Monday, December 23, 2024

ಪವರ್ ಟಿವಿಯಲ್ಲಿ ಕಾಂತಾರ ಗಮ್ಮತ್ತು ತೆರೆದಿಟ್ಟ ರಿಷಬ್

ಕಾಂತಾರ ಆದ್ಮೇಲೆ ರೆಮ್ಯುನರೇಷನ್ ಹೆಚ್ಚಿಸಿಕೊಳ್ತೀನಿ ಅಂದಿರೋ ಡಿಟೆಕ್ಟಿವ್ ದಿವಾಕರ್ ಸದ್ಯ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಕೆಜಿಎಫ್ ಮೇಕರ್ಸ್​ನ ಕಾಂತಾರ ಸ್ಯಾಂಡಲ್​ವುಡ್​ನ ವಿನೂತನ ಪ್ರಯೋಗವಾಗಿದ್ದು, ನಾಡಹಬ್ಬ ದಸರಾಗೆ ವೈಭವ ತೋರಲಿದೆ. ಈ ಬಗ್ಗೆ ಫಿಲ್ಮಿ ಪವರ್ ಟೀಂ ಜೊತೆ ರಿಷಬ್ ಶೆಟ್ಟಿ ಡಿಟೈಲ್ಡ್ ಆಗಿ ಮಾತನಾಡಿದ್ದಾರೆ.

  • ಸೆಪ್ಟೆಂಬರ್ 5ಕ್ಕೆ ಟ್ರೈಲರ್.. ದಸರಾಗೆ ಬಿಗ್​ಸ್ಕ್ರೀನ್ ಎಂಟ್ರಿ
  • ಭತ್ತ ಕುಟ್ಟೋವಾಗಿನ ಜನಪದ ನೆನೆದ ಮಲ್ಟಿ ಟ್ಯಾಲೆಂಟ್
  • ಇದು ಕೆಜಿಎಫ್ ಹೊಂಬಾಳೆಯ ನ್ಯೂ ಎಕ್ಸ್​ಪೆರಿಮೆಂಟ್

ನಿನ್ನೊಳಗಿನ ಕಿಚ್ಚು ನಿನ್ನನ್ನೇ ಸುಡದಿರಲಿ ಅನ್ನೋ ಅರ್ಥಪೂರ್ಣ ಟ್ಯಾಗ್​ಲೈನ್​ನೊಂದಿಗೆ ಬರ್ತಿರೋ ಕಾಂತಾರ ಸಿನಿಮಾ ಕರಾವಳಿಯ ಸಂಸ್ಕೃತಿಯನ್ನ ಅರ್ಥೈಸೋ ಸಿನಿಮಾ. ಅಲ್ಲದೆ, ಮನುಷ್ಯ ಹಾಗೂ ಪ್ರಕೃತಿಯ ನಡುವಿನ ಸಂಬಂಧವನ್ನು ಹೇಳಲು ಹೊರಟಿರೋ ಒಂದು ವಿನೂತನ ಕಥಾನಕ.

ಬಹುಮುಖ ಪ್ರತಿಭೆ ರಿಷಬ್ ಶೆಟ್ಟಿ ಅವ್ರೇ ನಿರ್ದೇಶಿಸಿ, ನಟಿಸಿರೋ ಈ ಸಿನಿಮಾ ಟೀಸರ್ ಹಾಗೂ ಸಾಂಗ್​ನಿಂದ ಅದ್ರ ಅಸಲಿಯತ್ತು ಪರಿಚಯಿಸೋ ಕಾರ್ಯ ಮಾಡಿದೆ. ಕೆಜಿಎಫ್ ನಿರ್ಮಾಪಕರಾದ ಹೊಂಬಾಳೆ ಫಿಲಂಸ್​ನ ವಿಜಯ್ ಕಿರಗಂದೂರು ಅವ್ರೇ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಸ್ಕ್ರೀನ್ ತುಂಬಾನೇ ರಿಚ್ ಆಗಿರಲಿದೆ ಅನ್ನೋದು ಓಪನ್ ಸೀಕ್ರೆಟ್.

ಕರಾವಳಿಯ ಕಂಬಳ, ಭೂತಕೋಲ ಸೇರಿದಂತೆ ಅಲ್ಲಿನ ಮಣ್ಣಿನ ಸೊಗಡಿನ ಹಾಗೂ ಸೊಬಗಿನ ಚಿತ್ರವಿದು. ಈ ಹಿಂದೆಯೇ ನಿಗದಿ ಆಗಿದ್ದಂತೆ ಇದೇ ಸೆಪ್ಟೆಂಬರ್ 30ಕ್ಕೆ ಥಿಯೇಟರ್​ನಲ್ಲಿ ಬ್ಯಾಂಗ್ ಮಾಡಲು ಕಾಂತಾರ ಬರ್ತಿದ್ದು, ಟ್ರೈಲರ್ ಲಾಂಚ್ ಡೇಟ್ ಅನೌನ್ಸ್ ಮಾಡಿದೆ ಟೀಂ. ಸೆಪ್ಟೆಂಬರ್ 5ಕ್ಕೆ ಟ್ರೈಲರ್ ಲಾಂಚ್ ಆಗ್ತಿದ್ದು, ಸಿಂಗಾರ ಸಿರಿಯೆ ಸಾಂಗ್ ರಿಷಬ್​ ನಟಿಸಿದ ಈ ಹಿಂದಿನ ಉಳಿದವರು ಕಂಡಂತೆಯ ಘಾಟಿಯಾ, ಬೆಲ್​ಬಾಟಂನ ಬೊಗಸೆ ತುಂಬಾ ಹಾಡುಗಳ ಶೈಲಿಯಲ್ಲಿದೆ.ಈ ಬಗ್ಗೆ ಕಾಂತಾರ ಕ್ಯಾಪ್ಟನ್ ರಿಷಬ್, ನಮ್ಮ ಫಿಲ್ಮಿ ಪವರ್ ಟೀಂ ಜೊತೆ ಎಕ್ಸ್​ಕ್ಲೂಸಿವ್ ಆಗಿ ಮಾತನಾಡಿದ್ದಾರೆ.

ಒಟ್ಟಾರೆ ಸದಾ ಭಿನ್ನ ಅಲೆಯ ಸಿನಿಮಾಗಳನ್ನೇ ನೀಡೋ ಶೆಟ್ರು, ಕಾಂತಾರದಿಂದ ಹೊಸದೊಂದು ಟ್ರೆಂಡ್ ಸೆಟ್ ಮಾಡಲಿದ್ದಾರೆ ಎನ್ನಲಾಗ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES