Monday, December 23, 2024

ಮುರುಘಾ ಮಠದಲ್ಲಿ ನೀರವ ಮೌನ

ಚಿತ್ರದುರ್ಗ : ಒಂದಡೆ ಕಣ್ಣೀರು ಹಾಕ್ತಿರುವ ಮುರುಘಾ ಶ್ರೀಗಳ ಶಿಷ್ಯ ಬಳಗ.. ಮತ್ತೊಂದಡೆ ಭಕ್ತರಿಲ್ಲದೆ ಬಿಕೋ ಎನ್ನುತ್ತಿರುವ ಮುರುಘಾ ಮಠ.. ಇದು ಕೋಟೆನಾಡು ಚಿತ್ರದುರ್ಗದ ಮುರುಘಾ ಮಠದಲ್ಲಿ ಕಂಡು ಬಂದ ದೃಶ್ಯಗಳು. ಸಾಮಾಜಿಕ ಮತ್ತು ಶೈಕ್ಷಣಿಕ ವಿಚಾರದಲ್ಲಿ ನಾಡಿನಾದ್ಯಂತ ಹೆಸರು ಮಾಡಿದ ಮಠಕ್ಕೆ ಇದೀಗ ಲೈಂಗಿಕ ಕಳಂಕ ತಟ್ಟಿದೆ.

ಡಾ.ಶಿವಮೂರ್ತಿ ಮುರುಘಾ ಶ್ರೀಗಳು ಬಂಧನಕ್ಕೊಳಗಾದ ಬೆನ್ನಲ್ಲೇ ಭಕ್ತರಿಲ್ಲದೆ ಮಠ ಬಿಕೋ ಎನ್ನುತ್ತಿದೆ. ಶ್ರೀಗಳನ್ನ ನೆನೆದು ಶಿಷ್ಯ ಬಳಗ ಕಣ್ಣೀರು ಹಾಕಿದ್ದಾರೆ. ಹಾವೇರಿ ಹೊಸಮಠದ ಬಸವಶಾಂತ ಲಿಂಗ ಶ್ರೀಗಳು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಗುರುಗಳು ಆರೋಪದಿಂದ ದೋಷ ಮುಕ್ತರಾಗಿ ಹೊರಬರುತ್ತಾರೆ ಅಂತಾ ಆಶಾ ಭಾವನೆ ವ್ಯಕ್ತಪಡಿಸಿದ್ದಾರೆ.

ಮಠದ ಮುಂದಿನ ಪೀಠಾಧ್ಯಕ್ಷರು ಯಾರು ಎಂಬುವುದು ಚರ್ಚೆಗೆ ಗ್ರಾಸವಾಗಿದೆ. ಸದ್ಯ ಮುರುಘಾ ಮಠದ ಶಾಖ ಮಠವಾದ ಹೆಬ್ಬಾಳುವಿನ ಮಹಾಂತ ರುದ್ರಮಹಾಸ್ವಾಮಿಗಳು ಮಠದ ಪೂಜಾ ಕೈಂಕರ್ಯಗಳ ಕಾರ್ಯಕ್ಕೆ ನೇಮಕ ಮಾಡಲಾಗಿದೆ. ಎಸ್.ಜೆ.ಎಂ ವಿದ್ಯಾಪೀಠದ ಕಾರ್ಯದರ್ಶಿ ವಸ್ತ್ರದ​​​ ಮಠ ನೇಮಕವಾಗುವ ಸಾಧ್ಯತೆ ಇದೆ.

ಮತ್ತೊಂದೆಡೆ, ಕೋರ್ಟ್‌ನಲ್ಲಿ ವಿಚಾರಣೆ ಬಳಿಕ 3 ದಿನಗಳ ಪೊಲೀಸ್‌ ಕಸ್ಟಡಿಗೆ ಮುರುಘಾ ಶ್ರೀಗಳನ್ನು ಒಪ್ಪಿಸಲಾಯ್ತು.. ಸ್ವಾಮೀಜಿಯನ್ನು ಕಸ್ಟಡಿಗೆ ಪಡೆಯತ್ತಿದ್ದಂತೆ ಶ್ರೀಗಳ ಶಿಷ್ಯನಿಂದ ಆತ್ಮಹತ್ಯೆ ಯತ್ನ ನಡೀತು.
ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸೀಮೆ ಎಣ್ಣೆ ಸುರಿದುಕೊಂಡು ಯತ್ನಿಸಿದ್ರು. ಸ್ವಾಮೀಜಿ ತಪ್ಪು ಮಾಡಿಲ್ಲ. ನ್ಯಾಯ ಕೊಡಿ ಎಂದು ಕಣ್ಣೀರು ಹಾಕಿದ ಶಿಷ್ಯ.

ಒಟ್ಟಿನಲ್ಲಿ ಒಂದು ವಾರಗಳಿಂದ ತಿರುವು ಪಡೆದುಕೊಂಡಿದ್ದ ಪ್ರಕರಣದಲ್ಲಿ ಶಿವಮೂರ್ತಿಶ್ರೀಗಳು ಬಂಧನಕ್ಕೊಳಗಾಗಿದ್ದು, ಮಠದಲ್ಲಿ ಕಾರ್ಮೋಡದ ಛಾಯೆ ಆವರಿಸಿದೆ.

ವೀರೇಶ ಬಾರ್ಕಿ, ಪವರ್ ಟಿವಿ ಚಿತ್ರದುರ್ಗ

RELATED ARTICLES

Related Articles

TRENDING ARTICLES