Wednesday, January 22, 2025

ಮಕ್ಕಳ ಪರ ನಿಂತಿದ್ದಕ್ಕೆ ಒಡನಾಡಿ ನಿರ್ದೇಶಕರಿಗೆ ಪ್ರಾಣ ಬೆದರಿಕೆ

ಮೈಸೂರು: ಒಡನಾಡಿ ನಿರ್ದೇಶಕರುಗಳಿಗೆ ಅನಾಮಧೇಯ ವ್ಯಕ್ತಿಗಳಿಂದ ಪ್ರಾಣ ಬೆದರಿಕೆ ಕರೆ ಬರುತ್ತೀವೆ ಎಂದು ಪೊಲೀಸ್​ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಮುರುಘಾ ಮಠದ ಶಿವಮೂರ್ತಿ ಶರಣರ ಬಂಧನದ ಪ್ರಕರಣದಲ್ಲಿ ಮಕ್ಕಳ ಪರ ನಿಂತಿದ್ದಕ್ಕೆ ಒಡನಾಡಿ ಸಂಸ್ಥೆಯ ನಿರ್ದೇಶಕರಾದ ಕೆ.ವಿ ಸ್ಟ್ಯಾನ್ಲಿ, ಎಂ.ಎಲ್​ ಪರಶುರಾಮ್ ಹಾಗೂ ಸಿಬ್ಬಂದಿಗೆ ಅನಾಮಧೇಯ ಕರೆ ಬರುತ್ತೀವೆ ಎಂದು ಆರೋಪಿಸಿದ್ದಾರೆ.

ಮುರುಘಾ ಶ್ರೀ ಪ್ರಕರಣದಲ್ಲಿ ಪ್ರಾಣ ಬೆದರಿಕೆ ಹಾಗೂ ಅಸಮಾಧಾನ ಕರೆಗಳ ಆಗಮನ ಹಿನ್ನಲೆಯಲ್ಲಿ ಒಡನಾಡಿ ಮಡಿಲು ಪುನರ್ವಸತಿ ಕೇಂದ್ರಕ್ಕೆ ಹಾಗೂ ಕುಟುಂಬ ಹಾಗೂ ವೈಯ್ಯಕ್ತಿಕ‌ ರಕ್ಷಣೆ ಕೋರಿ ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರದ ಮೂಲಕ ಮನವಿ ಮಾಡಲಾಗಿದೆ.

ನಮಗೆ ಗನ್ ಮ್ಯಾನ್ ಸೌಲಭ್ಯವನ್ನು ಕಲ್ಪಿಸಿಕೊಡಿ, ಪುನರ್ವಸತಿ ಕೇಂದ್ರದ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಿ ಎಂದು ನಗರ ಪೊಲೀಸ್ ಆಯುಕ್ತರಿಗೆ ಚಂದ್ರಗುಪ್ತ ಅವರಿಗೆ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಹಾಗೂ ಪರಶುರಾಮ್ ರಿಂದ ಮನವಿ ಮಾಡಲಾಗಿದೆ.

RELATED ARTICLES

Related Articles

TRENDING ARTICLES