ಕೇರಳ : ಇಂದಿನ ಜಗತ್ತು ಸಾಕಷ್ಟು ತಂತ್ರಜ್ಞಾನಾಧಾರಿತವಾಗಿದೆ. ಪ್ರಪಂಚದ ಪ್ರಬಲ ದೇಶಗಳು ತಮ್ಮ ರಕ್ಷಣೆಗೆ ಸಂಬಂಧಿಸಿದಂತೆ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿರುವ ಶಸ್ತ್ರಾಸ್ತ್ರಗಳನ್ನು ಹೊಂದುವಲ್ಲಿ ನಿರತವಾಗಿವೆ. ಇತ್ತೀಚಿನ ಕೆಲ ವರ್ಷಗಳಿಂದ ತನ್ನನ್ನು ತಾನು ಸಕ್ಷಮಗೊಳಿಸಿಕೊಳ್ಳುತ್ತಿದ್ದು ದೇಶೀಯವಾಗಿಯೇ ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲೂ ಪ್ರಗತಿ ಕಾಣುತ್ತಿದೆ.
ಭಾರತದ ಪಾಲಿಗೆ ಅದರಲ್ಲೂ ವಿಶೇಷವಾಗಿ ಭಾರತೀಯ ಸೇನೆಯ ಪಾಲಿಗೆ ಈ ದಿನ ಬಲು ವಿಶಿಷ್ಟವಾಗಿದೆ. ಏಕೆಂದರೆ, ಇಂದು ದೇಶೀಯವಾಗಿಯೇ ನಿರ್ಮಿಸಲಾದ ಯುದ್ಧ ವಿಮಾನಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವಿರುವ ಯುದ್ಧನೌಕೆ ಅಥವಾ ಏರ್ಕ್ರಾಫ್ಟ್ ಕ್ಯಾರಿಯರ್ ಆಗಿರುವ ಐಎನ್ಎಸ್ ವಿಕ್ರಾಂತ್ ಯುದ್ಧ ನೌಕೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೊಚ್ಚಿಯ ಶಿಪ್ ಯಾರ್ಡ್ನಲ್ಲಿ ಅನಾವರಣಗೊಳಿಸಿದ್ದಾರೆ.
ಇಂದಿನಿಂದ ಈ ಏರ್‌ಕ್ರಾಫ್ಟ್ ಕ್ಯಾರಿಯರ್ ಭಾರತೀಯ ಸೇನೆಗಾಗಿ ಕಾರ್ಯಾರಂಭ ಮಾಡಲಿದೆ. ಈ ಮೂಲಕ ಭಾರತ ತನ್ನ ಸೈನ್ಯ ಸಾಮರ್ಥ್ಯವನ್ನು ಇನ್ನೊಂದು ಪ್ರಬಲ ಹೆಜ್ಜೆಯ ಮೂಲಕ ಹೆಚ್ಚಿಸಿಕೊಂಡಂತಾಗಿದೆ.