Monday, February 24, 2025

ಅನಂತ್​ನಾಗ್​​ಗೆ ಇಂದು ಜನುಮ ದಿನದ ಸಂಭ್ರಮ

ಸ್ಯಾಂಡಲ್​​ವುಡ್​​ನ ಎವರ್ಗ್ರೀನ್ ಹೀರೋ ಅನಂತ್ನಾಗ್ರಿಗೆ ಇಂದು ಜನುಮ ದಿನದ ಸಂಭ್ರಮ. ಇತ್ತೀಚೆಗಷ್ಟೇ ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗೌರವ ಪಡೆದ ಇವ್ರು ಇಂದು 73 ವರ್ಷ ಪೂರೈಸಿ, 74ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

1972 ರಲ್ಲಿ ಸಂಕಲ್ಪ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅನಂತ್ನಾಗ್, ಬೆಂಕಿಯ ಬಲೆ, ಚಂದನದ ಗೊಂಬೆ, ಇಬ್ಬನಿ ಕರಗಿತು, ಮುದುಡಿದ ತಾವರೆ ಅರಳಿತು, ಬೆಳದಿಂಗಳ ಬಾಲೆ, ಮಕ್ಕಳಿರಲವ್ವ ಮನೆತುಂಬ, ಮಿಂಚಿನ ಓಟ ಸೇರಿದಂತೆ ಸಾಲು ಸಾಲು ಹಿಟ್ ಚಿತ್ರಗಳನ್ನ ಕೊಟ್ಟರು.

ರಂಗಭೂಮಿಯಲ್ಲೂ ಅದ್ಭುತ ಸಾಧನೆ ಮಾಡಿರುವ ಅನಂತ್ನಾಗ್, ಕನ್ನಡದ ಜೊತೆ ಕೊಂಕಣಿ, ಮರಾಠಿ ಹಾಗೂ ಹಿಂದಿ ನಾಟಕಗಳಲ್ಲಿ ಸುಮಾರು ಐದು ವರ್ಷಗಳ ಕಾಲ ಬಣ್ಣ ಹಚ್ಚಿದ್ರು. ಭಾರತೀಯ ಚಿತ್ರರಂಗದ ಅಪರೂಪದ ಕಲಾವಿದ ಅನಿಸಿಕೊಂಡಿರೋ ಅನಂತ್ನಾಗ್ ಕಲಾಸೇವೆಗೆ ಇದುವರೆಗೆ ಆರು ಬಾರಿ ಫಿಲ್ಮ್ಫೇರ್ ಪ್ರಶಸ್ತಿ, ನಾಲ್ಕು ಬಾರಿ ರಾಜ್ಯ ಪ್ರಶಸ್ತಿಗಳು ಲಭಿಸಿವೆ.

RELATED ARTICLES

Related Articles

TRENDING ARTICLES