾಗಿ ವೆಲ್ಕಮ್ ಮಾಡೋಕೆ ಅಭಿಮಾನಿ ದೇವರುಗಳು ಸಹ ಕಾತರರಾಗಿದ್ದಾರೆ. ಲಕ್ಕಿಮ್ಯಾನ್​ನ ಕಣ್ತುಂಬಿಕೊಳ್ತಿರೋ ನಾವೇ ಲಕ್ಕಿ ಅಂತಿದ್ದಾರೆ ಕರುನಾಡ ಮಂದಿ. ಇಷ್ಟಕ್ಕೂ ಲಕ್ಕಿಮ್ಯಾನ್ ರಿಲೀಸ್ ಪ್ಲಾನ್ಸ್ ಏನು ಅಂತೀರಾ..? ನೀವೇ ಓದಿ.

  • ಥಿಯೇಟರ್ ಲಿಸ್ಟ್ ಔಟ್.. ಪುನೀತ್, ಪ್ರಭುದೇವ ಜೊತೆ ಕೃಷ್ಣ

ಯೂತ್​ಫುಲ್ ಎಂಟರ್​ಟೈನರ್ ಲಕ್ಕಿಮ್ಯಾನ್ ಚಿತ್ರ ಇದೇ ಸೆಪ್ಟೆಂಬರ್ 9ಕ್ಕೆ ವರ್ಲ್ಡ್​ವೈಡ್ ರಿಲೀಸ್ ಆಗ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನಟಿಸಿರೋ ಕೊನೆಯ ಕಮರ್ಷಿಯಲ್ ಸಿನಿಮಾ ಅನ್ನೋ ಕಾರಣಕ್ಕೆ ಅತೀವ ನಿರೀಕ್ಷೆ ಮೂಡಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪರಮಾತ್ಮ ಅಪ್ಪು ದೇವರಾಗಿಯೇ ಈ ಚಿತ್ರದಲ್ಲಿ ನೋಡುಗರ ಮುಂದೆ ಬರ್ತಿರೋದು ಇಂಟರೆಸ್ಟಿಂಗ್.

ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ಆ್ಯಕ್ಷನ್ ಕಟ್ ಹೇಳಿರೋ ಈ ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಹಾಗೂ ಪ್ರಭುದೇವ ಡ್ಯಾನ್ಸ್ ಧಮಾಕ ಕಿಕ್ ಕೊಡಲಿದೆ. ಅಲ್ಲದೆ, ಡಾರ್ಲಿಂಗ್ ಕೃಷ್ಣ ಚಾರ್ಲಿ ಬೆಡಗಿ ಸಂಗೀತಾ ಶೃಂಗೇರಿ ಹಾಗೂ ರೋಶಿನಿ ಪ್ರಕಾಶ್ ಜೊತೆ ಡಬಲ್ ರೊಮ್ಯಾನ್ಸ್ ಮಾಡಲಿದ್ದಾರೆ. ಸದ್ಯ ಸ್ಯಾಂಪಲ್ಸ್ ನೋಡುಗರ ನಾಡಿಮಿಡಿತ ಹೆಚ್ಚಿಸಿದ್ದು, ಸಿನಿಮಾಗಾಗಿ ಎಲ್ರೂ ಕೌತುಕರಾಗಿದ್ದಾರೆ.

ಸೆಪ್ಟೆಂಬರ್ 9ಕ್ಕೆ ಸಿನಿಮಾ ರಿಲೀಸ್ ಆಗ್ತಿದ್ದು, ಈಗಾಗ್ಲೇ ಪುನೀತ್ ರಾಜ್​ಕುಮಾರ್ ಕಟೌಟ್ಸ್ ಎಲ್ಲೆಲ್ಲೂ ರಾರಾಜಿಸೋಕೆ ಸಜ್ಜಾಗಿವೆ. ಫ್ಯಾನ್ಸ್​ಗೆ ಇದು ಎಮೋಷನಲ್ ಡೇ ಆಗಲಿದ್ದು, ಹೂವಿನ ಹಾರ ಹಾಕಿ, ಹಾಲಿನ ಅಭಿಷೇಕ್ ಮಾಡಿ, ಪಟಾಕಿ ಸಿಡಿಸೋಕೆ ಇದು ಕೊನೆಯ ಅವಕಾಶವಾಗಿದೆ. ಅಲ್ಲದೆ ಥಿಯೇಟರ್ ಲಿಸ್ಟ್ ಕೂಡ ರಿವೀವ್ ಆಗಿದ್ದು, ವೀರೇಶ್ ಹಾಗೂ ನವರಂಗ್, ವೆಂಕಟೇಶ್ವರ ಸೇರಿದಂತೆ 150ಕ್ಕೂ ಅಧಿಕ ಸೆಂಟರ್​ಗಳಲ್ಲಿ ರಂಜಿಸಲಿದೆ ಲಕ್ಕಿಮ್ಯಾನ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES