Thursday, January 23, 2025

ಸೆ- 16ಕ್ಕೆ ರಚಿತಾ ಜೊತೆ ಡಾಲಿ ‘ಮಾನ್ಸೂನ್ ರಾಗ’ ಖಚಿತ

ನಟರಾಕ್ಷಸ ಡಾಲಿ ಧನಂಜಯ ಒಟ್ಟೊಟ್ಟಿಗೆ ಇಬ್ಬರು ನಟೀಮಣಿಯ ಜೊತೆ ಮಾನ್ಸೂನ್ ರಾಗ ಹಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗ್ಲೇ ರಿಲೀಸ್ ಡೇಟ್​ನ ಒಮ್ಮೆ ಪೋಸ್ಟ್​ಪೋನ್ ಮಾಡಿಕೊಂಡಿದ್ದ ಟೀಂ, ಇದೀಗ ಡೆಡ್​ಲೈನ್ ಫಿಕ್ಸ್ ಮಾಡಿ, ನೋಡುಗರಿಗೆ ಸರ್​ಪ್ರೈಸ್ ಕೊಟ್ಟಿದೆ. ಹಾಗಾದ್ರೆ ರಿಲೀಸ್ ಯಾವಾಗ..? ಲೇಟೆಸ್ಟ್ ಅಪ್ಡೇಟ್ಸ್ ಏನು ಅಂತೀರಾ..? ಈ ಸ್ಟೋರಿ ಓದಿ.

  • ಮತ್ತೊಮ್ಮೆ ಡೇರಿಂಗ್ ರೋಲ್​ನಲ್ಲಿ ಡಿಂಪಲ್ ಕ್ವೀನ್ ರಚ್ಚು
  • ನಟರಾಕ್ಷಸ ನಯಾ ಗೆಟಪ್.. ಡಾಲಿ ಡಬಲ್ ರೊಮ್ಯಾನ್ಸ್
  • ವಿಶ್ಯುವಲ್ ಟ್ರೀಟ್ ಜೊತೆ ಬದುಕಿನ ಮಜಲುಗಳ ಉತ್ಸವ

ವಿಖ್ಯಾತ್ ಸ್ಟುಡಿಯೋಸ್ ಬ್ಯಾನರ್​ನಲ್ಲಿ ಬರೋ ಒಂದೊಂದು ಸಿನಿಮಾ ಕೂಡ ಇಂಟೆನ್ಸ್ ಎಮೋಷನ್ಸ್​ನ ಹೊತ್ತು ಬರುತ್ತೆ. ಅಂಥದ್ದೇ ಜಾನರ್​ಗೆ ಸೇರೋ ಮತ್ತೊಂದು ಸಿನಿಮಾ ಈ ಮಾನ್ಸೂನ್ ರಾಗ. ಮುದ್ದಾದ ಟೈಟಲ್​ಗೆ ತಕ್ಕನಾಗಿ ಅಷ್ಟೇ ಮುದ್ದಾದ ಪಾತ್ರಗಳು ಚಿತ್ರದಲ್ಲಿವೆ. ನಟರಾಕ್ಷಸ ಡಾಲಿ ಧನಂಜಯ ಈ ಬಾರಿ ಒಂದು ವಿಭಿನ್ನ ಅಟೈರ್​ನಲ್ಲಿ ಕಾಣಸಿಗಲಿದ್ದಾರೆ.

ಯೆಸ್ ಪಂಚೆಯಲ್ಲಿ ಕಾಣೋ ಡಾಲಿ, ಈ ಚಿತ್ರದಿಂದ ಅವ್ರ ನಟನಾ ಸಾಮರ್ಥ್ಯ ಮತ್ತಷ್ಟು ಜನಕ್ಕೆ ವಿಸ್ತರಣೆ ಆಗಲಿದೆ. ಇನ್ನು ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಯಶಾ ಶಿವಕುಮಾರ್ ಹೀಗೆ ಇಬ್ಬಿಬ್ಬರ ಜೊತೆ ಡಬಲ್ ರೊಮ್ಯಾನ್ಸ್​ಗೆ ಸಜ್ಜಾಗಿದ್ದಾರೆ ಧನಂಜಯ. ಈಗಾಗ್ಲೇ ಟೀಸರ್​ ಸಖತ್ ಮೋಡಿ ಮಾಡಿತ್ತು. ಇದೀಗ ಸಾಂಗ್ಸ್ ಕೂಡ ಹಂಗಾಮ ಮಾಡ್ತಿದ್ದು, ಫ್ರೆಶ್ ಫೀಲ್ ಕೊಡ್ತಿವೆ.

ಅನೂಪ್ ಸೀಳಿನ್​ರ ಸಂಗೀತ ಕಿವಿ ಇಂಪಾಗಿಸೋದ್ರ ಜೊತೆಗೆ ಎಸ್​ಕೆ ರಾವ್ ಸಿನಿಮಾಟೋಗ್ರಫಿ ಕಣ್ಮನ ತಣಿಸಲಿದೆ. ಪ್ರೇಕ್ಷಕರಿಗೆ ವಿಶ್ಯುವಲ್ ಟ್ರೀಟ್ ಸಿಗಲಿದ್ದು, ಕ್ಲಾಸಿಕಲ್ ಮ್ಯೂಸಿಕ್ ಹಾಗೂ ಡ್ಯಾನ್ಸ್ ಫಾರ್ಮ್ಸ್​ನ ಇಲ್ಲಿ ಅಳವಡಿಸಲಾಗಿದೆ. ಅಚ್ಯುತ್​ರ ಮುದ್ದಾದ ಮರಕೋತಿ ಸಾಂಗ್ ದೊಡ್ಡ ಮಟ್ಟಕ್ಕೆ ಹಿಟ್ ಆಗಿದ್ದು, ಸುಹಾಸಿನಿ ಮಣಿರತ್ನಂ- ಅಚ್ಯುತ್ ಟ್ರ್ಯಾಕ್ ಸಖತ್ ಇಂಪ್ರೆಸ್ಸೀವ್ ಅನಿಸಿದೆ.

ರವೀಂದ್ರನಾಥ್ ನಿರ್ದೇಶನದ ಈ ಸಿನಿಮಾನ ವಿಖ್ಯಾತ್ ನಿರ್ಮಿಸಿದ್ದು, ಬಹುತೇಕ ಸಿನಿಮಾ ಮಳೆಯಲ್ಲೇ ಚಿತ್ರಿತವಾಗಿದೆ. ಸದಾ ಚಾಲೆಂಜಿಂಗ್ ರೋಲ್ಸ್​ನಲ್ಲಿ ಕಾಣಸಿಗೋ ಡಿಂಪಲ್ ಕ್ವೀನ್ ರಚಿತಾ ರಾಮ್, ಈ ಬಾರಿ ವೇಶ್ಯೆಯ ಪಾತ್ರ ಪೋಷಿಸಿದ್ದಾರೆ. ಇದು ನಿಜಕ್ಕೂ ಆಕೆಯ ಮೆಚ್ಯುರಿಟಿ ಲೆವೆಲ್ ಜೊತೆ ಒಬ್ಬ ಕಲಾವಿದೆಯಾಗಿ ಹೊಸತನಕ್ಕೆ ತುಡಿಯೋ ಮನಸ್ಥಿತಿಯನ್ನ ಹೇಳುತ್ತೆ.

ಯಶಾ ಶಿವಕುಮಾರ್​ರ ರೈನ್ ಸಾಂಗ್ ಸಂಚಲನ ಮೂಡಿಸಿತ್ತು. ಇದೀಗ ಮೇಘರಾಜನ ರಾಗ ಅನ್ನೋ ಸಾಂಗ್ ಕೂಡ ಎಲ್ಲದ ಮನಸ್ಸು ಗೆಲ್ಲುತ್ತಿದೆ. ರಿಲೀಸ್ ಡೇಟ್​ನ ಒಮ್ಮೆ ಪೋಸ್ಟ್​ಪೋನ್ ಮಾಡಿದ್ದ ಚಿತ್ರತಂಡ, ಇದೀಗ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳನ್ನ ಕಂಪ್ಲೀಟ್ ಆಗಿ ಮುಗಿಸಿ, ಇದೇ ಸೆಪ್ಟೆಂಬರ್ 16ಕ್ಕೆ ತೆರೆಗಪ್ಪಳಿಸುತ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES