Friday, January 10, 2025

ಕಾಕ್ರೋಚ್ ಇನ್ಮುಂದೆ ಶುಂಠಿ’ಯಾಗಿ ಘರ್ಜನೆ

ಬೆಂಗಳೂರು: ಸಲಗ ಚಿತ್ರದಲ್ಲಿ ಕಾಕ್ರೋಚ್ ಆಗಿ ಸದ್ದು ಮಾಡಿದ ಸುಧಿ ಅನ್ನೋ ಬಹುಮುಖ ಪ್ರತಿಭೆಗೆ ದುನಿಯಾ ವಿಜಯ್ ಅವ್ರು ಹೊಸ ಇಮೇಜ್ ಕೊಟ್ಟಿದ್ದಾರೆ. ಜಿಂಜರ್ ಅಲಿಯಾಸ್ ಶುಂಠಿಯಾಗಿ ಭೀಮನೊಟ್ಟಿಗೆ ಕಮಾಲ್ ಸುಧಿ ಮಾಡಲಿದ್ದಾರೆ.

ದುನಿಯಾ ಸೂರಿ ಸಿನಿಮಾಗಳಂತೆ, ದುನಿಯಾ ವಿಜಯ್ ಸಿನಿಮಾಗಳೂ ಸಹ ಹತ್ತು ಹಲವು ಕಾರಣಗಳಿಂದ ನೋಡುಗರ ಹುಬ್ಬೇರಿಸುವಂತಾಗಿವೆ. ಕಾರಣ ಚಿತ್ರದ ಜಾನರ್, ಪಾತ್ರಗಳು, ಅವುಗಳ ಹೆಸರುಗಳು ಮತ್ತು ಮೇಕಿಂಗ್. ಸಲಗ ಆಯ್ತು ಈಗ ಭೀಮ ಟಾಕ್ ಆಫ್ ದಿ ಟೌನ್. ಅದ್ರಲ್ಲೂ ಕಾಕ್ರೋಚ್ ಸುಧಿಯ ನ್ಯೂ ಇಮೇಜ್ ಜಿಂಜರ್ ಅಲಿಯಾಸ್ ಶುಂಠಿ ಟ್ರೆಂಡ್​ನಲ್ಲಿದೆ.

ಹೌದು.. ಕಾಕ್ರೋಚ್ ಸುಧಿ ಸಲಗ ಚಿತ್ರದಿಂದ ಒಳ್ಳೆಯ ನೇಮು ಫೇಮು ಮಾಡಿದ್ದರು, ಇದೀಗ ಅವರಿಗೆ ಮತ್ತೊಂದು ಟೈಟಲ್ ಬರುವ ಸಾಧ್ಯತೆಯಿದೆ. ವೆಲ್ಕಮ್ ಆನ್ ಬೋರ್ಡ್​ ಶುಂಠಿ ಅಂತ ದುನಿಯಾ ವಿಜಯ್ ಅವರು ಪೋಸ್ಟ್ ಹಾಕಿದ್ದು, ಸುಧಿಗೆ ಪ್ರೇಕ್ಷಕರು ಇನ್ಮೇಲೆ ಶುಂಠಿ ಅಂತ ಕರೆದರೂ ಅಚ್ಚರಿಯಿಲ್ಲ. ಸುಕ್ಕಾ ಸೂರಿ ಸಿನಿಮಾಗಳ ರೀತಿ ದುನಿಯಾ ವಿಜಯ್ ಕೂಡ ಕಥೆ, ಪಾತ್ರಗಳು ಹಾಗೂ ಅವುಗಳನ್ನ ನಿರೂಪಿಸುವ ಪರಿಯಲ್ಲಿ ವಿಭಿನ್ನತೆ ಕಾಯ್ದುಕೊಳ್ತಿದ್ದಾರೆ.

ಈಗಾಗ್ಲೇ ಡ್ರ್ಯಾಗನ್ ಮಂಜು ಹಾಗೂ ಪೊಲೀಸ್ ಕಾಪ್ ಗಿರಿಜಾ ಅವ್ರನ್ನ ಭೀಮ ದುನಿಯಾಗೆ ಪರಿಚಯ ಮಾಡಿರುವ ವಿಜಯ್ ಕುಮಾರ್, ತನ್ನ ಪಾತ್ರಕ್ಕೂ ಮುನ್ನ ಉಳಿದ ಪಾತ್ರಗಳಿಂದ ಸಿನಿಮಾದ ನಿರೀಕ್ಷೆ ಹೆಚ್ಚಿಸುತ್ತಿದ್ದಾರೆ. ಸಲಗ ರೀತಿ ಭೀಮ ಕೂಡ ಅಂಡರ್​ವರ್ಲ್ಡ್​ ಕಥಾನಕ ಆಗಿರಲಿದೆ. ಆದರೆ ಈ ಬಾರಿ ಯಾವ ಬಗೆಯ ಕಥೆಯನ್ನ ಪ್ರೆಸೆಂಟ್ ಮಾಡ್ತಾರೆ ಎನ್ನೋ ಕ್ಯೂರಿಯಾಸಿಟಿ ಇದೆ. ಜಗದೀಶ್ ಹಾಗೂ ಕೃಷ್ಣ ಸಾರ್ಥಕ್ ನಿರ್ಮಾಣದ ಈ ಚಿತ್ರಕ್ಕೆ ಮಾಸ್ತಿ ಸಂಭಾಷಣೆಯಿದ್ದು, ಮೇಕಿಂಗ್ ಹಂತದಲ್ಲೇ ಭೀಮ ಸಿನಿಮಾ ಸೌಂಡ್ ಮಾಡುತ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

 

RELATED ARTICLES

Related Articles

TRENDING ARTICLES