ಬೆಂಗಳೂರು : ಭೂಗಳ್ಳರಿಗೆ ನನ್ನಿಂದ ಒಳ್ಳೆಯದಾಗರೋ ಒಂದು ತೀರ್ಮಾನ ನಾನು ತೆಗೆದುಕೊಂಡಿರೋದು ತೋರಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಬಗ್ಗೆ ಸಿಎಂ ಏನ್ ಬೇಕಾದ್ರ ಮಾತಾಡಲಿ. ನನ್ನ ಬಗ್ಗೆ ಮಾತಾಡೋವಾಗ ನೋಡಿಕೊಂಡು ಮಾತಾಡಲಿ. ಫೆರಿಫೆರಲ್ ರಿಂಗ್ ರೋಡ್ ಗೆ 6 ಸಾವಿರ ಕೋಟಿ ಯೋಜನೆ ರೂಪಿಸಿದ್ದೆ. ಇಂದು 22 ಸಾವಿರ ಕೋಟಿ ಆಗಿದೆ. ಇದು ಕಾಂಗ್ರೆಸ್ ಬಿಜೆಪಿಯ ಸಾಧನೆ ಎಂದರು.
ಇನ್ನು, ರಾಜಕಾಲುವೆ ಅಭಿವೃದ್ಧಿಗೆ ಸಾವಿರಾರು ಕೋಟಿ ರಿಲೀಸ್ ಮಾಡಿದ್ದೀನಿ ಅಂತ ಸಿಎಂ ಹೇಳ್ತಾರೆ. ಹಾಗಾದರೆ ಅ ಹಣ ಯಾರ ಮನೆಗೆ ಹೋಯ್ತು. ಬಿಬಿಎಂಪಿ ಅವರ ಕೈಯಲ್ಲಿ ಇತ್ತು. ಏನ್ ಮಾಡಿದ್ರು ಬೆಂಕಿ ಇಟ್ಟಿದ್ದೆ ಅವರ ಸಾಧನೆ. ನನ್ನ ಎರಡು ಅವಧಿಯಲ್ಲಿ ಅಕ್ರಮಕ್ಕೆ ಪೋಷಣೆ ಮಾಡಿರೋ ದಾಖಲಾತಿ ಬಿಡುಗಡೆ ಮಾಡಲಿ. ಸರ್ಕಾರಿ ಜಮೀನು ಲೂಟಿ ಹೊಡೆಯೋ ಬಗ್ಗೆ ಸದನ ಸಮಿತಿ ಮಾಡಿದ್ದೆ. ಯಾರ್ ಕಾಲದಲ್ಲಿ ಏನ್ ಆಗಿದೆ ಅಂತ ಸಿಎಂ ಶ್ವೇತ ಪತ್ರ ಹೊರಡಿಸಲಿ ಎಂದು ಹೇಳಿದರು.
ಕೆಂಪೇಗೌಡ ಪ್ರತಿಮೆ ಉದ್ಘಾಟನಾ ಅಭಿಯಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈಗೇನೋ ಕೆಂಪೇಗೌಡ ಏರ್ ಫೊರ್ಟ್ ನಲ್ಲಿ ಮಣ್ಣು ಸಂಗ್ರಹ ಮಾಡಿ ಥೀಮ್ ಪಾರ್ಕ್ ಮಾಡ್ತೀನಿ ಅಂತಿದ್ದಾರೆ. ಅಮರಾವತಿ ಕಟ್ಟಲು ಮಣ್ಣು ತಂದರು ಮೋದಿ. ಏನ್ ಆಯ್ತು. ಈಗ ರಾಜ್ಯದಲ್ಲಿ ಮಣ್ಣಿನ ಸಂಗ್ರಹ ಅಂತೆ. ಮೊದಲು ಮಳೆಯಿಂದ ಆಗಿರೋ ಸಮಸ್ಯೆಯ ಜನರಿಗೆ, ರೈತರಿಗೆ ಅನುಕೂಲ ಮಾಡಿಕೊಡ್ರಪ್ಪ. ಇವರದ್ದೆಲ್ಲ ಕೇವಲ ಪ್ರಚಾರ ಅಷ್ಟೆ. ಕಳೆದ ಬಾರಿ ಸಿಎಂ ಪ್ರದಕ್ಷಿಣೆ ಹಾಕಿದ್ರು. ಸಮಸ್ಯೆ ಪರಿಹಾರ ಆಗಿಲ್ಲ. ಇದಕ್ಕಿಂತ ಉದಾಹರಣೆ ಬೇಕಾ? ಎಂದು ಸಿಎಂ ವಿರುದ್ದ ಕುಮಾರಸ್ವಾಮಿ ಕಿಡಿಕಾಡಿದ್ದಾರೆ.