ಚಿತ್ರದುರ್ಗ : DySP ಅನಿಲ್ ಕುಮಾರ್ ನೇತೃತ್ವದಲ್ಲಿ ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಶ್ರೀಗಳ ವಿಚಾರಣೆ ನಡೆಯುತ್ತಿದೆ.
ಇನ್ನು, ವಿಚಾರಣೆ ಆರಂಭ ಆಗುತ್ತಿದ್ದಂತೆ ಶ್ರೀಗಳು ಮೌನಕ್ಕೆ ಶರಣಾಗಿದ್ದಾರೆ. ಸಾಲು ಸಾಲು ಪ್ರಶ್ನೆಗಳನ್ನ ಕೇಳಿ ತನಿಖಾಧಿಕಾರಿಗಳು ಹೈರಾಣಾಗಿದ್ದಾರೆ. ಮುರುಘಾಶ್ರೀಗಳಿಗೆ ಪೊಲೀಸ್ ಕಸ್ಟಡಿ ಅಂತ್ಯ ಆಗೋವರೆಗೂ ರಿಲೀಫ್ ಇಲ್ಲ, ಸೋಮವಾರ ಅರ್ಜಿ ಪರಿಗಣಿಸುತ್ತೇವೆ ಎಂದು ಕೋರ್ಟ್ ಆದೇಶ ಹೊರಡಿಸಿದೆ.
ಪೊಲೀಸ್ ಕಸ್ಟಡಿ ಅಂತ್ಯ ಆಗೋವರೆಗೂ ರಿಲೀಫ್ ಇಲ್ಲ, ಕಸ್ಟಡಿ ಅವಧಿ ಮುಗಿದು ಜೆಸಿಗೆ ನೀಡಲಿ, ಆನಂತರ ಅರ್ಜಿ ವಿಚಾರಣೆ ಪರಿಗಣಿಸುತ್ತೇವೆ ಎಂದು ಕೋರ್ಟ್ ತಿಳಿಸಿದೆ. ವಕೀಲರು ಮುರುಘಾಶ್ರೀ ಪರ ವಕೀಲ ಉಮೇಶ್ ಬೇಲ್ಗಾಗಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಸೋಮವಾರ ಪೊಲೀಸ್ ಕಸ್ಟಡಿ ಮುಗಿಯುತ್ತೆ. ಅಲ್ಲಿವರೆಗೂ ಅರ್ಜಿ ತಗೆದುಕೊಳ್ಳಲ್ಲ ಎಂದು ಕೋರ್ಟ್ ತಿಳಿಸಿದೆ. ವಕೀಲರು ಅನಾರೋಗ್ಯ ಕಾರಣ ಹೇಳಿ ಅರ್ಜಿ ಸಲ್ಲಿಸಿದ್ದರು.ಇತ್ತ ಪರಮಶಿವಯ್ಯ, ಗಂಗಾಧರಪ್ಪರಿಂದ JMFC ಕೋರ್ಟ್ಗೆ ಬೇಲ್ಗೆ ಅರ್ಜಿ ಸಲ್ಲಿಸಲಿದ್ದಾರೆ.