Monday, December 23, 2024

2 ವರ್ಷದ ನಂತ್ರ ಅಭಿಮಾನಿಗಳಿಂದ ಅದ್ಧೂರಿ ‘ಕಿಚ್ಚೋತ್ಸವ’

ಕೊರೋನಾದಿಂದಾಗಿ ಎರಡು ವರ್ಷದಿಂದ ಬರ್ತ್ ಡೇ ಸೆಲೆಬ್ರೇಷನ್​ಗೆ ಬ್ರೇಕ್ ಹಾಕಿದ್ದ ಆಲ್ ಇಂಡಿಯಾ ಕಟೌಟ್ ಕಿಚ್ಚ ಸುದೀಪ್, ಈ ಬಾರಿ ಫ್ಯಾನ್ಸ್ ಜೊತೆ ಕಿಚ್ಚೋತ್ಸವ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಅಸಹಾಯಕರ ಪಾಲಿನ ಆಶಾಕಿರಣವಾಗಿರೋ ಮಾಣಿಕ್ಯ, ಸಾಮಾಜಿಕ ಸೇವೆ ಜೊತೆ ಸಿನಿಮಾ ಸೇವೆ ಮುಂದುವರೆಸಿದ್ದಾರೆ. ಆ ಅವಿಸ್ಮರಣೀಯ ಸಂಭ್ರಮದ ಕಂಪ್ಲೀಟ್ ಝಲಕ್ ಇಲ್ಲಿದೆ.

  • ಒರಿಸ್ಸಾ ಬೀಚ್​ನಲ್ಲಿ ಸುದೀಪ.. ಕಾಲಿಲ್ಲದವ್ರ ಜೀವನಕ್ಕೆ ದೀಪ
  • ಬರ್ತ್ ಡೇಗೆ ಸಿಗಲೇ ಇಲ್ಲ ನ್ಯೂ ಮೂವಿ ಲಾಂಚ್ ಅಪ್ಡೇಟ್..!
  • ಪುಣ್ಯಕೋಟಿ ರಾಯಭಾರಿಯಾದ ಆಲ್ ಇಂಡಿಯಾ ಕಟೌಟ್

ಕಿಚ್ಚನ ಗತ್ತು ಅವ್ರನ್ನ ಪ್ರೀತ್ಸೋರಿಗೆ ಮಾತ್ರ ಗೊತ್ತು ಅನ್ನೋ ಮಾತಿದೆ. ಯೆಸ್.. ಒಂದು ಕಾಲದಲ್ಲಿ ಐರನ್ ಲೆಗ್ ಅಂತ ಇಡೀ ಚಿತ್ರರಂಗ ಇವ್ರನ್ನ ಕಡೆಗಣಿಸಿತ್ತು. ಆದ್ರೀಗ ಇವ್ರು ಆಲ್ ಇಂಡಿಯಾ ಕಟೌಟ್. ಪ್ಯಾನ್ ಇಂಡಿಯಾ, ಪ್ಯಾನ್ ವರ್ಲ್ಡ್​ ಸೂಪರ್ ಸ್ಟಾರ್. ಒಬ್ಬ ಕಲಾವಿದ ಗೋಲ್ಡ್ ಸ್ಪೂನ್​ನೊಂದಿಗೆ ಜನಿಸಿದ್ರೂ, ಸುಖದ ಸುಪ್ಪೊತ್ತಿಗೆಯಲ್ಲಿ ಬೆಳೆದರೂ, ಗಾಡ್​ಫಾದರ್ ಇಲ್ಲದೆ ಇಂಡಸ್ಟ್ರಿಯಲ್ಲಿ ನೆಲೆಯೂರೋದು ಕಷ್ಟವಾಗಿತ್ತು. ಅವಮಾನ, ಅಪಮಾನಗಳನ್ನ ಸಹಿಸಿಕೊಂಡು ತಾಳ್ಮೆಯಿಂದ ಇದ್ದ ಪ್ರತಿಫಲವೇ ಇಂದು ಕಿಚ್ಚ ಬರೋಬ್ಬರಿ 25 ವರ್ಷದಷ್ಟು ದೊಡ್ಡ ಸಿನಿಪಯಣ ಮಾಡಿ ಬಂದಿದ್ದಾರೆ.

ವಿಕ್ರಾಂತ್ ರೋಣನಾಗಿ ವರ್ಲ್ಡ್​ ಕಟೌಟ್ ಹಾಕಿಸಿಕೊಂಡ ಕಿಚ್ಚ, ಅಭಿನಯದಲ್ಲಿ ಚಕ್ರವರ್ತಿ ಅನ್ನೋದನ್ನ ಇಡೀ ವಿಶ್ವಕ್ಕೆ ಸಾರಿದ್ರು. ಪರಭಾಷಾ ಸೂಪರ್ ಸ್ಟಾರ್ಸ್​, ಸೆನ್ಸೇಷನಲ್ ಡೈರೆಕ್ಟರ್ಸ್​ಗೆ ಇವ್ರೇ ಅಚ್ಚುಮೆಚ್ಚು. ಇವ್ರ ಡೇಟ್ಸ್​​ಗಾಗಿ ರಾಜಮೌಳಿ, ಚಿರಂಜೀವಿ, ಸಲ್ಮಾನ್ ಖಾನ್, ವಿಜಯ್ ಕೂಡ ಕ್ಯೂ ನಿಲ್ತಾರೆ. ಇಂತಹ ಅಧಮ್ಯ ಪ್ರತಿಭೆಗೆ ಇಂದು ಬರ್ತ್ ಡೇ ಸಂಭ್ರಮ. ಹೌದು.. 48 ವಸಂತಗಳನ್ನ ಕಳೆದು 49ನೇ ವರುಷಕ್ಕೆ ಕಾಲಿಟ್ಟಿರೋ ಕಿಚ್ಚನಿಗೆ ಫ್ಯಾನ್ಸ್ ಕಿಚ್ಚೋತ್ಸವದ ಮೂಲಕ ಸೂಪರ್ ಸರ್​ಪ್ರೈಸ್ ಕೊಟ್ಟಿದ್ದಾರೆ.

ಎರಡು ವರ್ಷದಿಂದ ಕೊರೋನಾ ಕಾರಣಕ್ಕೆ ಅದ್ಧೂರಿ ಬರ್ತ್ ಡೇ ಸೆಲೆಬ್ರೇಷನ್​ಗೆ ಬ್ರೇಕ್ ಹಾಕಿದ್ದ ಕರುನಾಡ ಮಾಣಿಕ್ಯ, ಈ ವರ್ಷ ಅವ್ರನ್ನ ನಿರಾಸೆಗೊಳಿಸಲಿಲ್ಲ. ರಾಜ್ಯದ ಮೂಲೆ ಮೂಲೆಯಿಂದ ಬಂದಂತಹ ಸಹಸ್ರಾರು ಅಭಿಮಾನಿಗಳನ್ನ ಪ್ರೀತಿಯಿಂದ ಮಾನತಾಡಿಸಿ, ಅವ್ರ ಪ್ರೀತಿಯ ಶುಭಾಶಯಗಳನ್ನು ಪಡೆದರು. ಕೇಕ್, ಹೂವಿನ ಹಾರ, ಸಣ್ಣಪುಟ್ಟ ಗಿಫ್ಸ್ಟ್​ನೊಂದಿಗೆ ಅವ್ರು ಬಣ್ಣಿಸಲಾಗದ ಅಭಿಮಾನಕ್ಕೆ ದಿಲ್​ಖುಷ್ ಆದ್ರು ಕಿಚ್ಚ.

ಇನ್ನು ಮರಳು ಶಿಲ್ಪದ ತವರೂರು ಒರಿಸ್ಸಾದ ಪುರಿ ಬೀಚ್​ನಲ್ಲಿ ಕಿಚ್ಚ ಸುದೀಪ್ ಅವ್ರ ಬೃಹತ್ ಮರಳು ಶಿಲ್ಪ ಈ ವರ್ಷದ ಸ್ಪೆಷಲ್ ಅಟ್ರ್ಯಾಕ್ಷನ್. ಮಾನಸ್ ಕುಮಾರ್ ಅನ್ನೋ ಹೆಸರಾಂತ ಶಿಲ್ಪಿ ಸುಮಾರು 20 ಅಡಿ ಅಗಲ, 7 ಅಡಿ ಎತ್ತರವಿರೋ ಸುದೀಪ್​ರ ಭಾವಚಿತ್ರ ಮೂಡೋ ಅಂತಹ ಬೃಹತ್ ಮರಳು ಶಿಲ್ಪ ನಿರ್ಮಿಸಿದ್ದಾರೆ. ಅದಕ್ಕಾಗಿ ಅವ್ರು ಸುಮಾರು 20 ಟನ್ ಮರಳನ್ನು ಬಳಸಿರೋದು ವಿಶೇಷ. ಇದು ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್​ರ ಬಳಿಕ ಸೌತ್ ಸ್ಟಾರ್​ಗೆ ಸಿಗ್ತಿರೋ ಗೌರವವಾಗಿದ್ದು, ಸುದೀಪ್​ರ ಆಪ್ತ ವೀರಕಪುತ್ರ ಶ್ರೀನಿವಾಸ್ ಇದ್ರ ಹಿಂದಿನ ಅಸಲಿ ಸೂತ್ರದಾರರಾಗಿದ್ದಾರೆ.

ಯಾವುದೇ ಅಪೇಕ್ಷೆಯಿಲ್ಲದೆ, ನಿಸ್ವಾರ್ಥದಿಂದ ತಾನು ದುಡಿದ ಹಣದಲ್ಲಿ ಒಂದಷ್ಟು ಮೊತ್ತವನ್ನು ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿ ಮುಖೇನ ಸಾಮಾಜಿಕ ಕಾರ್ಯಗಳನ್ನ ಮಾಡ್ತಿದ್ದಾರೆ ಕಿಚ್ಚ ಸುದೀಪ್. ರಮೇಶ್ ಕಿಟ್ಟಿ, ನವೀನ್, ಜಗದೀಶ್ ಸೇರಿದಂತೆ ಆಪ್ತರ ಗೆಳೆಯರು ನಡೆಸ್ತಿರೋ ಈ ಚಾರಿಟಬಲ್ ಸೊಸೈಟಿಯಿಂದ ಈ ಬಾರಿ ಕಾಲಿಲ್ಲದ ಅದೆಷ್ಟೋ ಮಂದಿ ಅಸಹಾಯಕರಿಗೆ ಕಾಲಾಗಿ ನಿಂತಿದ್ದಾರೆ ಮ್ಯಾನ್ ಆಫ್ ಮಿಲಿಯನ್ ಹಾರ್ಟ್ಸ್ ಕಿಚ್ಚ ಸುದೀಪ್.

ಆರ್ ಚಂದ್ರು ನಿರ್ದೇಶನದ ಕಬ್ಜ ಚಿತ್ರದ ನ್ಯೂ ಪೋಸ್ಟರ್ ಬಿಟ್ರೆ ಕಿಚ್ಚನ ಜನುಮ ದಿನಕ್ಕೆ ಬೇರಾವ ಸಿನಿಮಾದ ಸುಳಿವು ಸಿಕ್ಕಿಲ್ಲ. ಸುದೀಪ್​ರ ನೆಕ್ಸ್ಟ್ ನಡೆ ಏನು ಅನ್ನೋದು ನಿಗೂಢವಾಗಿದ್ದು, ಕಬಾಲಿ ಸಿನಿಮಾದ ನಿರ್ಮಾಪಕ ಕಲೈಪುರಿ ಎಸ್. ಥಾನು ಬಂದು ಕಿಚ್ಚನಿಗೆ ಗಿಫ್ಟ್ ನೀಡಿ, ಶುಭಾಶಯ ಕೋರಿರೋದು ಹತ್ತು ಹಲವು ಗುಮಾನಿಗಳಿಗೆ ಕಾರಣವಾಗಿದೆ. ಇದಲ್ಲದೆ ಸರ್ಕಾರದ ಪಶುಸಂಗೋಪನಾ ಇಲಾಖೆಯ ಪುಣ್ಯಕೋಟಿ ರಾಯಭಾರಿಯಾಗಿ ಕಿಚ್ಚ ಆಯ್ಕೆಯಾಗಿರೋದು ಮತ್ತೊಂದು ಖುಷಿ.

ಇನ್ನು ಫ್ಯಾನ್ಸ್​ನ ಜೆಪಿ ನಗರದ ತಮ್ಮ ನಿವಾಸದಲ್ಲಿ ಭೇಟಿ ಮಾಡಿದ ಕಿಚ್ಚನಿಗೆ ಪತ್ನಿ ಪ್ರಿಯಾ ಸುದೀಪ್ ಕೂಡ ಸಾಥ್ ನೀಡಿದ್ರು. ಬಂದಂತಹ ಅಷ್ಟೂ ಮಂದಿಗೆ ಸೆಲ್ಫಿ ನೀಡಿ, ಅವ್ರೊಂದಿಗಿನ ಬಾಂಧವ್ಯ ಮತ್ತಷ್ಟು ಹೆಚ್ಚುವಂತೆ ಮಾಡಿದ್ರು ಕರುನಾಡ ರನ್ನ. ಅದೇನೇ ಇರಲಿ, ಕಿಚ್ಚ ಸುದೀಪ್ ಇಂಟರ್​ನ್ಯಾಷನಲ್ ಲೆವೆಲ್​ನಲ್ಲಿ ರಾರಾಜಿಸಬೇಕು. ಕನ್ನಡದ ಕೀರ್ತಿ ಪತಾಕೆ ನಿರಂತರವಾಗಿ ಹಾರುತ್ತಿರಬೇಕು ಅನ್ನೋದೇ ನಮ್ಮ ಆಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES