Thursday, December 19, 2024

ಶರಣ್- ತರುಣ್ ಮಹಾ ವೇದಿಕೆ ಸಿದ್ಧ.. 23ಕ್ಕೆ ಗುರುಶಿಷ್ಯರು..!

ಸ್ಯಾಂಡಲ್​ವುಡ್ ಅಧ್ಯಕ್ಷ ಶರಣ್ ಇದೀಗ ಚಿತ್ರರಂಗಕ್ಕೆ ಗುರುಗಳಾಗಲು ಹೊರಟಿದ್ದಾರೆ. ಭರ್ಜರಿಯಾಗಿ ಶಿಷ್ಯರ ತಂಡ ಕಟ್ಟಿ ಬೊಂಬಾಟ್ ಪ್ರಾಕ್ಟೀಸ್ ಕೂಡ ಮಾಡಿದ್ದಾರೆ. ಇನ್ನೇನಿದ್ರೂ ಅಖಾಡಕ್ಕೆ ಇಳಿಯೋದೊಂದೇ ಬಾಕಿ. ಯೆಸ್.. ಶರಣ್- ತರುಣ್ ಕುಚಿಕುಗಳ ಗುರು ಶಿಷ್ಯರು ರಿಲೀಸ್ ಡೇಟ್ ಜೊತೆ ಟ್ರೈಲರ್ ಲಾಂಚ್ ಇವೆಂಟ್​ನ ಎಕ್ಸ್​ಕ್ಲೂಸಿವ್ ಸ್ಟೋರಿ ನೀವೇ ಓದಿ.

  • ಹೊಸ ತಲೆಮಾರಿನ ಪ್ರತಿಭೆಗಳ ತಂಡ ಈ ಸ್ಪೆಷಲ್ ಶಿಷ್ಯ ಬಳಗ
  • ಸೆಪ್ಟೆಂಬರ್ 4ಕ್ಕೆ ಟ್ರೈಲರ್ ಲಾಂಚ್ ಇವೆಂಟ್.. ಚಿತ್ರರಂಗ ಸಾಕ್ಷಿ
  • ಇದು ಸ್ಯಾಂಡಲ್​ವುಡ್ ಅಧ್ಯಕ್ಷ ವೃತ್ತಿ ಬದುಕಿನ ಸ್ಪೆಷಲ್ ಚಿತ್ರ..!

ಯೆಸ್.. ಟೈಟಲ್ ಮತ್ತು ಸ್ಪೆಷಲ್ ಕಾಂಬೋನಿಂದಲೇ ಅತೀವ ನಿರೀಕ್ಷೆ ಮೂಡಿಸಿದ್ದ ಗುರು ಶಿಷ್ಯರು ಚಿತ್ರತಂಡ, ಇದೀಗ ಟ್ರೈಲರ್ ಲಾಂಚ್ ಮಾಡೋಕೆ ಮುಹೂರ್ತ ನಿಗದಿ ಮಾಡಿದೆ. ಇದೇ ಸೆಪ್ಟೆಂಬರ್ 4, ಭಾನುವಾರ ಸಂಜೆ ನಗರದ ಖಾಸಗಿ ಹೋಟೆಲ್​ನಲ್ಲಿ ಟ್ರೈಲರ್ ಲಾಂಚ್ ಇವೆಂಟ್ ನಡೆಯಲಿದ್ದು, ಚಿತ್ರರಂಗದ ಸಾಕಷ್ಟು ಗಣ್ಯರು ಅದಕ್ಕೆ ಸಾಕ್ಷಿ ಆಗಲಿದ್ದಾರೆ.

ಜಂಟಲ್​ಮನ್ ಡೈರೆಕ್ಟರ್ ಜಡೇಶ್ ಕೆ ಹಂಪಿ ಸಾರಥ್ಯದಲ್ಲಿ ತಯಾರಾಗಿರೋ ಈ ಸಿನಿಮಾ ಶರಣ್ ವೃತ್ತಿ ಬದುಕಿನ ಮಹತ್ವದ ಸಿನಿಮಾ ಆಗಲಿದೆ. ಕಾರಣ ಇದೊಂದು ಸ್ಫೋರ್ಟ್ಸ್ ಬೇಸ್ಡ್ ಸಿನಿಮಾ ಆಗಿದ್ದು, ಸಿಕ್ಕಾಪಟ್ಟೆ ಫನ್ ಜೊತೆ ಬೇಜಾನ್ ಎಮೋಷನ್ಸ್​ನಿಂದ ತುಂಬಿರಲಿದೆ. ವಿಶೇಷ ಅಂದ್ರೆ ಸ್ಯಾಂಡಲ್​ವುಡ್ ಅಧ್ಯಕ್ಷ ಶರಣ್, ಗುರುಗಳಾಗಿ ಕಲಾವಿದರ ಮಕ್ಕಳೊಂದಿಗೆ ಹೊಸ ಶಿಷ್ಯರ ತಂಡ ಕಟ್ಟಿರೋದು ವಿಶೇಷ.

ನಟ ಶರಣ್​ಗೆ ಈ ಬಾರಿ ಅವ್ರ ಆತ್ಮೀಯ ಗೆಳೆಯ ತರುಣ್ ಸುಧೀರ್ ಕ್ರಿಯೇಟೀವ್ ಹೆಡ್ ಆಗಿ ಕೆಲಸ ಮಾಡೋದ್ರ ಜೊತೆಗೆ ಸಿನಿಮಾ ನಿರ್ಮಾಣದ ಜವಾಬ್ದಾರಿ ಕೂಡ ಹೊತ್ತಿದ್ದಾರೆ. ಯೆಸ್.. ಶರಣ್​ರ ಹೋಮ್ ಬ್ಯಾನರ್ ಲಡ್ಡು ಸಿನಿಮಾ ಹೌಸ್ ಜೊತೆ ತರುಣ್​ರ ತರುಣ್ ಸುಧೀರ್ ಕ್ರಿಯೇಟೀವ್ಸ್ ಬ್ಯಾನರ್ ಸೇರಿ ಗುರು ಶಿಷ್ಯರು ಚಿತ್ರವನ್ನು ನಿರ್ಮಿಸಿದೆ.

ಅಂದಹಾಗೆ ಶರಣ್ ನಾಯಕನಟನಾದ ಮೇಲೆ ಅವ್ರ ಬಹುತೇಕ ಎಲ್ಲಾ ಸಿನಿಮಾಗಳ ಹಿಂದಿನ ಅಸಲಿ ಮಾಸ್ಟರ್​ಮೈಂಡ್ ತರುಣ್ ಆಗಿದ್ರು. ಱಂಬೊ, ವಿಕ್ಟರಿ, ಅಧ್ಯಕ್ಷ, ಱಂಬೊ 2, ವಿಕ್ಟರಿ 2 ಹೀಗೆ ಸಕ್ಸಸ್​ನ ಪಾಲು ಬರಹಗಾರ ಕಮ್ ಕ್ರಿಯೇಟೀವ್ ಹೆಡ್ ತರುಣ್​ರಿಗೂ ಸಲ್ಲುತ್ತೆ. ಆದ್ರೆ ತರುಣ್ ಸ್ವತಂತ್ರವಾಗಿ ನಿರ್ದೇಶಕರಾದ ಬಳಿಕ ಶರಣ್ ಸಿನಿಮಾಗಳಿಗೆ ಕೆಲಸ ಮಾಡಲು ಸಮಯ ಹೊಂದಾಣಿಕೆ ಆಗ್ತಿಲ್ಲ. ಇದೀಗ ಗುರು ಶಿಷ್ಯರು ಚಿತ್ರಕ್ಕಾಗಿ ಈ ಹಿಟ್ ಕಾಂಬೋ ಒಂದಾಗಿದ್ದು, ಮತ್ತೊಮ್ಮೆ ಬೆಸ್ಟ್ ಕಾಂಬೋ ಆಗಿ ಹೊರಹೊಮ್ಮಲಿದೆ.

ಶರಣ್ ಜೊತೆ ದತ್ತಣ್ಣ ಹಾಗೂ ನಿಶ್ವಿಕಾ ನಾಯ್ಡು ಲೀಡ್​ನಲ್ಲಿದ್ದು, ಈಗಾಗ್ಲೇ ಆಣೆ ಮಾಡಿ ಹೇಳುತೀನಿ ಸಾಂಗ್ ಎಲ್ಲರ ದಿಲ್ ದೋಚಿದೆ. ದೇಸಿ ಕ್ರೀಡೆ ಕೋಕೋ ಕುರಿತ ಈ ಕ್ರೀಡೆ ಅದೆಷ್ಟೋ ಮಂದಿಯನ್ನ ಮತ್ತೆ ತಮ್ಮ ಶಾಲಾ ದಿನಗಳತ್ತ ಕರೆದೊಯ್ಯಲಿದೆ. ಅಲ್ಲದೆ ಟಗರು, ಸಲಗ ರೈಟರ್ ಮಾಸ್ತಿ ಬರಹದಲ್ಲಿ ಗುರು ಶಿಷ್ಯರ ಗಮ್ಮತ್ತು ಕೊಂಚ ಜೋರೇ ಇರಲಿದೆ.

ಒಟ್ಟಾರೆ ಟ್ರೈಲರ್ ಲಾಂಚ್​ಗೆ ಮುಹೂರ್ತ ಫಿಕ್ಸ್ ಮಾಡಿರೋ ಚಿತ್ರತಂಡ, ಇದೇ ಸೆಪ್ಟೆಂಬರ್ 23ಕ್ಕೆ ಗುರು- ಶಿಷ್ಯರನ್ನ ಥಿಯೇಟರ್ ಪರದೆಗೆ ಕರೆತರುತ್ತಿದ್ದಾರೆ. ಈ ಸಿನಿಮಾ ಗೆಳೆಯರ ಬಳಗದ ಚಿತ್ರವಾಗಿದ್ದು, ಒಂದಷ್ಟು ಇಂಟೆನ್ಸ್ ಆನ್ ಆ್ಯಂಡ್ ಆಫ್ ಸ್ಕ್ರೀನ್ ಎಮೋಷನ್ಸ್​ನಿಂದ ಕೂಡಿರಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES