Wednesday, January 22, 2025

ಬಿಡಿಎ ಅಧ್ಯಕ್ಷ ಎಸ್​.ಆರ್​ ವಿಶ್ವನಾಥ್​ಗೆ ಹೈಕೋರ್ಟ್​ ರಿಲೀಫ್

ಬೆಂಗಳೂರು: ಬಿಡಿಎ(ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಅಧ್ಯಕ್ಷ ಎಸ್​.ಆರ್​ ವಿಶ್ವನಾಥ್​ಗೆ ಇಂದು ಹೈಕೋರ್ಟ್​ ರಿಲೀಫ್​ ನೀಡಿದೆ.

ಶಾಸಕರಾಗಿ ಲಾಭದಾಯಕ ಹುದ್ದೆ ಹೊಂದಿದ್ದಾರೆ ಅಂತಾ ಬಿಡಿಎ ಅಧ್ಯಕ್ಷ ವಿಶ್ವನಾಥ್​ ಅವರ ನೇಮಕಾತಿ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಎಸ್.ಆರ್ ವಿಶ್ವನಾಥ್ ಅವರ ಶಾಸಕ ಸ್ಥಾನವನ್ನೂ ಅನರ್ಹಗೊಳಿಸುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಬಿಡಿಎ ಅಧ್ಯಕ್ಷರ ನೇಮಕಾತಿಯನ್ನ ರದ್ದುಪಡಿಸಲು ನಿರಾಕರಿಸಿದೆ. ಬಿಡಿಎ ಅಧ್ಯಕ್ಷ, ಸದಸ್ಯರ ನೇಮಕಕ್ಕೆ ಹೊಸ ನಿಯಮ ಸಿದ್ದಪಡಿಸುವಂತೆ ಸರ್ಕಾರಕ್ಕೆ ಈ ವೇಳೆ ಹೈಕೋರ್ಟ್​ ಸೂಚನೆ ನೀಡಿದೆ.

ಇನ್ನು ಹೈಕೋರ್ಟ್ ಆದೇಶವನ್ನ ಎಸ್.ಆರ್ ವಿಶ್ವನಾಥ್ ಸ್ವಾಗತಿಸಿದ್ದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಕಠಿಣ ಕ್ರಮಗಳನ್ನ ತೆಗೆದುಕೊಳ್ತಿರೋದ್ರಿಂದ ಕೆಲವರು ಕೋರ್ಟ್ ಗೆ ಹೋಗ್ತಿದ್ದಾರೆ ಎಂದರು.

RELATED ARTICLES

Related Articles

TRENDING ARTICLES