ಶಿವಮೊಗ್ಗ : ಬಿಜೆಪಿಗೆ ಜನ ಬೆಂಬಲ ಕೊಡ್ತಿರುವುದಕ್ಕೆ ನಿನ್ನೆಯ ಕಾರ್ಯಕ್ರಮ ಸಾಕ್ಷಿಯಾಗಿದೆ. ಮೋದಿ ಎಲ್ಲಿ ಬರುತ್ತಾರೋ ಅಲ್ಲಿ ಜನರ ಸಂಚಲನ ಇರುತ್ತದೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ರಾಜ್ಯಕ್ಕೆ ಮೋದಿ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಇಂತಹ ಐವತ್ತು ಕಾರ್ಯಕ್ರಮಗಳನ್ನು ನಾವು ಮಾಡ್ತೇವೆ. ಬಿಜೆಪಿಗೆ ಜನ ಬೆಂಬಲ ಕೊಡ್ತಿರುವುದಕ್ಕೆ ನಿನ್ನೆಯ ಕಾರ್ಯಕ್ರಮ ಸಾಕ್ಷಿಯಾಗಿದೆ. ಮೋದಿ ಎಲ್ಲಿ ಬರುತ್ತಾರೋ ಅಲ್ಲಿ ಜನರ ಸಂಚಲನ ಇರುತ್ತದೆ. ಜನಜಾಗೃತಿ ಮೂಡಿಸಿ ದೇಶ ಭಕ್ತಿ ಮೂಢಿಸುವ ಪ್ರತೀಕ ಅಂದ್ರೆ ಮೋದಿ. ಮೋದಿ ಭೇಟಿಯಲ್ಲಿ ಚುನಾವಣೆ ವಿಚಾರ ಬರಲೇ ಇಲ್ಲ ಎಂದರು.
ಇನ್ನು, ಅವರ ಭಾಷಣದಲ್ಲಿ ಒಂದೇ ಒಂದು ರಾಜಕೀಯ ವಿಷಯ ಇರಲಿಲ್ಲ. ಅಭಿವೃದ್ಧಿ ಕಾರ್ಯದ ಬಗ್ಗೆ ಭಾಷಣ ಇತ್ತು. ಕಮಿಟಿ ಸಭೆಯಲ್ಲೂ 30-35 ನಿಮಿಷ ಇದ್ದರು. ನಿಜವಾದ ರಾಷ್ಟ್ರ ಭಕ್ತನನ್ನು ಪಡೆದದ್ದು ನಮ್ಮ ಪುಣ್ಯ. ಅವರು ರಾಜ್ಯಕ್ಕೆ ಭೇಟಿ ನೀಡಿದ್ದು ನಮಗೆಲ್ಲಾ ಸ್ಪೂರ್ತಿ ತುಂಬಿದೆ. ನಮ್ಮ ಬಲಗೈಗೆ ಶಕ್ತಿ ಬಂದಂತಾಗಿದೆ. ಸಿದ್ದರಾಮೋತ್ಸವಕ್ಕೆ 75 ಕೋಟಿ ಖರ್ಚು ಮಾಡಿ ಜನರನ್ನು ಕರೆ ತಂದರು. ಆದರೆ ಮೋದಿ ಕಾರ್ಯಕ್ರಮದಲ್ಲಿ ಜನ ಸ್ವ ಇಚ್ಛೆಯಿಂದ ಬಂದಿದ್ದರು. ಸಿದ್ದರಾಮೋತ್ಸವ ಇಡೀ ರಾಜ್ಯದ ಕಾರ್ಯಕ್ರಮ ಆಗಿದ್ದರೇ ಮೋದಿ ಕಾರ್ಯಕ್ರಮ ಒಂದು ಜಿಲ್ಲೆಯದ್ದಾಗಿತ್ತು ಎಂದು ಹೇಳಿದರು.
ಮುರುಘಾ ಶ್ರೀ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮಠದ ಸ್ವಾಮಿಗಳು ಅಂದ್ರೆ ನನಗೆ ದೇವರಿದ್ದಂತೆ. ಮುರುಘಾ ಶ್ರೀ ಬಗ್ಗೆ ನನಗೆ ಗೌರವ ಕಡಿಮೆ ಆಗಿಲ್ಲ. ತನಿಖೆ ನಡೆಯುತ್ತಿದೆ ಸತ್ಯವೋ ಸುಳ್ಳೋ ಹೊರಗೆ ಬರಲಿ. ಮಠ ಮಂದಿರ ಭಕ್ತಿ, ಜಾಗೃತಿ ಉಂಟು ಮಾಡುತ್ತದೆ ಎಂದರು.